ಬೆಂಗಳೂರು:ಅನ್​ಲಾಕ್ 4.0 ಜಾರಿಗೊಂಡ ಬಳಿಕ ರಾಜ್ಯದಲ್ಲಿ ಮದ್ಯ ವಹಿವಾಟು ಏರಿಕೆಯಾಗಿದ್ದು, ಆರ್ಥಿಕ ಸಂಕಷ್ಟದಿಂದ ನಲುಗಿದ್ದ ಸರ್ಕಾರ ಹಾಗೂ ಮದ್ಯದಂಗಡಿ ಮಾಲೀಕರಿಗೆ ತುಸು ನೆಮ್ಮದಿ ಸಿಕ್ಕಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 9,599 ಕೋಟಿ ರೂ. ಆದಾಯ ಹರಿದು ಬಂದರೆ ಈ ಬಾರಿ ಇದೇ ಅವಧಿಯ ಸೆ.9ರವರೆಗೆ 8,468 ಕೋಟಿ ರೂ. ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1,130 ಕೋಟಿ ರೂ. ಆದಾಯ ನಷ್ಟವಾಗಿದೆ. ರಾಜ್ಯದಲ್ಲಿ ಮಾ.23ರಿಂದ ಮೇ 3ರವರೆಗೆ ಅಂದರೆ 42 ದಿನ ಲಾಕ್​ಡೌನ್ ಮಾಡಲಾಗಿತ್ತು. ಇದರಿಂದ ಇಲಾಖೆಗೆ ಅಂದಾಜು 3 ಸಾವಿರ ಕೋಟಿ ರೂ. ಆದಾಯ ನಷ್ಟವಾಗಿತ್ತು. ಮೇ 4ರಿಂದ ಸಿಎಲ್2 ಹಾಗೂ ಸಿಎಲ್11ಸಿ ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ರಾಜ್ಯಾದ್ಯಂತ ಮದ್ಯ ವಹಿವಾಟು ಜೋರಾಗಿ ನಡೆಯಿತು.
ಬಳಿಕ, ಆನ್​ಲಾಕ್ 4.0 ಜಾರಿಯಾದ ಹಿನ್ನೆಲೆಯಲ್ಲಿ 5 ತಿಂಗಳಿಂದ ಮುಚ್ಚಲಾಗಿದ್ದ ಬಾರ್, ಪಬ್ ಹಾಗೂ ಕ್ಲಬ್​ಗಳಲ್ಲಿ ಸೆ.1ರಿಂದ ಆಹಾರದೊಂದಿಗೆ ಮದ್ಯ ಕುಡಿಯಲು ಅನುಮತಿ ನೀಡಿದ್ದರಿಂದ ಮದ್ಯ ವಹಿವಾಟಿನಲ್ಲಿ ತುಸು ಚೇತರಿಕೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
