ಪ್ರಯಾಣದ ಅವಧಿ ಕಡಿಮೆಗೊಳಿಸಿರುವ ಎಕ್ಸ್​ಪ್ರೆಸ್ ವೇ, ರಾಷ್ಟ್ರೀಯ ಹೆದ್ದಾರಿಗಳು ಅಪಘಾತದ ರಹದಾರಿಗಳಾಗಿ ಬದಲಾಗುತ್ತಿದೆ. ಇಂತಹ ಸಮಯದಲ್ಲಿ ಸಾವು, ನೋವು ತಗ್ಗಿಸುವ ಉದ್ದೇಶದಿಂದ ಹೆದ್ದಾರಿ ಸಮೀಪವೇ ಟ್ರಾಮಾ ಸೇವೆ ಒದಗಿಸಲು ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ.
ಅಪಘಾತ, ಸುಟ್ಟಗಾಯಗಳ ತಡೆಗಟ್ಟುವಿಕೆ,ನಿರ್ವಹಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮದ ಮಾರ್ಗಸೂಚಿ ಅನ್ವಯ ಆಪಘಾತ ಪ್ರಕರಣಗಳಿಗೆ ಟ್ರಾಮಾ ಸೇವೆ ಒದಗಿಸಲು ನಿರ್ಧರಿಸಲಾಗಿದೆ. 45 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ 146 ಆರೋಗ್ಯ ಕೇಂದ್ರಗಳ ತುರ್ತು ನಿಗಾ ಘಟಕ ಮೇಲ್ದರ್ಜೆಗೇರಿಸಲಾಗುತ್ತಿದೆ. ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಹಯೋಗದಲ್ಲಿ ಆರೋಗ್ಯ ಇಲಾಖೆ ಈ ಯೋಜನೆ ಕೈಗೊಂಡಿದೆ. ಇದಕ್ಕಾಗಿ ಪ್ರಾಧಿಕಾರ ಬ್ಲಾ್ಯಕ್ ಸ್ಪಾಟ್​ಗಳೆಂದು ಗುರುತಿಸಲಾಗುವ ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳ ಪಟ್ಟಿ ಸಿದ್ಧಪಡಿಸಿದೆ. ಹೆದ್ದಾರಿಯುದ್ದಕ್ಕೂ ಇರುವ ಆಸ್ಪತ್ರೆಗಳು, ನುರಿತ ವೈದ್ಯರ ಸೇವೆ ಸಮರ್ಪಕವಾಗಿ ಬಳಸಿಕೊಳ್ಳುವುದು ಆರೋಗ್ಯ ಇಲಾಖೆ ಉದ್ದೇಶ.
ಬ್ಲ್ಯಾಕ್​​ಸ್ಪಾಟ್ ಪತ್ತೆ ಹೇಗೆ?
3 ವರ್ಷದಲ್ಲಿ ಒಂದೇ ಸ್ಥಳದಲ್ಲಿ 5 ಅಪಘಾತ ಆಗಿರುವ ಸ್ಥಳ ? ಆ ಸ್ಥಳವನ್ನು ಬ್ಲಾ್ಯಕ್​ಸ್ಪಾಟ್ ಎಂದು ಗುರುತಿಸಲಾಗುವುದು ? ಆ ರಸ್ತೆ ಅಭಿವೃದ್ಧಿಗಾಗಿ ಸಂಬಂಧಿತ ಇಲಾಖೆಗೆ ಮಾಹಿತಿ ? ಬ್ಲಾ್ಯಕ್​ಸ್ಪಾಟ್ ಮಾಹಿತಿ ರಸ್ತೆ ಸುರಕ್ಷತಾ ಪ್ರಾಧಿಕಾರಕ್ಕೆ ಲಭ್ಯ
ಹೇಗಿರಲಿದೆ ಟ್ರಾಮಾ ಸೇವೆ?
ಬ್ಲ್ಯಾಕ್​​ಸ್ಪಾಟ್ಸ್ಪಾಟ್ ಸಮೀಪದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ
ಆಯ್ದ ಆಸ್ಪತ್ರೆಗಳಲ್ಲಿ ಸಮರ್ಪಕ ವೈದ್ಯಕೀಯ ವ್ಯವಸ್ಥೆ
ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಆಂಬುಲೆನ್ಸ್ ಸೌಲಭ್ಯ
ಆಂಬುಲೆನ್ಸ್​ಗಳನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿಡುವುದು
ಯೋಜನೆ ಯಶಸ್ಸಿಗಾಗಿ ವಿಶೇಷ ತಂಡ ರಚಿಸುವುದು
ಅಪಘಾತ ನಡೆದ 3 ಕಿ.ಮೀ ವ್ಯಾಪ್ತಿಯ ಸೇವೆ ಬಳಕೆ
ಪೊಲೀಸ್, ಚಾಲಕರು, ಸ್ವಯಂಸೇವಕರ ನೆರವು ಬಳಕೆ
ಟ್ರಾಮಾ ಕೇಂದ್ರದ ಸಿಬ್ಬಂದಿಗೆ ತುರ್ತು ಸೇವೆ ತರಬೇತಿ
ರಾಜಧಾನಿಯಲ್ಲೇ ಹೆಚ್ಚು
ರಾಜ್ಯದಲ್ಲಿ ನಿತ್ಯ 32 ಮಾರಣಾಂತಿಕ ರಸ್ತೆ ಅಪಘಾತ
ಇದರಲ್ಲಿ 30 ಮಂದಿ ಸಾವು, 96 ಜನರಿಗೆ ಗಾಯ
ಬೆಂಗಳೂರಿನಲ್ಲಿ ದಿನಕ್ಕೆ 2-3 ಅಪಘಾತ ಮಾಮೂಲಿ
ರಾಜಧಾನಿಯಲ್ಲಿ ನಿತ್ಯ 2-3 ಜನರು ಅಪಘಾತಕ್ಕೆ ಬಲಿ
2023ರಲ್ಲಿ 10,830 ಅಪಘಾತ ರಾಜ್ಯದಲ್ಲಿ ಸಂಭವಿಸಿದೆ
?ಕಳೆದ ವರ್ಷ 11,480 ಜನರು ಅಪಘಾತಗಳಲ್ಲಿ ಸಾವು
?ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇ.32 ಅಪಘಾತ ವರದಿ
ರಾಜ್ಯ ಹೆದ್ದಾರಿಯಲ್ಲಿ ಶೇ.32 ಅಪಘಾತ ಸಂಭವ
ಇತರ ರಸ್ತೆಗಳಲ್ಲಿ ಶೇ.38 ಅಪಘಾತ ಪ್ರಕರಣ ವರದಿ
45 ಕೋಟಿ ವೆಚ್ಚದಲ್ಲಿ ಟ್ರಾಮಾ ಸೇವೆ ಒದಗಿಸಲು ಅಸ್ಪತ್ರೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
| ಡಿ. ರಂದೀಪ್,ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − six =
Remember me
