ಬೆಂಗಳೂರು: ಆರ್ಥಿಕ ಮುಗ್ಗಟ್ಟಿನ ಮಧ್ಯೆ ತುರ್ತು ಕೆಲಸಗಳ ಒತ್ತಡಕ್ಕೆ ಸಿಲುಕಿರುವ ಸರ್ಕಾರಕ್ಕೆ ಹೆಚ್ಚಿನ ಆದಾಯದ ಆಸೆ ಹುಟ್ಟಿಸಿ ಮದ್ಯ ಮಾರಾಟದ ಅವಧಿ ವಿಸ್ತರಿಸಿಕೊಳ್ಳುವ ಲಾಬಿ ತೆರೆಮರೆಯಲ್ಲಿ ನಡೆದಿದೆ. ‘ಕಬ್ಬಿಣ ಕಾದಾಗಲೇ ಬಡಿಯಬೇಕು’ ಎಂಬ ತಂತ್ರ ಅನುಸರಿಸಿದೆ.
ಮದ್ಯ ಮಾರಾಟದ ಅವಧಿಯನ್ನು ಒಂದು ತಾಸು ವಿಸ್ತರಿಸಿದರೆ ಸಾಕು, ಕುಸಿದ ಮದ್ಯ ವಹಿವಾಟು ಮತ್ತೆ ಚೇತರಿಸಿಕೊಳ್ಳುತ್ತದೆ. ಬೊಕ್ಕಸಕ್ಕೆ ಆದಾಯವೂ ಹೆಚ್ಚಲಿದ್ದು, ಮದ್ಯ ಮಾರಾಟಗಾರರು ನಷ್ಟ ಅನುಭವಿಸುವುದು ತಪು್ಪತ್ತದೆ ಎನ್ನುವ ಅರಿಕೆಯನ್ನು ಈ ಲಾಬಿ ನೇರ ಮುಖ್ಯಮಂತ್ರಿ ಕಿವಿಗೆ ಹಾಕಿದೆ.
ವಿಧಾನ ಸೌಧದಲ್ಲಿ ಪ್ರಮುಖ ನಾಲ್ಕು ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ತೆರಿಗೆ ಸಂಗ್ರಹದ ವಸ್ತುಸ್ಥಿತಿ ಸಿಎಂ ಪರಾಮಶಿಸಿದ್ದಾರೆ. ಬಾಕಿ ತೆರಿಗೆ ವಸೂಲಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿ ಸಭೆ ಮುಗಿಸಿ ಹೊರ ಬಂದ ಬಳಿಕ ಸಿಎಂ ಅವರನ್ನು ದಕ್ಷಿಣ ಕರ್ನಾಟಕ ಮದ್ಯ ಮಾರಾಟಗಾರರ ಸಂಘದ ಪ್ರಮುಖರೊಬ್ಬರು ಭೇಟಿಯಾಗಿ ಮೌಖಿಕ ಕೋರಿಕೆ ಮಂಡಿಸಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಒಂದು ತಾಸು ಮದ್ಯ ಮಾರಾಟದ ಅವಧಿ ವಿಸ್ತರಿಸಿ ಮಧ್ಯ ರಾತ್ರಿ 12.30ರ ತನಕ ಅನುಮತಿ ನೀಡಲಾಗಿದೆ. ಬಾಕಿಯಿರುವ ನಾಲ್ಕು ದಿನಗಳಿಗೆ ಇದೇ ಅವಧಿ ಅನ್ವಯಿಸಿದರೆ ಎಲ್ಲ ರೀತಿಯಿಂದಲೂ ‘ಅನುಕೂಲ ಕರ’ವೆಂದು ಮನವಿ ಮಾಡಿಕೊಂಡಿದೆ.
ಪ್ರತಿರೋಧದ ಆತಂಕ: ತೆರೆಮರೆಯ ಲಾಬಿ ಒತ್ತಡಕ್ಕಿಂತ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ಮದ್ಯ ಮಾರಾಟದ ಅವಧಿ ವಿಸ್ತರಿಸುವ ಒಳ ಆಸೆ ಸರ್ಕಾರಕ್ಕಿದೆ. ಆದರೆ, ಜನರ ಪ್ರತಿರೋಧ ಹಾಗೂ ಪ್ರತಿಪಕ್ಷದಗಳಿಗೆ ಸುಲಭದ ತುತ್ತಾಗಿ ಬಿಡಬಹುದು ಎನ್ನುವ ಕಾರಣಕ್ಕೆ ಹಿಂಜರಿಯುತ್ತಿದೆ ಎಂದು ಅಬಕಾರಿ ಇಲಾಖೆ ಉನ್ನತ ಮೂಲಗಳು ಹೇಳಿವೆ. ಅಬಕಾರಿ ಇಲಾಖೆಗೆ ಪ್ರಸಕ್ತ ವರ್ಷಗಳ ನಿಗದಿಪಡಿಸಿದ್ದ 20,950 ಕೋಟಿ ರೂ. ಗುರಿಯಲ್ಲಿ ಈಗಾಗಲೇ 16,100 ಕೋಟಿ ರೂ. ಸಂಗ್ರಹವಾಗಿದೆ. ಬಾಕಿಯಿರುವ ಮೂರು ತಿಂಗಳಲ್ಲಿ ಅನಾಯಾಸವಾಗಿ ಗುರಿ ಸಾಧನೆಯಾಗುತ್ತದೆ. ಬೆಂಗಳೂರು ಮಹಾ ನಗರದಲ್ಲಿ ಇನ್ನೊಂದು ತಾಸು ಮಾರಾಟದ ಅವಧಿ ವಿಸ್ತರಿಸಿದರೆ ಹೆಚ್ಚುವರಿಯಾಗಿ 4,000 ಕೋಟಿ ರೂ. ಆದಾಯ ಸಂಗ್ರಹಿಸಬಹುದು. ಆದರೆ, ಬೊಕ್ಕಸ ತುಂಬಿಕೊಳ್ಳಲು ಕುಡುಕರ ರಾಜ್ಯವನ್ನಾಗಿ ಮಾಡಲು ಹೊರಟಿದೆ ಎಂಬ ಅಪವಾದದ ಭೀತಿಯಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 10 =
Remember me
