ಬೆಂಗ್ಳೂರು ಪಿತಾಮಹರು ರೆಡ್ಡಿ, ಅಶೋಕ್, ಜಾರ್ಜ್!
ಆಧುನಿಕ ಬೆಂಗಳೂರಿನ ಪಿತಾಮಹರು ಯಾರು? ಈ ಪ್ರಶ್ನೆಗೆ ಉತ್ತರ ಎಂಬಂತೆ ವಿಧಾನಸಭೆಯಲ್ಲಿ ಚರ್ಚೆಯೊಂದು ನಡೆಯಿತು. ಬೆಂಗಳೂರಿನ ಪಿತಾಮಹ ರಾಮಲಿಂಗಾರೆಡ್ಡಿ ಎಂದು ಸಿದ್ದರಾಮಯ್ಯ ಹೇಳಿದರು. ತಕ್ಷಣವೇ ಆರ್.ಅಶೋಕ್ ಅವರೂ ಎಂದು ವಿ.ಸೋಮಣ್ಣ ದನಿಗೂಡಿಸಿದರು. ವಿಷಯವನ್ನು ವಿಸ್ತರಿಸಿದ ಎಸ್.ಟಿ.ಸೋಮಶೇಖರ್, ಕೆ.ಜೆ.ಜಾರ್ಜ್ ಅವರನ್ನು ನೀವು ಸೃಷ್ಟಿಸಿದ್ದೀರಿ ಎಂದು ಸಿದ್ದರಾಮಯ್ಯ ಕಾಲೆಳೆದರು.
ಸಿದ್ದರಾಮಯ್ಯ ಸ್ಟಿಲ್ ಪವರ್​ಫುಲ್ ಏಕೆ ಗೊತ್ತಾ?
ಬಿಎಸ್​ವೈ ಸರ್ಕಾರದಲ್ಲಿ ಅರ್ಧದಷ್ಟು ಮಂತ್ರಿಗಳು ನಿಮ್ಮ ಶಿಷ್ಯರೇ. ಹೀಗಾಗಿ ಸ್ಟಿಲ್ ನೀವು ಪವರ್​ಫುಲ್ ಎಂದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಲೆಳೆದರು. ಈ ಮಾತನ್ನು ತಪ್ಪಾಗಿ ಅರ್ಥೈಸಿದ ಸಿದ್ದರಾಮಯ್ಯ, ಭಾಷಣ ಮೊಟಕುಗೊಳಿಸಿ ನಾನು ಮಾತಾಡಲ್ಲ ಎಂದು ಸಿಟ್ಟಾಗಿ ಕುಳಿತುಬಿಟ್ಟರು. ಬಳಿಕ ಯತ್ನಾಳ್ ಹೇಳಿದ ಮಾತನ್ನು ಶೆಟ್ಟರ್ ಮತ್ತು ಸೋಮಣ್ಣ ಸಿದ್ದರಾಮಯ್ಯ ಗಮನಕ್ಕೆ ತಂದು ಸಮಾಧಾನಪಡಿಸಿ ದರು. ಕೊನೆಗೆ ಸಿದ್ದರಾಮಯ್ಯ ಯತ್ನಾಳ್​ಗೆ ಥ್ಯಾಂಕ್ಸ್ ಎಂದರು. ಇದಕ್ಕೆ ಪ್ರತಿಯಾಗಿ ‘ನಿಮ್ಮ ಸಹಕಾರ ಬಹಳ ಆಗಿದೆ’ ಎಂದು ಮತ್ತೊಮ್ಮೆ ಯತ್ನಾಳ್ ಕುಟುಕಿದರು.
ಹುಣಸೂರು ಶಾಸಕ ಮಂಜುನಾಥ್ ಪ್ರಮಾಣ
ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಆಯ್ಕೆಯಾದ ಎಚ್.ಪಿ. ಮಂಜುನಾಥ್ ಶುಕ್ರವಾರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಾಯಿ, ದೇವರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ಅವರು ಸಂಪ್ರದಾಯದಂತೆ ಸ್ಪೀಕರ್ ಅವರಿಂದ ಸಂವಿಧಾನದ ಪುಸ್ತಕ ಪಡೆದುಕೊಂಡರು. ಡಿ.8ರಂದು ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿತ್ತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
