ಬೆಂಗಳೂರು:ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನಿಸಿರುವ ಲಿಂಗಾಯತ ಸಮುದಾಯ, ಕಾಂಗ್ರೆಸ್​ಗೆ ಶಾಪ ವಿಮೋಚನೆ ಮಾಡಿದೆ.
ಬರೋಬ್ಬರಿ 35 ವರ್ಷಗಳ ಬಳಿಕ ಕಾಂಗ್ರೆಸ್​ಗೆ ಶಾಪ ವಿಮೋಚನೆಯಾಗಿದೆ. ಈ ಬಾರಿ 36 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ. ಒಟ್ಟು 51 ಲಿಂಗಾಯತರಿಗೆ ಕಾಂಗ್ರೆಸ್​ ಟಿಕೆಟ್​ ನೀಡಿತ್ತು. ಅದರಲ್ಲಿ 36 ಮಂದಿ ವಿಜಯಶಾಲಿಗಳಾಗಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್​ ಹೆಚ್ಚು ಟಿಕೆಟ್ ನೀಡಿದೆ.
ಇದನ್ನೂ ಓದಿ:ಬೆಂಗ್ಳೂರಲ್ಲಿ ಕಾಂಗ್ರೆಸ್ 12, ಬಿಜೆಪಿ 15: ರಾಜಧಾನಿ ಮತದಾರರ ಮನಸೆಳೆದ ನರೇಂದ್ರ ಮೋದಿ ರೋಡ್ ಶೋ
ಲಿಂಗಾಯತ ನಾಯಕತ್ವವನ್ನು ಕಡೆಗಣಿಸಿದ್ದಕ್ಕೆ ಈ ಬಾರಿ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದು, ಅದರ ಪರಿಣಾಮ ಫಲಿತಾಂಶದ ಮೇಲೆ ಬೀರಿದೆ. 36 ಲಿಂಗಾಯತ ಕಾಂಗ್ರೆಸ್​ ಶಾಸಕರನ್ನು ಆರಿಸಿ ಕಳುಹಿಸುವ ಮೂಲಕ ಬಿಜೆಪಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಲಿಂಗಾಯತ ಸಮುದಾಯ ಕಳೆದ 30 ವರ್ಷಗಳಿಂದ ಬಿಜೆಪಿ ಪರ ನಿಂತಿದ್ದರು. ಆದರೆ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್ ಕಡಗಣನೆಯಿಂದಾಗಿ ಬಿಜೆಪಿ ವಿರುದ್ಧ ಲಿಂಗಾಯತ ಸಮುದಾಯ ತಿರುಗಿ ಬಿದ್ದಿದೆ. ಈ ಎಲ್ಲ ಆಕ್ರೋಶವನ್ನು ಚುನಾವಣೆಯಲ್ಲಿ ಹೊರ ಹಾಕಿದ್ದಾರೆ.
2018ರಲ್ಲಿ 47 ಲಿಂಗಾಯತರಿಗೆ ಕಾಂಗ್ರೆಸ್​ ಟಿಕೆಟ್ ನೀಡಿತ್ತು. ಅದರಲ್ಲಿ 17 ಜನರು ಮಾತ್ರ ಆಯ್ಕೆಯಾಗಿದ್ರು. ಒಟ್ಟು 51 ಲಿಂಗಾಯತರಿಗೆ ಕಾಂಗ್ರೆಸ್​ ಟಿಕೆಟ್​ ನೀಡಿತ್ತು. ಅದರಲ್ಲಿ 36 ಮಂದಿ ವಿಜಯಶಾಲಿಗಳಾಗಿದ್ದಾರೆ. ಈ ಬಾರಿ ಲಿಂಗಾಯತ ಸಮುದಾಯ ಕಾಂಗ್ರೆಸ್ಸಿಗೆ ಜೈ ಎಂದಿದೆ.
ಇದನ್ನೂ ಓದಿ:ವರುಣದಲ್ಲಿ ವಿ. ಸೋಮಣ್ಣ ಹೀನಾಯ ಸೋಲು: ಪ್ರತಾಪ್​ ಸಿಂಹ ಹೇಳಿಕೆಗಳೇ ಮುಳುವಾಯಿತು!
ಇನ್ನೂ 45 ಒಕ್ಕಲಿಗರಿಗೆ ಕಾಂಗ್ರೆಸ್​ ಟಿಕೆಟ್ ನೀಡಿತ್ತು. ಅದರಲ್ಲಿ 21 ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಗೆಲುವಾಗಿದೆ. ಪರಿಶಿಷ್ಟ ಪಂಗಡದಲ್ಲಿ 15, ಪರಿಶಿಷ್ಟ ಜಾತಿಯಲ್ಲಿ 11, ಮುಸ್ಲಿಂ 9, ಕುರುಬ 8, ರೆಡ್ಡಿ ಸಮುದಾಯದ 4, ಬ್ರಾಹ್ಮಣ, ಈಡಿಗ, ಭೋವಿ ಸಮುದಾಯದ ತಲಾ 3, ಮರಾಠ, ಬಿಲ್ಲವ ತಲಾ 2 ಹಾಗೂ ಬಂಟ, ಕೊಡವ, ಪರಿಶಿಷ್ಟ ಕ್ರಿಶ್ಚಿಯನ್, ಜೈನ್, ಲಂಬಾಣಿ, ಕೊರಚ, ಬಲಿಜ, ಬೆಸ್ತ, ರಜಪೂತ್ ಮತ್ತು ಉಪ್ಪಾರ ಸಮುದಾಯದ ತಲಾ ಒಬ್ಬ ಅಭ್ಯರ್ಥಿಗಳಿಗೆ ಗೆಲುವಾಗಿದೆ.
ಹೊನ್ನಾಳಿಯಲ್ಲಿ ಹೀನಾಯ ಸೋಲು: ರಾಜಕೀಯ ನಿವೃತ್ತಿ ಮಾತನಾಡಿ ಕಣ್ಣೀರಿಟ್ಟ ರೇಣುಕಾಚಾರ್ಯ

ಭಾರತದಲ್ಲಿ ಬಹುತೇಕ ತಗ್ಗಿದ ಕೋವಿಡ್: ಆರೋಗ್ಯ ತುರ್ತಸ್ಥಿತಿ ಅಂತ್ಯ, ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
