ಬೆಂಗಳೂರು:ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಮುಂದಿನ 3 ಗಂಟೆಗಳ ಕಾಲ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಮೀ ಬೀಸುವ ಸಾಧ್ಯತೆ ಇದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ರಾಯಚೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಜನತೆಯಲ್ಲಿ ಮನವಿ ಮಾಡಿದೆ.
ಇದನ್ನೂ ಓದಿ:ನಿಗಮ-ಮಂಡಳಿ ಲೆಕ್ಕಾಚಾರ ಶುರು: ಪ್ರಮುಖರ ಮೇಲೆ ಆಕಾಂಕ್ಷಿಗಳ ಒತ್ತಡ; ಬಜೆಟ್ ಮಂಡನೆ ಬಳಿಕ ನೇಮಕ ಪ್ರಕ್ರಿಯೆ
ಭಾರೀ ಮಳೆ ಹಿನ್ನಲೆ ವಿದ್ಯುತ್ ವ್ಯತ್ಯಯ, ಟ್ರಾಫಿಕ್ ಜಾಮ್‌ ಹಾಗೂ ಮರದ ಕೊಂಬೆಗಳು ನೆಲಕ್ಕುರುಳುವ ಸಾಧ್ಯತೆ ಇದ್ದು, ಜನರು ಮನೆಯಿಂದ ಹೊರಗೆ ಬರುವ ಮುನ್ನ ಎಚ್ಚರ ವಹಿಸಿ. ಬೆಂಗಳೂರು ನಗರದಲ್ಲಿ ಈಗಾಗಲೇ ನೂರಾರು ಮರಗಳು ಮಳೆಯಿಂದಾಗಿ ಧರೆಗುರುಳಿವೆ. ಹೀಗಾಗಿ ಮಳೆ ಬಂದಾಗ ಯಾವುದೇ ಕಾರಣಕ್ಕೂ ಮರಗಳ ಕೆಳಗೆ ಆಶ್ರಯ ಪಡೆದುಕೊಳ್ಳಬೇಡಿ.
ಈ ವರ್ಷ ನೈಋತ್ಯ ಮುಂಗಾರು ವಿಳಂಬವಾಗಲಿದೆ. ಜೂನ್ 4ಕ್ಕೆ ಕೇರಳದಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಪ್ರಕಾರ ಜೂನ್ ಮೊದಲ ವಾರದಲ್ಲೇ ನೈರುತ್ಯ ಮುಂಗಾರು ಕರ್ನಾಟಕಕ್ಕೆ ಅಪ್ಪಳಿಸಬೇಕು. ಆದರೆ, ಕೇರಳಕ್ಕೆ ತಡವಾಗಿ ಪ್ರವೇಶಿಸುವ ಕಾರಣ ಕರ್ನಾಟಕದಲ್ಲಿ ಮುಂಗಾರು ಮಳೆ ಪ್ರಾರಂಭ ಕೆಲವು ದಿನಗಳ ಮಟ್ಟಿಗೆ ವಿಳಂಬವಾಗುವ ಸಾಧ್ಯತೆ ಇದೆ.(ದಿಗ್ವಿಜಯ ನ್ಯೂಸ್​)
ನಟಿಗೆ ಖಾಸಗಿ ಅಂಗ ಪ್ರದರ್ಶನ: ಜೈಲಿನಿಂದ ಬಿಡುಗಡೆಯಾದ ಆರೋಪಿಗೆ ಅದ್ಧೂರಿ ಸ್ವಾಗತ!

ಇಂದಿರಾ ಕ್ಯಾಂಟೀನ್​​ ಮರುಜೀವಕ್ಕೆ 355 ಕೋಟಿ ರೂ. ಬೇಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 16 =
Remember me
