ಬೆಳಗಾವಿ:ಐವರು ಯುವಕರು ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಗೈದಿದ್ದ ಪ್ರಕರಣದ ವಿಚಾರಣೆ ನಡೆಸಿದ 3ನೇ ಜಿಲ್ಲಾ ಸತ್ರ ಮತ್ತು ಪೋಕ್ಸೋ ನ್ಯಾಯಾಲಯವು ಆರೋಪ ಸಾಬೀತಾಗಿದ್ದರಿಂದ ಐವರಿಗೂ ತಲಾ 5 ಲಕ್ಷ ರೂ.ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ಪ್ರಕಟಿಸಿದೆ.
ಮುತ್ಯಾನಟ್ಟಿಯ ಸಂಜು ಸಿದ್ದಪ್ಪ ದಡ್ಡಿ(24), ಸುರೇಶ ಬರಮಪ್ಪ ದಡ್ಡಿ(24), ಸುನಿಲ ಲಘಮಪ್ಪ ಡುಮ್ಮಗೋಳ(21), ಮನಗುತ್ತಿಯ ಮಹೇಶ ಬಾಲಪ್ಪ ಶಿವನ್ನಗೋಳ(23) ಹಾಗೂ ಶಹಾಪುರದ ಸೋಮಶೇಖರ ದುರದುಂಡೇಶ್ವರ(23) ಎಂಬುವರ ವಿರುದ್ಧ ಆರೋಪ ಸಾಬೀತಾಗಿದೆ.
2017ರ ಫೆ.15ರಂದು ಸಂಜೆ ತನ್ನ ಗೆಳೆಯನ ಜತೆ ಮುತ್ಯಾನಟ್ಟಿ ಗುಡ್ಡಕ್ಕೆ ತೆರಳಿದ್ದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತೆ ಆಕೆಯ ಗೆಳೆಯನನ್ನು ಹೆದರಿಸಿ, ಇಬ್ಬರ ಮೇಲೂ ಹಲ್ಲೆ ನಡೆಸಿ, ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ನಂತರ ಆಕೆಯ ಮೇಲೆ 5 ಜನ ಸಾಮೂಹಿಕ ಅತ್ಯಾಚಾರ ಗೈದಿದ್ದರು. ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದರು.
ಇದನ್ನೂ ಓದಿ:ರವಿ ಬೆಳೆಗೆರೆ ವೃತ್ತಿ ಬದುಕಿನಲ್ಲಿ ಎಷ್ಟು ಅಪಾಯಗಳನ್ನು ಎದುರಿಸಿದ್ದರು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ!
ಈ ಬಗ್ಗೆ ಸಂತ್ರಸ್ತ ಬಾಲಕಿಯು ಪಾಲಕರ ಸಮೇತರ ಕಾಕತಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು. ಐಪಿಸಿ376(ಡಿ), 395, 341,354,385, 504, 506 ಮತ್ತು 4,6,12 ಪೋಕ್ಸೊ ಕಾಯ್ದೆ ಹಾಗೂ ಐಟಿ ಆ್ಯಕ್ಟ್ 67 ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ತನಿಖಾಧಿಕಾರಿ ರಮೇಶ ಗೋಕಾಕ್ ಅವರು 3ನೇ ಜಿಲ್ಲಾ ಸತ್ರ ಮತ್ತು ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಂಜಪ್ಪ ಅಣ್ಣಯ್ಯನವರ ಅವರು 186 ದಾಖಲೆಗಳು ಹಾಗೂ 46 ಮುದ್ದೆಮಾಲಗಳನ್ನು ಗುರುತಿಸಿದ ಆಧಾರ ಮೇಲೆ ಕೃತ್ಯವೆಸಗಿದ ಐವರನ್ನು ಅಪರಾಧಿಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸಂತ್ರಸ್ತೆಯ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕ ಎಲ್.ವಿ.ಪಾಟೀಲ ವಕಾಲತು ವಹಿಸಿದ್ದರು.
ಮನೆಯೊಂದರ ಮುಂದೆ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್​ ತೆರೆದ ಪೊಲೀಸರಿಗೆ ಕಾದಿತ್ತು ಶಾಕ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 3 =
Remember me
