ಬೆಂಗಳೂರು:ಸೈಟ್​ ಖರೀದಿಸಲು ಮುಂದಾದ ಸ್ಯಾಂಡಲ್​ವುಡ್​ನ ನಾಯಕನಟ ಮಯೂರ್​ ಪಟೇಲ್​ಗೆ ಕೊಲೆಬೆದರಿಕೆ ಎದುರಾಗಿದೆ. ಸೈಟ್​ ನೋಡಲು ಸ್ನೇಹಿತನೊಂದಿಗೆ ಹೋಗಿದ್ದ ಮಯೂರ್ ಪಟೇಲ್​ಗೆ ಅಪರಿಚಿತರು ಬೆದರಿಕೆ ಹಾಕಿದ್ದು, ಪ್ರಕರಣ ಸಂಬಂಧ ಎಚ್​ಎಸ್​ಆರ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಬೇಗೂರ್ ಬಳಿಯ ಪರಂಗಿಪಾಳ್ಯದ ಬಿಬಿಎಂಪಿ ಖಾತೆ ನಂ. 275/16/18ರ ಸೈಟ್ ಖರೀದಿಸಲು ಮುಂದಾಗಿದ್ದ ಮಯೂರ್, ಎಂ.ಎಸ್​. ಸುಬ್ರಹ್ಮಣ್ಯ ಎಂಬವರಿಂದ ಕರಾರು ಮಾಡಿಕೊಂಡಿದ್ದರು. ಹೀಗಾಗಿ ಜನವರಿ 22ರಂದು ಗೆಳೆಯನೊಂದಿಗೆ ಸೈಟ್ ನೋಡಲು ಪರಂಗಿಪಾಳ್ಯಕ್ಕೆ ಹೋಗಿದ್ದರು.
ಇದನ್ನೂ ಓದಿ:ಈ ರಾಶಿಯವರಿಗೆ ಇಂದು ಪತ್ನಿಯೊಂದಿಗೆ ಮುನಿಸು ತರವಲ್ಲ: ನಿತ್ಯಭವಿಷ್ಯ
ಆದರೆ ಮಯೂರ್ ಪಟೇಲ್ ಕರಾರು ಮಾಡಿಕೊಂಡಿದ್ದ ಸೈಟ್​​ಗೆ ಯಾರೋ ಕಾಂಪೌಂಡ್​ ಹಾಕಿದ್ದು, ಅಲ್ಲಿಗೆ ಭೇಟಿ ನೀಡಿದ್ದ ವೇಳೆ ಎದುರಾದ ಅಪರಿಚಿತರು, ಈ ಸೈಟ್ ಅನಂತರಾಮರೆಡ್ಡಿ ಹಾಗೂ ಗನ್ ಮಂಜಣ್ಣ ಎನ್ನುವವರಿಗೆ ಸೇರಿದೆ. ನೀವು ಇಲ್ಲಿಗೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಬೆದರಿಕೆ ಹಾಕಿದ್ದರು.
ಆಗ ಮಯೂರ್ ಪಟೇಲ್​ ಅನಂತರಾಮರೆಡ್ಡಿ ಎಂಬಾತನನ್ನು ಸಂಪರ್ಕಿಸಿದ್ದರು. ಆಗ ಆ ಜಾಗ ನಾನು ನನ್ನ ಮಗನ ಹೆಸರಿಗೆ ದಾನಪತ್ರ ಮಾಡಿಕೊಟ್ಟಿದ್ದೇನೆ. ಅಲ್ಲಿಗೆ ಯಾರನ್ನೂ ಬಿಡುವುದಿಲ್ಲ. ನೀನು ಆ ಜಾಗಕ್ಕೆ ಬಾ, ಆಗ ನಾವು ಯಾರು ಎಂಬುದು ಗೊತ್ತಾಗುತ್ತದೆ ಎಂದು ಅನಂತರಾಮರೆಡ್ಡಿ ಬೆದರಿಕೆ ಹಾಕಿದ್ದಾಗಿ ಮಯೂರ್ ದೂರಿನಲ್ಲಿ ತಿಳಿಸಿರುತ್ತಾರೆ.
ಇದನ್ನೂ ಓದಿ:ಅತ್ತೆ ಮಗಳಿಗಾಗಿ 64 ಲಕ್ಷ ರೂ. ಕದ್ದ!; ಆಕೆ ಗಂಡನನ್ನು ಬಿಟ್ಟಿದ್ದಳು, ಇವನು ಅವಳಿಗಾಗಿ ಹೆಂಡತಿಯನ್ನೇ ಬಿಟ್ಟು ಪರಾರಿ…
ನಾನು ಅಗ್ರಿಮೆಂಟ್​ ಮಾಡಿಕೊಂಡಿರುವ ಸೈಟ್​​ಗೆ ಅಕ್ರಮವಾಗಿ ಕಾಂಪೌಂಡ್​ ನಿರ್ಮಿಸಿದ್ದಾರೆ. ನಕಲಿ ದಾಖಲಾತಿ ಸೃಷ್ಟಿಸಿಕೊಂಡು ಅನಂತರಾಮರೆಡ್ಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅನಂತರಾಮರೆಡ್ಡಿ, ಆತನ ಪುತ್ರ ಮಂಜುನಾಥ ರೆಡ್ಡಿ ಹಾಗೂ ಇತರ ನಾಲ್ವರ ವಿರುದ್ಧ ಎಚ್​ಎಸ್​ಆರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಪ್ಯಾಂಟ್‌ ಜಿಪ್‌ ತೆಗೆಯುವುದು, ಬಟ್ಟೆಯ ಮೇಲಿನಿಂದ ಅಂಗ ಮುಟ್ಟುವುದು… ವಿವಾದಿತ ಲೇಡಿ ಜಡ್ಜ್‌ಗೆ ಬಡ್ತಿ ಕಟ್‌!

ತುಂಬು ಗರ್ಭಿಣಿಯನ್ನು ಜೀವಂತ ಸುಟ್ಟ, ಮಾಡಬಾರದ್ದನ್ನು ಮಾಡಿದ್ದ ಗಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 12 =
Remember me
