ಬೆಳಗಾವಿ:ಶ್ರೀಗಳೊಬ್ಬರಿಗೆ ನಿರಂತರವಾಗಿ ಜೀವಬೆದರಿಕೆ ಕರೆ ಬರುತ್ತಿದ್ದು, ಸ್ವಾಮೀಜಿ ಈ ಕುರಿತು ಪ್ರತಿಕ್ರಿಯಿಸಿ ನನಗೆ ಸಾವಿನ ಭಯವಿಲ್ಲ ಎಂದಿದ್ದಾರೆ. ಮತ್ತೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ.
ಬೆಳಗಾವಿ ಜಿಲ್ಲೆಯ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಶ್ರೀಗಳಿಗೆ ಜೀವಬೆದರಿಕೆ ಪತ್ರ ಬಂದಿರುತ್ತದೆ. ಸುಮಾರು ನಾಲ್ಕೈದು ವರ್ಷಗಳಿಂದ ಇಂತಹ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಒಬ್ಬನೇ ವ್ಯಕ್ತಿ ಜೀವ ಬೆದರಿಕೆ ಪತ್ರ ಬರೆಯುತ್ತಿದ್ದಾನೆ, ಒಂದೇ ಹಸ್ತಾಕ್ಷರ ಇದೆ, ಹೆಸರು ಇಲ್ಲ, ಯಾವುದೇ ದ್ವೇಷದ ಉದ್ದೇಶ ಪತ್ರಿಕೆಗಳಿಲ್ಲ, ಸೈದ್ಧಾಂತಿಕ ಹೋರಾಟದ ಬಗ್ಗೆ ದ್ವೇಷ ಇಟ್ಟುಕೊಂಡು ಪತ್ರ ಬರೆಯುತ್ತಿದ್ದಾನೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.ಹದಿನೈದು ದಿನಗಳ ಹಿಂದೆ ನನಗೆ ಬೆದರಿಕೆ ಪತ್ರ ಬಂದಿದೆ. ಈ ಕುರಿತು ಈಗಾಗಲೇ ಕಿತ್ತೂರು ಪೊಲೀಸರಿಗೆ ದೂರು ನೀಡಿದ್ದೇನೆ. ಪ್ರತಿಸಲ ಸಲ ಒಂದೊಂದು ಕಡೆಯಿಂದ ಪತ್ರ ಬರೆಯುತ್ತಿದ್ದಾನೆ. ಶಿವಮೊಗ್ಗ, ಮೈಸೂರು, ಧಾರವಾಡ, ದಾವಣಗೆರೆ ಹೀಗೆ ಬೇರೆ ಬೇರೆ ಕಡೆಗಳಿಂದ ಪತ್ರಗಳು ಬರುತ್ತಿವೆ ಎಂದು ಸ್ವಾಮೀಜಿ ಹೇಳಿದ್ದಾರೆ.
ನನಗೆ ಸಾವಿನ ಬಗ್ಗೆ ಯಾವುದೇ ಭಯವಿಲ್ಲ. ಆದರೆ ಸಮಾಜಕ್ಕೆ ನಮ್ಮ ಸೇವೆ ನಿಂತು ಹೋಗುತ್ತದೆ ಎನ್ನುವ ಚಿಂತೆ ಇದೆ. ಸರ್ಕಾರ ಇದರ ಹಿಂದೆ ಯಾರು ಇದ್ದಾರೆ ಎನ್ನುವುದನ್ನು ಆದಷ್ಟೂ ಬೇಗ ಪತ್ತೆ ಮಾಡಬೇಕು. ಎಂ.ಎಂ.ಕಲ್ಬುರ್ಗಿ, ದಾಬಲಕರ್, ಗೌರಿ ಲಂಕೇಶ್ ಅಂಥವರ ಹತ್ಯೆಯಾಗಿದೆ. ಸತ್ಯದ ವಿಚಾರವನ್ನು ಹೇಳುವವರಿಗೆ, ಬಸವಾದಿ ಶರಣರ ವಿಚಾರವನ್ನು ಹೇಳುವವವರಿಗೆ ಇಂತಹ ಬೆದರಿಕೆ ಬರುತ್ತಿದೆ. ಬಸವಣ್ಣನವರ ಕಾಲದಿಂದಲೂ ಇದು ಬೇರೆ ಬೇರೆ ಮುಖಗಳಲ್ಲಿ ನಡೆದಿದೆ. ಪ್ರಜಾಪ್ರಭುತ್ವ ಕಾಲದಲ್ಲೂ ಇಂತಹ ಬೆದರಿಕೆಗಳು ನಿಂತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಭು ಪರಂಪರೆಯಲ್ಲಿ ಆಗಬಹುದು, ಆದರೆ ಪ್ರಜಾಪ್ರಭುತ್ವದಲ್ಲಿ ಇಂತಹ ರೀತಿ ಆಗಬಾರದು ಎನ್ನುವುದು ನಮ್ಮ ಕೋರಿಕೆ. ಪೊಲೀಸರಿಗೆ ಈಗಾಗಲೇ ದೂರು ನೀಡಿದ್ದೇನೆ. ಗೃಹ ಇಲಾಖೆಗೆ ಪತ್ರ ಬರೆದಿದ್ದೇನೆ, ಮುಖ್ಯಮಂತ್ರಿ ಅವರಿಗೂ ಪತ್ರಗಳನ್ನು ತೋರಿಸುತ್ತೇನೆ. ಶೀಘ್ರದಲ್ಲೇ ಗೃಹಸಚಿವ ಪರಮೇಶ್ವರ ಅವರ ಗಮನಕ್ಕೂ ತರುತ್ತೇನೆ ಎಂದು ಸ್ವಾಮೀಜಿ ಹೇಳಿದ್ದಾರೆ.
‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × 3 =
Remember me
