ಬೆಂಗಳೂರು:ಮದ್ಯ ಮಾರಾಟದ ಮೇಲಿದ್ದ ನಿರ್ಬಂಧ ತೆರವಾಗುತ್ತಿದ್ದಂತೆ, ಸೋಮವಾರ ರಾಜ್ಯದ ಮದ್ಯದಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆದಿದೆ. ನಿನ್ನೆ ಒಂದೇ ದಿನ 45 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ ಎಂದು ಅಬಕಾರಿ ಇಲಾಖೆ ಲೆಕ್ಕ ಹಾಕಿದೆ.ಇದ್ಯಾವ ಲೆಕ್ಕ ಅಂತಾ.. ಉತ್ತರಪ್ರದೇಶದ ಅಧಿಕಾರಿಗಳು ನೀಡಿರುವ ಅಂಕಿ-ಅಂಶ ಕೇಳಿದರೆ ಇನ್ನೂ ಹೌಹಾರುತ್ತೀರಿ. ಏಕೆಂದರೆ ಅಲ್ಲಿ ನಿನ್ನೆ ಒಂದೇ ದಿನ 100 ಕೋಟಿ ರೂ.ಗೂ ಅಧಿಕ ಮೊತ್ತದ ಮದ್ಯ ಮಾರಾಟವಾಗಿದೆ.
ಮದ್ಯ ಖರೀದಿಗೆ ಕಿ.ಮೀ.ಗಟ್ಟಲೇ ಸಾಲು ನಿಂತಿದ್ದು, ಲಾಠಿಚಾರ್ಜ್​ ಆಗಿದ್ದು ಭಾರಿ ಸುದ್ದಿಯಾಗಿದ್ದವು. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮದ್ಯ ಖರೀದಿಯ ಎರಡು ಬಿಲ್​ಗಳು ಭಾರಿ ಚರ್ಚೆಗೆ ಕಾರಣವಾಗಿದ್ದವು. 40 ದಿನದ ಬಾಕಿಯನ್ನೆಲ್ಲ ಒಂದೇ ದಿನ ಖರೀದಿಸಿದ್ದಾರೆ. ಮುಂದಿನ ಲಾಕ್​ಡೌನ್​ ಈಗಲೇ ಸ್ಟಾಕ್​ ಮಾಡಿಕೊಂಡಿದ್ದಾರೆ. ಬೆಂಗಳೂರನ್ನು ಮಂಗಳೂರು ಮೀರಿಸಿದೆ ಎಂದೆಲ್ಲ ಟ್ರೋಲ್​ ಮಾಡಲಾಗುತ್ತಿತ್ತು.
ಇದನ್ನೂ ಓದಿ;ಮನೆಯಲ್ಲೇ ಮದುವೆಯಾಗುವ ಜೋಡಿಗೆ ಇಲ್ಲಿದೆ ಪೊಲೀಸರ ಭರ್ಜರಿ ಆಫರ್​
ಈ ಟ್ರೋಲ್​ಗಳು ಅಬಕಾರಿ ಇಲಾಖೆಯ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು, ಮದ್ಯದಂಗಡಿ ಮಾಲೀಕನ ವಿರುದ್ಧ ಕೇಸ್​ ದಾಖಲಿಸಲು ಮುಂದಾಗಿದ್ದಾರೆ.
ಏಕೆ ಅಂತೀರಾ?… ಒಬ್ಬ ವ್ಯಕ್ತಿಗೆ 2.6 ಲೀಟರ್​ ದೇಶಿ ತಯಾರಿತ ವಿದೇಶಿ ಮದ್ಯ ಹಾಗೂ 18 ಲೀಟರ್​ ಬಿಯರ್​ ಮಾರಾಟ ಮಾಡಲು ಮಾತ್ರ ಅನುಮತಿ ನೀಡಲಾಗಿದೆ. ಆದರೆ, ಬೆಂಗಳೂರಿನ ತಾವರೆಕೆರೆಯಮದ್ಯದಂಗಡಿಯಲ್ಲಿ ಒಬ್ಬ ಗ್ರಾಹಕನಿಗೆ 52,841 ರೂ. ಮೌಲ್ಯದ 13.5 ಲೀಟರ್​ ಮದ್ಯ ಹಾಗೂ 35 ಲೀಟರ್​ ಬಿಯರ್​ ಮಾರಾಟ ಮಾಡಲಾಗಿದೆ.
ಈ ಬಿಲ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಅಬಕಾರಿಗಳು ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಅಂಗಡಿಯವರು ಹೇಳುವ ಪ್ರಕಾರ 8 ಜನರ ಗುಂಪು ಮದ್ಯ ಖರೀದಿಸಿದ್ದು, ಒಂದೇ ಕಾರ್ಡ್​ನಿಂದ ಸ್ವೈಪ್​ ಮಾಡಿದ್ದಾರೆ ಎಂಬ ಕಾರಣ ನೀಡಿದ್ದಾರೆ.
ಇನ್ನು, ಮಂಗಳೂರಿನ ಬಲ್ಮಠದಲ್ಲಿರುವ ಅಂಗಡಿಯಲ್ಲೂ 59,952 ರೂ. ಮೊತ್ತದ ಒಂದೇ ಬಿಲ್​ನಲ್ಲಿ 16.64 ಲೀಟರ್​ ಮದ್ಯ ಮಾರಾಟ ಮಾಡಲಾಗಿದೆ. ಈ ಪ್ರಕರಣವನ್ನು ಕೂಡ ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆಗೊಳಪಡಿಸಿದ್ದಾರೆ.
ಇದೆಂಥ ದೌರ್ಭಾಗ್ಯ.. ಕೇರಳದ ಅತಿದೊಡ್ಡ ಅರಮನೆಯಲ್ಲಿ ಅದರ ಮಾಲೀಕ ವಾಸವಿದ್ದದ್ದು ಕೇವಲ ಒಂದು ತಿಂಗಳಷ್ಟೇ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 15 =
Remember me
