ರಾಮ ಕಿಶನ್​ ಕೆ.ವಿ.ಬೆಂಗಳೂರು:ಸಿರಿಧಾನ್ಯದಿಂದ ತಯಾರಿಸಿದ ಬಿಸ್ಕತ್​, ಮಿಲೆಟ್​ ಮಾಲ್ಟ್​, ಕುರುಕಲು ತಿಂಡಿಗಳಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಆದರೆ ಈಗ ಇದೇ ಮೊದಲ ಬಾರಿಗೆ ಸಿರಿಧಾನ್ಯದಿಂದಲೇ ಸಿದ್ಧಪಡಿಸಿರುವ ಐಸ್​ಕ್ರೀಂ ಬಂದಿದೆ. ಯಲಚೇನಹಳ್ಳಿಯ ಲಿಕಿ ಫುಡ್ಸ್​ ಎಂಬ ಸಂಸ್ಥೆ ಕೃಷಿ ಮೇಳದಲ್ಲಿ ಸಿರಿಧಾನ್ಯದ ಐಸ್​ಕ್ರೀಂ ತಯಾರಿಸಿ ಮಾರಾಟ ಮಾಡುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಮಾವು, ಬಟರ್​ಸ್ಕಾಚ್​, ವೆನಿಲ್ಲ, ಕಾಫಿ, ಚಾಕೊಲೇಟ್​, ಅನಾನಸ್​, ಕಿವಿ, ಸ್ಟ್ರಾಬೆರ್ರಿ, ಗಾವ (ಸೀಬೆ) ಸೇರಿ 15ಕ್ಕೂ ಅಧಿಕ ಬಗೆಯ ಸಿರಿಧಾನ್ಯದ ಐಸ್​ಕ್ರೀಂ ಲಭ್ಯವಿದೆ. ಮೇಳಕ್ಕೆ ಆಗಮಿಸಿದವರು ಮಧ್ಯಾಹ್ನ ಬಿಸಿಲಿನಲ್ಲಿ ಐಸ್​ಕ್ರೀಂ ಸವಿದು ದಣಿವು ನಿವಾರಿಸಿಕೊಳ್ಳುತ್ತಿದ್ದಾರೆ.
ಸಿರಿಧಾನ್ಯವನ್ನು ಸಂಸ್ಕರಿಸಿ, ಅದರಲ್ಲಿರುವ ಹಾಲಿನ ಅಂಶವನ್ನು ಹೊರತೆಗೆಯಲಾಗುತ್ತದೆ. ಬಳಿಕ ನೈಸರ್ಗಿಕ ಅಂಶಗಳುಳ್ಳ ವಿವಿಧ ರುಚಿಗಳನ್ನು ಮಿಶ್ರಣ ಮಾಡಿ ಐಸ್​ಕ್ರೀಂ ಸಿದ್ಧಪಡಿಸುತ್ತೇವೆ. ಯಾವುದೇ ಕೃತಕ ಬಣ್ಣ ಹಾಗೂ ರುಚಿಯನ್ನು ಬಳಕೆ ಮಾಡುವುದಿಲ್ಲ. ಶುಚಿ ಹಾಗೂ ರುಚಿಗೆ ಪ್ರಾಶಸ ಕೊಡಲಾಗುತ್ತದೆ ಎನ್ನುತ್ತಾರೆ ಲಿಕಿ ುಡ್ಸ್​ನ ವ್ಯವಸ್ಥಾಪಕ ನಿರ್ದೇಶಕ ಎಸ್​. ಗೌತಮ್​ ರಾಯ್ಕರ್​.
ಫಾಸ್ಟ್​ಫುಡ್​, ಬೇಕರಿ ತಿನಿಸುಗಳನ್ನು ಇಷ್ಟಪಡುವ ಮಕ್ಕಳು ಸಿರಿಧಾನ್ಯದಿಂದ ತಯಾರಿಸಿದ ತಿಂಡಿಗಳನ್ನು ಸೇವಿಸಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಬಹುಮುಖ್ಯ ಕಾರಣ, ಸಿರಿಧಾನ್ಯದ ರುಚಿ. ಆದರೆ ಐಸ್​ಕ್ರೀಂ ಅನ್ನು ಎಲ್ಲ ಮಕ್ಕಳು ತಿನ್ನಲು ಮುಂದೆ ಬರುತ್ತಾರೆ. ಹೀಗಿರುವಾಗ ಸಿರಿಧಾನ್ಯದ ಪೋಷಕಾಂಶವುಳ್ಳ ಐಸ್​ಕ್ರೀಂ ಅನ್ನು ನೀಡಿದರೆ ಮಕ್ಕಳ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎನ್ನುತ್ತಾರೆ ಮಲ್ಲೇಶ್ವರ ನಿವಾಸಿ ಕವಿತಾ.
ಕೃಷಿಮೇಳದ ಮೂಲಕ ಇದೇ ಮೊದಲ ಬಾರಿಗೆ ಸಿರಿಧಾನ್ಯದ ಐಸ್​ಕ್ರೀಂ ಸೇವಿಸುವ ಅವಕಾಶ ಸಿಕ್ಕಿತು. ಮ್ಯಾಂಗೋ ಹಾಗೂ ಸೀಬೆಕಾಯಿ ರುಚಿಯ ಐಸ್​ಕ್ರೀಂ ಸೇವಿಸಿದೆ. ರುಚಿ ಚೆನ್ನಾಗಿದೆ. ಗುಣಮಟ್ಟದ ಈ ಉತ್ಪನ್ನ ಎಲ್ಲೆಡೆ ಸಿಗುವಂತಾಗಬೇಕು.-ರೇವತಿ, ಬೆಂಗಳೂರು
ಸಿರಿಧಾನ್ಯದ ಐಸ್​ಕ್ರೀಂ ಎಂಬುದು ಗೊತ್ತಾಗುತ್ತಿದ್ದಂತೆ ರುಚಿ ನೋಡಬೇಕು ಎನ್ನಿಸಿತು. ಹೀಗಾಗಿ ಕಿವಿ ಮತ್ತು ಸ್ಟ್ರಾಬೆರ್ರಿ ರುಚಿಯ ಐಸ್​ಕ್ರೀಂ ಸೇವಿಸಿದೆ. ಶುಚಿ ಮತ್ತು ರುಚಿಯಲ್ಲಿ ಗುಣಮಟ್ಟ ಹೊಂದಿದೆ.-ರಶ್ಮಿ, ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 1 =
Remember me
