ಬೆಂಗಳೂರು:ಲಿಂಬೆ ರಸವನ್ನು ಮೂಗಿನ ಮೂಲಕ ತೆಗೆದುಕೊಂಡರೆ ದೇಹದಲ್ಲಿರುವ ವಾತ ಕಫ ನಿವಾರಣೆಯಾಗಿ ಉಸಿರಾಟ ಉತ್ತಮವಾಗುತ್ತದೆ ಎಂಬುದಕ್ಕೆ ಆಯುರ್ವೆದ ಗ್ರಂಥಗಳಲ್ಲೇ ಪುರಾವೆಗಳಿದ್ದು, ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಅನುಭವದ ಮಾತು ವೈಜ್ಞಾನಿಕವಾದದ್ದು ಎಂದು 86 ವರ್ಷದ ಹಿರಿಯ ಆಯುರ್ವೆದ ತಜ್ಞ ಡಾ. ಮಾ. ವೆಂ. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ದೇಹವನ್ನು ಪ್ರಕೃತಿ ನಿರ್ವಿುಸಿದೆ. ಲಿಂಬೆ ಹಣ್ಣಿನ ರಸವೂ ಪ್ರಕೃತಿಯಿಂದಲೇ ಲಭಿಸಿದ್ದು, ಕೃತಕವಾಗಿ ತಯಾರಿಸಿದ್ದಲ್ಲ. ಎರಡೂ ಒಂದಾದಾಗ ಸಂಯೋಜನೆಯಾಗುತ್ತದೆಯೇ ವಿನಃ ದುಷ್ಪರಿಣಾಮ ಬೀರುವುದಿಲ್ಲ. ಲಿಂಬೆ ಹಣ್ಣಿನ ರಸದ ಉಪಯೋಗ ಹಾಗೂ ಬಳಕೆ ವಿಧಾನದ ಕುರಿತು ಅನೇಕ ಗ್ರಂಥಗಳಲ್ಲಿ ಉಲ್ಲೇಖವಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಇರಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಮೂಗಿನಿಂದ ಸೇವನೆ ವಿಧಾನ: ಲಿಂಬೆ ರಸವನ್ನು ಮೂಗಿನ ಮೂಲಕ ಸೇವಿಸಿದರೆ ಮೆದುಳಿಗೆ ಹೋಗುತ್ತದೆ, ಅಪಾಯವಿದೆ ಎಂಬ ಅಭಿಪ್ರಾಯವನ್ನು ಕೃಷ್ಣಮೂರ್ತಿ ಅಲ್ಲಗಳೆದಿದ್ದಾರೆ.
ಮೂಗಿನಿಂದ ಆಹಾರ ಸೇವಿಸಿದಾಕ್ಷಣ ಅದು ಮೆದುಳಿಗೆ ಹೋಗುವುದಿಲ್ಲ. ಮಲ್ಲಾಡಿ ಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ‘ಸ್ವಯಂ ವೈದ್ಯ’(ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ-1978-ಪುಟ ಪುಟ 493) ಎಂಬ ಪುಸ್ತಕದಲ್ಲಿ ‘ನಾಸಾ ರೋಗ’ ಪ್ರಕರಣದಲ್ಲಿ ಉಲ್ಲೇಖವಾಗಿದೆ. ಆಯುರ್ವೆದದಲ್ಲಿ ಇದನ್ನು ನಸ್ಯ ಪ್ರಕರಣ ಎಂದೂ ಕರೆಯಲಾಗುತ್ತದೆ. ಮೂಗಿನಿಂದ ಉಂಟಾಗುವ 18 ಖಾಯಿಲೆಗಳಿಗೆ ಚಿಕಿತ್ಸೆಯಾಗಿ, ಮೂಗಿನಿಂದ ಸೇವಿಸುವ ಅನೇಕ ವಿಧಾನಗಳಿವೆ. ಮೂಗಿನ ಮೂಲಕ ದ್ರವ ರೂಪದಲ್ಲಿ, ಪುಡಿಯಾಗಿ ನಸ್ಯದ ರೀತಿಯಲ್ಲಿ, ಧೂಪದ ಮಾದರಿಯಲ್ಲಿ ವಿವಿಧ ಸಮಸ್ಯೆಗೆ ಪರಿಹಾರವನ್ನು ಸೂಚಿಸಲಾಗಿದೆ. ಅಂದರೆ, ಮೂಗಿನ ಮೂಲಕ ಚಿಕಿತ್ಸೆ ನೀಡುವ ವಿಧಾನ ಹೊಸತಲ್ಲ. ಅದರಿಂದ ನೇರವಾಗಿ ಮೆದುಳಿಗೆ ದ್ರವ ಹೋಗುತ್ತದೆ ಎಂಬುದು ಸತ್ಯವಲ್ಲ ಎಂದು ಮಾ. ವೆಂ. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಲಿಂಬೆ ರಸದ ಉಪಯೋಗ ಬಹಳ: ಲಿಂಬೆ ಹಣ್ಣು ಹಾಗೂ ಲಿಂಬೆ ರಸದ ಕುರಿತು ಅನೇಕ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಅದರಲ್ಲಿ ಪ್ರಮುಖವಾಗಿ ಶ್ರೀ ಏಟೂರಿ ವಾಸುದೇವ ಶಾಸ್ತ್ರಿಯವರು ತೆಲುಗಿನಲ್ಲಿ ಬರೆದಿರುವ ‘ವಸ್ತು ಗುಣಪ್ರಕಾಶಿಕ’ (1938) ಪುಸ್ತಕದ 552ನೇ ಪುಟದಲ್ಲಿ ಲಿಂಬೆಯ ಬಗ್ಗೆ ವಿವರಿಸಿದ್ದಾರೆ. ಲಿಂಬೆಯು ಹುಳಿಯಾಗಿರುತ್ತದೆ, ಅದು ದೇಹಕ್ಕೆ ಉಷ್ಣ ಉಂಟುಮಾಡುತ್ತದೆ. ಬಾಯಾರಿಕೆ, ನೋವು, ಕಫ-ವಾತವನ್ನು ನಿವಾರಣೆ ಮಾಡುತ್ತದೆ. ದೇಹದ ಜೀರ್ಣಾಂಗ ವ್ಯವಸ್ಥೆಯಲ್ಲಿನ ಏರುಪೇರನ್ನು ಲಿಂಬೆ ಸರಿದೂಗಿಸುತ್ತದೆ. ಮಲಬದ್ಧತೆ, ಮೂಲವ್ಯಾಧಿಗೂ ಲಿಂಬೆ ಪರಿಣಾಮಕಾರಿಯಾಗಿದೆ. ಮುಖ್ಯವಾಗಿ, ಉಸಿರಾಟಕ್ಕೆ ಅಡ್ಡಿಯುಂಟುಮಾಡುವ ಕಫವನ್ನು ವಾತದ ಮೂಲಕ ಹೊರಹಾಕಿ ಉಸಿರಾಟವನ್ನು ಸುಗಮಗೊಳಿಸುತ್ತದೆ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ. ಲಿಂಬೆಯ ಉಪಯೋಗದ ಕುರಿತು ಇದು ಆಧಾರವಾಗಿದೆ.
ಇನ್ನೊಂದು ಆಧಾರವೆಂದರೆ, ಲಂಡನ್​ನಲ್ಲಿ ಎಲ್​ಎ, ಪ್ಯಾರಿಸ್​ನಲ್ಲಿ ಎಂಸಿಎಸ್ ವ್ಯಾಸಂಗ ಮಾಡಿದ್ದ, ಬ್ರಿಟಿಷ್ ಫಾರ್ವಸ್ಯುಟಿಕಲ್ ಕಾನ್ಪರೆನ್ಸ್​ನ ಸದಸ್ಯರೂ ಆಗಿದ್ದ ಡಾ. ಕೆ. ಎಂ. ನಾಡಕರ್ಣಿ ಅವರು 1927ರಲ್ಲಿ ಪ್ರಕಟಿಸಿದ ‘ದಿ ಇಂಡಿಯನ್ ಮೆಟೀರಿಯಾ ಮೆಡಿಕಾ’ ಕೃತಿಯಲ್ಲಿ ವಿವರಿಸಿದ್ದಾರೆ. ಲಿಂಬೆ ಹಣ್ಣು, ಅದರ ರಸ ಹಾಗೂ ತೈಲವನ್ನು ಬಳಸಬಹುದಾಗಿದೆ. ಈ ಹಣ್ಣಿನ ರಸವು ಸಿಡುಬು, ದಢಾರ, ಸ್ಕಾರ್ಲಾಟಿನಾ ಹಾಗೂ ಇನ್ನಿತರ ಜ್ವರಗಳನ್ನು ಗುಣಪಡಿಸುತ್ತದೆ ಹಾಗೂ ಶ್ವಾಸಕೋಶ, ಉದರ, ಕಿಡ್ನಿ ಮುಂತಾದ ಭಾಗಗಳ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಇನ್​ಫ್ಲುಯೆಂಜಾದ ವಿವಿಧ ಮಾದರಿಗಳು, ನ್ಯುಮೋನಿಯಾದಂತಹ ಸಮಸ್ಯೆಗಳ ನಿವಾರಣೆಯಷ್ಟೆ ಅಲ್ಲದೆ, ಸಮಸ್ಯೆ ಬಾರದಂತೆ ತಡೆಯಲೂ ಲಿಂಬೆ ರಸ ಉಪಯೋಗವಾಗುತ್ತದೆ. ತಲೆನೋವು, ಗಂಟಲು ಹಾಗೂ ಎದೆಯಲ್ಲಿ ನೋವಿನ ಜತೆಗಿನ ಸಂಕೀರ್ಣ ಜ್ವರಗಳ ಸಂದರ್ಭದಲ್ಲಿ ಲಿಂಬೆ ರಸ, ಶುಂಠಿ, ಸೈಂಧವ ಲವಣ (ರಾಕ್​ಸಾಲ್ಟ್) ಮುಂತಾದವನ್ನು ಪುಡಿಯ ರೂಪದಲ್ಲಿ ಮೂಗಿನ ಮೂಲಕ ಸೇವಿಸಿದರೆ ಇದು ದೇಹದಿಂದ ಕಫವನ್ನು ಹೊರಹಾಕಿ ಉಸಿರಾಟವನ್ನು ಸಹಜಗೊಳಿಸುತ್ತದೆ ಎಂದು ತಿಳಿಸಲಾಗಿದೆ ಎಂದು ಡಾ.ಕೃಷ್ಣಮೂರ್ತಿ ಹೇಳಿದ್ದಾರೆ.
ಕೋಟ್
ಲಿಂಬೆ ರಸದ ಉಪಯೋಗ ಮತ್ತು ಅದನ್ನು ಮೂಗಿನಿಂದ ಸೇವಿಸುವುದರ ಕುರಿತು ಯಾವುದೇ ಗೊಂದಲ ಬೇಡ. ಇದು ಆಯುರ್ವೆದ ಗ್ರಂಥಗಳಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿರುವ ಅತ್ಯಂತ ವೈಜ್ಞಾನಿಕ ಅಂಶ. ಯಾವುದೇ ಅಡ್ಡಪರಿಣಾಮಗಳಿಲ್ಲ.
| ಡಾ. ಮಾ. ವೆಂ. ಕೃಷ್ಣಮೂರ್ತಿ
7 ವರ್ಷದ ನಂತರದ ಮಕ್ಕಳು ಒಂದು ಬಾರಿಗೆ ಎರಡೂ ಹೊಳ್ಳೆಗಳಿಗೆ 1-2 ಹನಿಗಳು
ವಯಸ್ಕರಾದರೆ ಒಂದು ಬಾರಿಗೆ ಎರಡೂ ಹೊಳ್ಳೆಗಳಿಗೆ 2-3 ಹನಿಗಳು
(ಪ್ರತಿ ದಿನ ಬೆಳಗ್ಗೆ ಅಥವಾ ರಾತ್ರಿ ಬಳಸಿದರೂ ಸಮಸ್ಯೆ ಇಲ್ಲ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
