ಬಾಗಲಕೋಟೆ:ಶಾಕ್​ಗೆ ಒಳಗಾಗಿ ವಿದ್ಯುತ್​ ಕಂಬದಿಂದ ಕೆಳಕ್ಕೆ ಬಿದ್ದು ಲೈನ್​ಮ್ಯಾನ್​ವೊಬ್ಬರು ಸಾವಿಗೀಡಾಗಿದ್ದಾರೆ. ಈ ಮೂಲಕ ಜೀವನೋಪಾಯಕ್ಕಾಗಿ ಇದ್ದ ಕೆಲಸ ಮಾಡುತ್ತಿದ್ದಾಗಲೇ ಅವರು ಜೀವ ಕಳೆದುಕೊಂಡಂತಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಪರಶುರಾಮ ಪಾಯಗೊಂಡ (30) ಸಾವಿಗೀಡಾದ ಲೈನ್​ಮ್ಯಾನ್. ಸಾವಳಗಿಯ ಹೆಸ್ಕಾಂ ಸಿಬ್ಬಂದಿ ಆಗಿದ್ದ ಇವರು ಮೂಲತಃ ರಬಕವಿ‌-ಬನಹಟ್ಟಿ ತಾಲೂಕಿನ‌ ಕುಲಹಳ್ಳಿ ಗ್ರಾಮದ ನಿವಾಸಿ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಂಬಗಿ ಬಿ.ಕೆ. ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ.
ಕಾರ್ಯನಿರತವಾಗಿದ್ದಾಗ ವಿದ್ಯುತ್ ‌ತಂತಿ ತಗುಲಿ ಆಘಾತಕ್ಕೆ ಒಳಗಾಗಿ ಕಂಬದಿಂದ ಬಿದ್ದು‌‌ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅದಾಗ್ಯೂ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ ಎಂಬ ಆಕ್ರೋಶದಿಂದ ಗ್ರಾಮಸ್ಥರು ಜಂಬಗಿ ಬಿ.ಕೆ. ಗ್ರಾಮದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಠಾಣೆಯಲ್ಲೇ ಪೊಲೀಸರಿಂದ ಮದ್ಯಪಾನ; ಕುಡಿಯುತ್ತಿರುವ ವಿಡಿಯೋ ವೈರಲ್​..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
