ಬೆಂಗಳೂರು:ರಾಜ್ಯದಲ್ಲಿ ಮದ್ಯಪ್ರಿಯರ ಸಂಖ್ಯೆ ದಿಢೀರ್​ ಕುಸಿತವಾಗಿದೆ! ಇದಕ್ಕೆ ಕೋವಿಡ್​-19 ಕಾರಣ! ಅರೆ ಕುಡಿತಕ್ಕೂ, ಕೋವಿಡ್​-19ಕ್ಕೆ ಏನು ಸಂಬಂಧ ಎಂಬ ಪ್ರಶ್ನೆ ಮನದಲ್ಲಿ ಮೂಡಿರಬಹುದು.
ಸಂಬಂಧವಿದೆ ಸ್ವಾಮಿ, ರಾಜ್ಯದಲ್ಲಿ ಕೋವಿಡ್​-19 ಲಾಕ್​ಡೌನ್​ ನಡುವೆ ಮದ್ಯ ಮಾರಾಟ ಪುನರಾರಂಭವಾದ ಬಳಿಕ ಸರ್ಕಾರ ಮದ್ಯದ ಮೇಲೆ ಶೇ.21ರಿಂದ ಶೇ.31 ಕೋವಿಡ್​ ತೆರಿಗೆಯನ್ನು ವಿಧಿಸಲಾರಂಭಿಸಿದೆ. ಮದ್ಯವನ್ನು ಮುಟ್ಟಿದರೆ ದರ ಏರಿಕೆಯಿಂದ ನಶೆ ಹಠಾತ್ತನೆ ಕುಸಿಯುವ ಭೀತಿ ಆರಂಭವಾದ ನಂತರದಲ್ಲಿ ಮದ್ಯಪ್ರಿಯರು ಅದರ ಸಹವಾಸವೇ ಬೇಡ ಎಂದು ದೂರ ಸರಿಯುತ್ತಿದ್ದಾರಂತೆ. ಇದರಿಂದಾಗಿ ರಾಜ್ಯದಲ್ಲಿ ಮದ್ಯ ಮಾರಾಟ ಪ್ರಮಾಣ ಶೇ.60 ಇಳಿಕೆಯಾಗಿದ್ದು, ರಾಜ್ಯ ಸರ್ಕಾರದ ಅಬಕಾರಿ ಆದಾಯಕ್ಕೂ ಸಂಚಕಾರ ಬಂದೊದಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ವಾಲಿಬಾಲ್​ ಆಡೋದನ್ನು ಬಿಟ್ಟು ಖಾರದಪುಡಿ ಎರಚಿ ಚಾಕುವಿನಿಂದ ಇರಿದರು!
ಮೇ 4ಕ್ಕೆ ಅಂತ್ಯಗೊಂಡ ಲಾಕ್​ಡೌನ್​ 2-.0 ಬಳಿಕ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರ ಹೆಚ್ಚುವರಿ ಆದಾಯ ಗಳಿಸಿಕೊಳ್ಳುವ ಉದ್ದೇಶದಿಂದ ಮದ್ಯದ ಮೇಲಿನ ಮೇಲ್ತೆರಿಗೆಯನ್ನು ಶೇ.21-31 ಹೆಚ್ಚಿಸಿತ್ತು. ಇದರಿಂದಾಗಿ ಆಯಾ ಬ್ರ್ಯಾಂಡ್​ಗಳನ್ನು ಆಧರಿಸಿ ಮದ್ಯದ ಬೆಲೆಗಳು ಕನಿಷ್ಠ 50 ರೂ.ನಿಂದ ಗರಿಷ್ಠ 1 ಸಾವಿರ ರೂ.ವರೆಗೆ ಹೆಚ್ಚಾಗಿದ್ದವು. ಮದ್ಯ ಮಾರಾಟ ಪುನರಾರಂಭವಾದ ಮೊದಲ ದಿನ ರಾಜ್ಯದಲ್ಲಿ ಒಟ್ಟು 232 ಕೋಟಿ ರೂ. ಮೊತ್ತದ ಮದ್ಯ ಮಾರಾಟವಾಗಿತ್ತು. ಆದರೆ ತೆರಿಗೆ ಹೆಚ್ಚಳದ ಬಿಸಿ ತಟ್ಟಲಾರಂಭಿಸಿದ ಬಳಿಕ ಜನರು ಕೂಡ ಮದ್ಯ ಸೇವೆಯನ್ನು ಕಡಿಮೆ ಮಾಡಿದರು. ಇದರಿಂದಾಗಿ ಮೇ 20ರ ವೇಳೆಗೆ ಮಾರಾಟದ ಮೊತ್ತ 61 ಕೋಟಿ ರೂ.ಗೆ ಇಳಿಕೆಯಾಗಿದೆ.
ಮದ್ಯ ಮಾರಾಟ ಕುಸಿತದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಿದ್ದ ಅಬಕಾರಿ ಆದಾಯದಲ್ಲೂ ಬಾರಿ ಕುಸಿತವಾಗಿದೆ. ಮೇ 4ರಿಂದ ಮೇ 20ರವರೆಗೆ 900 ಕೋಟಿ ರೂ. ಆದಾಯ ಬಂದಿದೆ. ಮೇ 31ರವರೆಗೆ ಇನ್ನು 500 ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ. ಆದರೂ ಸರ್ಕಾರ ಹಾಕಿಕೊಂಡಿರುವ 1,900 ಕೋಟಿ ರೂ. ಆದಾಯ ಸಂಗ್ರಹಣೆ ಗುರಿ ಸಾಧನೆ ವಿಫಲವಾಗುವ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗುತ್ತಿದೆ.
ಪುತ್ರನ ಮದುವೆ ಹಣ ಹೊಂದಿಸಲು ಹೊರಟ, ಮತಿ ತಪ್ಪಿ ಮೈಸೂರು ತಲುಪಿದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
