ಮಂಡ್ಯ: ದೇಶಾದ್ಯಂತ ಲಾಕ್​ಡೌನ್ ಚಾಲ್ತಿಯಲ್ಲಿರುವ ಈ ಅವಧಿಯಲ್ಲಿ ಎಣ್ಣೆಪಾರ್ಟಿಗಳ ದಾಹ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಬಾರ್​ಗೇ ಕನ್ನ ಹಾಕುವಷ್ಟು!
ಹೌದು, ಮಂಡ್ಯ ತಾಲೂಕಿನ ಚಿಕ್ಕಮಂಡ್ಯ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿನ ಕೃತಿಕ ಬಾರ್ ನಲ್ಲಿ ಮದ್ಯ ಕಳ್ಳತನವಾಗಿದೆ. 23,000 ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಬ್ರಾಂಡ್ ಗಳ ಮದ್ಯವನ್ನು ಎಣ್ಣೆಪಾರ್ಟಿಗಳು ಕದ್ದೊಯ್ದಿರುವ ಶಂಕೆ ಇದೆ.
ಮಾರ್ಚ್​ 30ರಂದು ರಾತ್ರಿ ಈ ಕಳ್ಳತನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾರ್​ ಕಟ್ಟಡದ ಹಿಂಬದಿಯ ಕಿಟಕಿಯ ಕಂಬಿ ಕಿತ್ತು ಒಳಸೇರಿದ ಕಳ್ಳರು, ಕತ್ತಲಲ್ಲಿ ಟೋರ್ಚ್​ ಹಿಡಿದು ತಮಗೆ ಬೇಕಾದ ವಿವಿಧ ಬ್ರಾಂಡ್​ಗಳ ಮದ್ಯವನ್ನು ಕಳವು ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.ಸಿಸಿಟಿವಿ ದೃಶ್ಯಾವಳಿಯಲ್ಲಿ ಮೂವರು ಈ ಕೃತ್ಯವೆಸಗಿರುವುದು ಕಂಡುಬಂದಿದೆ. ಈ ಕೃತ್ಯಕ್ಕೂ ಮುನ್ನ, ತಮ್ಮದೇ ದೃಶ್ಯವನ್ನು ಅಲ್ಲಿದ್ದ ಟಿವಿಯಲ್ಲಿ ಕಂಡ ಕಾರಣ ಅದನ್ನು ಕಿತ್ತೊಗೆದಿದ್ದಾರೆ. ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕದ್ದು ಮುಚ್ಚಿ ಮದ್ಯ ಮಾರಿದರೆ ಎಚ್ಚರ:ಈ ನಡುವೆ ಮಂಡ್ಯದಲ್ಲಿ ಅಕ್ರಮವಾಗಿ ಕದ್ದುಮುಚ್ಚಿ ಮದ್ಯ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದ ಕಾರಣ, ಲಾಕ್ ಡೌನ್ ಮುಗಿದ ಬಳಿಕ ಮದ್ಯದ ಸ್ಟಾಕ್ ಪರಿಶೀಲಿಸಲಿದ್ದು, ವ್ಯತ್ಯಾಸವಿದ್ದಲ್ಲಿ ಪರವಾನಗಿ ರದ್ದುಗೊಳಿಸುವುದಾಗಿ ಮೈಸೂರು ವಲಯದ ಅಬಕಾರಿ ಇಲಾಖೆ ಜಂಟಿ ಆಯುಕ್ತ ಮಾದೇಶ್ ಎಚ್ಚರಿಸಿದ್ದಾರೆ.
ಮದ್ಯ ದಾಸ್ತಾನು ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ದೂರು ಬರುತ್ತಿವೆ. ಅಂತಹ ಕಡೆ ದಾಳಿ ಮಾಡಲಾಗುತ್ತಿದೆ. ಅಧಿಕಾರಿಗಳು ಇಂತಹ ಕೃತ್ಯಗಳಲ್ಲಿ ಶಾಮೀಲಾಗಿದರೂ ಅವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
https://www.vijayavani.net/minister-b-c-patil-and-team-visited-veg-market-to-create-awareness-about-social-distancing/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
