ಮಂಡ್ಯ:ವಿದ್ಯುತ್​ ಕಂಬವೇರಿ ಟ್ರಾನ್ಸ್ ಫಾರ್ಮರ್ ದುರಸ್ಥಿ ಮಾಡುತ್ತಿದ್ದ ಲೈನ್​ಮನ್​ವೊಬ್ಬರು ಸೆಸ್ಕ್ ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ ಸ್ಥಳದಲ್ಲೇ ದುರಂತ ಸಾವಿಗೀಡಾಗಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿರಿ‘ತೊಗಲಾಗಿನ ಬಲ್ಲ ತಿಮ್ಮಣ್ಣ’ ಅಂತೆ ಡಿಸಿಎಂ ಕಾರಜೋಳ! ಉದ್ಯೋಗದ ಬಗ್ಗೆ ಏನೂ ಗೊತ್ತಿಲ್ಲ…
ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ಕೆಟ್ಟಿದ್ದ ಟ್ರಾನ್ಸ್ ಫಾರ್ಮರ್ ಅನ್ನು ಮಂಗಳವಾರ ಬೆಳಗ್ಗೆ ಲೈನ್​ಮನ್​ಗಳಾದ ಲೋಕೇಶ್ ಮತ್ತು ದಿನೇಶ್ ಎಂಬುವವರು ದುರಸ್ಥಿ ಮಾಡುತ್ತಿದ್ದರು. ದುರಸ್ಥಿಗೂ ಮುನ್ನ ಸೆಸ್ಕ್ ವಿದ್ಯುತ್​ ಕಚೇರಿಗೂ ಮಾಹಿತಿ ನೀಡಲಾಗಿತ್ತು. ಅದರಂತೆ ಇವರ ಪಾಡಿಗೆ ಇವರು ದುರಸ್ಥಿ ಕಾರ್ಯದಲ್ಲಿ ತಲ್ಲೀನರಾಗಿದ್ದರು. ಈ ವೇಳೆ ವಿದ್ಯುತ್ ವಿತರಣಾ ಕೇಂದ್ರದ ಸಿಬ್ಬಂದಿ ಈ ಲೈನ್​ಮನ್​ಗಳಿಗೆ ಮಾಹಿತಿಯನ್ನೂ ನೀಡದೆ ವಿದ್ಯುತ್ ಆನ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿರಿರಕ್ತಸ್ರಾವದಿಂದ ಕರೊನಾ ಸೋಂಕಿತ ಗರ್ಭಿಣಿ ನರಳಾಡಿದರೂ ಚಿಕಿತ್ಸೆ ವಿಳಂಬ… ಮಗು ಬದುಕಲಿಲ್ಲ!
ದುರಸ್ಥಿ ವೇಳೆಯೇ ವಿದ್ಯುತ್ ಪ್ರವಹಿಸಿದ್ದು, ಟ್ರಾನ್ಸ್ ಫಾರ್ಮರ್ ಮೇಲೆಯೇ ಲೋಕೇಶ್ (25) ಪ್ರಾಣ ಬಿಟ್ಟಿದ್ದಾರೆ. ಮತ್ತೊಬ್ಬ ಲೈನ್​ಮನ್ ದಿನೇಶ್ (24) ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಗುತ್ತಿಗೆ ಆಧಾರಿತ ನೌಕರ. ಘಟನೆ ನಡೆದು ಒಂದೂವರೆಗೆ ಘಟನೆಯಾದರೂ ಸ್ಥಳಕ್ಕೆ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿರಲಿಲ್ಲ. ಚಿನಕುರುಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿರಿಕತ್ತೆಯನ್ನೂ ಬಿಡಲಿಲ್ಲ ಪಾಕ್ ಪೊಲೀಸರು!!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 14 =
Remember me
