ಬೆಂಗಳೂರು:ರಾಜ್ಯದಲ್ಲಿ ಆನ್​ಲೈನ್​ ಮೂಲಕ ಮನೆ ಬಾಗಿಲಿಗೇ ಮದ್ಯ ಸರಬರಾಜು ಮಾಡುವ ವಿಚಾರ ಮತ್ತೆ ಸದ್ದು ಮಾಡುತ್ತಿದೆ.
ಕರೊನಾ​ ಲೌಕ್​ಡೌನ್​ ವೇಳೆ ಆನ್​ಲೈನ್​ ಮೂಲಕ ಮದ್ಯ ಸರಬರಾಜು ಮಾಡುವ ಕುರಿತು ಆಯಾ ರಾಜ್ಯಗಳು ತೀರ್ಮಾನ ತೆಗೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್​ ಸಲಹೆ ನೀಡಿತ್ತು. ಅದರಂತೆ, ಕೆಲ ರಾಜ್ಯಗಳಲ್ಲಿ ಅನ್​ಲೈನ್​ನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದೀಗ ಕರ್ನಾಟಕದಲ್ಲೂ ಆದಾಯ ನಷ್ಟ ಸರಿದೂಗಿಸಿಕೊಳ್ಳಲು ಆನ್​ಲೈನ್​ನಲ್ಲಿ ಮದ್ಯ ಮಾರಾಟದ ಬಗ್ಗೆ ರಾಜ್ಯ ಸರ್ಕಾರವೂ ಗಂಭೀರ ಚರ್ಚೆ ನಡೆಸುತ್ತಿದೆ.
ಇದನ್ನೂ ಓದಿರಿಜು.31ರ ವರೆಗೆ ಎಲ್ಲ ಮದ್ಯದಂಗಡಿಗಳು ಓಪನ್​!
ರಾಜ್ಯದಲ್ಲಿ ವೈನ್​ಶಾಪ್​, ಕ್ಲಬ್​, ಸ್ಟಾರ್​ ಹೋಟೆಲ್​, ಬಾರ್​ ಆ್ಯಂಡ್​ ರೆಸ್ಟೋರೆಂಟ್​, ಎಂಎಸ್​ಐಎಲ್​, ವೈನ್​ ಬೋಟಿಕ್​, ಮೈಕ್ರೊ ಬ್ರಿವರಿ, ಮಿಲಿಟರಿ ಕ್ಯಾಂಟೀನ್​ ಸ್ಟೋರ್​ ಸೇರಿ ಒಟ್ಟು 11,037 ಮದ್ಯದಂಗಡಿಗಳಿವೆ. ಇದರಿಂದ ಪ್ರತಿ ವರ್ಷ 22,700 ಕೋಟಿ ರೂ. ರಾಜಸ್ವ ಸಂಗ್ರಹ ಆಗುತ್ತಿದೆ. ಒಂದು ವೇಳೆ ಮದ್ಯಮಾರಾಟಕ್ಕೆ ಆನ್​ಲೈನ್​ ವ್ಯವಸ್ಥೆ ಜಾರಿಗೆ ಬಂದರೆ ಸರ್ಕಾರಕ್ಕೆ ಪ್ರತಿ ವರ್ಷ 2,500 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ. ಹೀಗಾಗಿ, ಆನ್​ಲೈನ್​ ವ್ಯವಸ್ಥೆಗೆ ರಾಜ್ಯ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ.
ಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − two =
Remember me
