ದಾವಣಗೆರೆ:ವೀರಶೈವ ಲಿಂಗಾಯತ ಕಡೆಗಣನೆ ಕಲಹ 4ನೇ ದಿನವೂ ಮುಂದುವರಿದಿದೆ. ಸಿಎಂ ಸಿದ್ದರಾಮಯ್ಯ ಅವರಿಂದ ಆಹ್ವಾನ ಬಂದರೆ ಈ ವಿಷಯವಾಗಿ ಚರ್ಚಿಸಲು ಸಿದ್ಧನಿದ್ದೇನೆ. ನಾನಾಗಿಯೇ ಅವರ ಬಳಿ ಹೋಗುವುದಿಲ್ಲ ಎಂದು ಕಾಂಗ್ರೆಸ್​ನ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಮಾತನಾಡಿ, ಸಿದ್ದರಾಮಯ್ಯ ಅವರೇ ಕರೆದರೆ ಎಲ್ಲಿ, ಯಾರಿಗೆ ತೊಂದರೆ ಆಗಿದೆ ಎಂಬುದನ್ನು ಅಂಕಿ-ಅಂಶಗಳ ಸಹಿತ ವಿವರಿಸುವುದಾಗಿ ತಿಳಿಸಿದರು. ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಿದ್ದು ಸತ್ಯ. ನಮ್ಮ ಸಮುದಾಯದ ಒಬ್ಬ ಜಿಲ್ಲಾಧಿಕಾರಿಯೂ ಇಲ್ಲ. ವೀರಶೈವ ಲಿಂಗಾಯತ ಸಮಾಜಕ್ಕೆ 7 ಸಚಿವ ಸ್ಥಾನ ನೀಡಿದ್ದಾರೆ, ಅದರ ಬಗ್ಗೆ ಪ್ರಶ್ನೆ ಇಲ್ಲ. ಆದರೆ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಎಷ್ಟು ಜನರಿದ್ದಾರೆ? ನಾನು ಸತ್ಯ ಹೇಳಿದ್ದೇನೆ, ಅದಕ್ಕಾಗಿಯೇ ಈ ವಿಚಾರ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ ಎಂದು ಮತ್ತೊಮ್ಮೆ ಸಮರ್ಥಿಸಿಕೊಂಡರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಾನು ಸತ್ಯ ಹೇಳಿದ್ದೇನೆ. ಅವರಂತೆ ಯಾರಿಗೋ ಬೆಣ್ಣೆ ಹಚ್ಚಿ ಎಂಎಲ್​ಸಿ ಆಗಿಲ್ಲ. ಜನರಿಂದ 7ಬಾರಿ ಆಯ್ಕೆಯಾಗಿ ಶಾಸಕನಾಗಿದ್ದೇನೆ ಎಂದು ಟಾಂಗ್ ಕೊಡುವ ಜತೆಗೆ ವಿಶ್ವನಾಥ್​ರನ್ನು ಹುಚ್ಚಾಸ್ಪತ್ರೆಗೆ ಕಳಿಹಿಸಬೇಕು ಎಂದರು.
ಲಿಂಗಾಯತ ಅಧಿಕಾರಿಗಳ ಪಟ್ಟಿ ಜಾಲತಾಣದಲ್ಲಿ ವೈರಲ್:ರಾಜ್ಯದಲ್ಲಿ ವೀರಶೈವ ಅಧಿಕಾರಿಗಳು ಕಂಗಾಲಾಗಿದ್ದಾರೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ಬಿರುಗಾಳಿ ಎಬ್ಬಿಸಿರುವ ಹೊತ್ತಿನಲ್ಲೇ ಸಮುದಾಯದ ಅಧಿಕಾರಿಗಳು ಯಾವ್ಯಾವ ಹುದ್ದೆಯಲ್ಲಿದ್ದಾರೆ ಎಂಬ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪಟ್ಟಿ ಪ್ರಕಾರ ಐಎಎಸ್ -16, ಐಪಿಎಸ್ -16, ಐಆರ್​ಎಸ್ -9, ಎಸಿಸಿಟಿ-14, ತಹಸೀಲ್ದಾರರು- 50, ಸಿಟಿಒ-6, ಕುಲಪತಿಗಳು- 6 ಸೇರಿ 100ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳಿದ್ದಾರೆ. ಎಸಿ, ತಹಸೀಲ್ದಾರರು ಹಾಗೂ ದೊಡ್ಡ ಸಂಖ್ಯೆಯಲ್ಲಿ ಕೆಳ ಹಂತದ ಅಧಿಕಾರಿಗಳು ಅತಂತ್ರರಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಮೂರು ಜಿಲ್ಲೆಗಳಲ್ಲಿ ಮಾತ್ರ ವೀರಶೈವ ವರ್ಗಕ್ಕೆ ಸೇರಿದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಇದ್ದಾರೆ. ಹಿಂದಿನ ಸರ್ಕಾರದಲ್ಲಿದ್ದ ಮೂರ್ನಾಲ್ಕು ಅಧಿಕಾರಿಗಳನ್ನು ಹೊರತುಪಡಿಸಿದರೆ ಉಳಿದವರನ್ನು ವರ್ಗಾವಣೆ ಮಾಡಿ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ನೀಡಲಾಗಿದೆ ಎನ್ನಲಾಗಿದೆ.
ಮೈಸೂರು:ಸರ್ಕಾರದ ಕಾರ್ಯವೈಖರಿ ಸಹಿಸದವರು ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಕೆ.ಲಕ್ಷ್ಮಣ್ ಆರೋಪಿಸಿದರು.
ರಾಜ್ಯದ ವಿವಿಧ ಇಲಾಖೆಗಳಲ್ಲಿ 40 ಮುಖ್ಯ ಇಂಜಿನಿಯರ್​ಗಳಿದ್ದು, ಅದರಲ್ಲಿ 10 ಜನ ಲಿಂಗಾಯತರು, 9 ಒಕ್ಕಲಿಗರು ಹಾಗೂ ನಾಲ್ವರು ಕುರುಬರಿದ್ದಾರೆ. ಸರ್ಕಾರದ ಅಧೀನದಲ್ಲಿ 41 ವಿಶ್ವವಿದ್ಯಾಲಯಗಳಿದ್ದು, 14 ಕುಲಪತಿಗಳು ವೀರಶೈವ ಲಿಂಗಾಯತರು. ರಾಜ್ಯದಲ್ಲಿ 272 ಐಎಎಸ್ ಅಧಿಕಾರಿಗಳು ಇದ್ದು, ಅದರಲ್ಲಿ 87 ಜನ ಕರ್ನಾಟಕ ಕೇಡರ್​ನವರು. ಇವರಲ್ಲಿ 22 ಜನ ಲಿಂಗಾಯತರು. ಅವರೆಲ್ಲರೂ ಆಯಕಟ್ಟಿನ ಹುದ್ದೆಗಳಲ್ಲೇ ಇದ್ದಾರೆ. ಮೂವರು ಜಿಲ್ಲಾಧಿಕಾರಿಗಳಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒಗಳ ಹುದ್ದೆಯಲ್ಲೂ ಆದ್ಯತೆ ಕೊಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
439 ಕೆಎಎಸ್ ಅಧಿಕಾರಿಗಳಲ್ಲಿ 102 ಜನ ಲಿಂಗಾಯತರಿದ್ದಾರೆ. ರಾಜ್ಯದಲ್ಲಿ 53 ಎಸಿಗಳ ಹುದ್ದೆಗಳಿದ್ದು, ಲಿಂಗಾಯತರು 12, ಒಕ್ಕಲಿಗರು 9 ಹಾಗೂ ಕುರುಬರು ಮೂವರಿದ್ದಾರೆ. ಹೌಸಿಂಗ್ ಬೋರ್ಡ್, ತೋಟಗಾರಿಕೆ, ಕೃಷಿ, ಕ್ರೆಡಾಲ್, ಸೆಸ್ಕ್, ಬೆಸ್ಕಾಂ, ನೀರಾವರಿ ಮಂಡಳಿಗಳಲ್ಲಿ ಮುಖ್ಯ ಸ್ಥಾನಗಳಲ್ಲಿ ಲಿಂಗಾಯತರಿದ್ದಾರೆ ಎಂದರು.
ಸೂಪರ್​ ಮಾರ್ಕೆಟ್​ನಲ್ಲಿ ಫ್ರಿಡ್ಜ್ ಡೋರ್ ತೆರೆಯುತ್ತಿದ್ದಂತೆ ಶಾಕ್​; ನಾಲ್ಕು ವರ್ಷದ ಬಾಲಕಿ ಸಾವು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
