ಬೆಂಗಳೂರು:ಕನ್ನಡ ಸಾಹಿತ್ಯ ಲೋಕದಲ್ಲಿ ಅಜಾತಶತ್ರುವಿನಂತಿದ್ದ ಕಮಲಾ ಹಂಪನಾ ಅವರದ್ದು ದ್ವೇಷದ ದ್ವೀಪವನ್ನು ದಾಟಿದ್ದ ಅಪರೂಪದ ವ್ಯಕ್ತಿತ್ವ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬಣ್ಣಿಸಿದ್ದಾರೆ.ಗಾಂಧಿ ಭವನದಲ್ಲಿ ವಿವಿಧ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ‘ಕಮಲಾ ಹಂಪನಾ ನುಡಿಗೌರವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ಕೂಡಾ ದ್ವೇಷ,ಅಸೂಯೆ,ವೈಷಮ್ಯಗಳಿವೆ.ಆದರೆ ತಮ್ಮನ್ನು ಹಾಗೂ ತಮ್ಮ ಸಾಹಿತ್ಯವನ್ನು ಟೀಕಿಸಿದವರನ್ನೂ ಕೂಡಾ ದ್ವೇಷಿಸದೆ,ಮನುಷ್ಯ ಸಂಬಂಧಕ್ಕೆ ವಿಶೇಷ ಒತ್ತು ನೀಡುವ ಮೂಲಕ ದ್ವೇಷದ ದ್ವೀಪದಿಂದ ಹೊರಬಂದಿದ್ದವರು ಕಮಲಾ ಹಂಪನಾ.ಧರ್ಮ,ಜಾತಿ,ಭಾಷೆಯನ್ನು ಮೀರಿ ಬೆಳೆದಿದ್ದ ಅವರು ಪ್ರಜಾಸತ್ತಾತ್ಮಕ ಮನೋಧರ್ಮವನ್ನು ಹೊಂದಿದ್ದರು.ಕೇವಲ ಸಾಹಿತಿಯಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿ,ಸಾಮಾಜಿಕವಾಗಿಯೂ ಕೆಲಸ ಮಾಡಿದ್ದರು.
ಸಾಹಿತ್ಯಾತ್ಮಕವಾಗಿ ಎಲ್ಲ ಪ್ರಕಾರದ ಸುಮಾರು60ಕೃತಿಗಳನ್ನು ರಚಿಸಿದ್ದಾರೆ.ಅತ್ಯಂತ ಕ್ಲಿಷ್ಟ ಮತ್ತು ಶ್ರಮವುಳ್ಳ ಸಂಶೋಧನಾ ಕ್ಷೇತ್ರದಲ್ಲೂ ಅವರದು ಗಮನಾರ್ಹ ಕೊಡುಗೆ.ಸಾಮಾಜಿಕವಾಗಿ ಸೀಪರ ಕಾಳಜಿ,ಕೆಳಸಮುದಾಯದ ಧ್ವನಿಯಾಗಿ ಹಲವು ಹೋರಾಟ ಮಾಡಿದ್ದಾರೆ.ಸಾಂಸ್ಕೃತಿಕವಾಗಿ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸ್ಥಾಪನೆಗೆ ಕಾರಣೀಭೂತರಾಗಿದ್ದಾರೆ.ಆತ್ಮವಂಚನೆ,ಅನ್ಯವಂಚನೆ ಮಾಡದ ಕಮಲಾ ಹಂಪನಾ ಅವರ ಅಗಲುವಿಕೆ ಕನ್ನಡ ಸಾರಸ್ವತ ಲೋಕಕ್ಕೆ ಬಹಳ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಬರಗೂರು ವಿಷಾಧ ವ್ಯಕ್ತಪಡಿಸಿದರು.
ಬಂಡಾಯ ಸಾಹಿತ್ಯ ಸಂಘಟನೆ,ಕರ್ನಾಟಕ ಲೇಖಕಿಯರ ಸಂಘ,ಕರ್ನಾಟಕ ಗಾಂಧಿ ಸ್ಮಾರಕ ನಿಧಿ,ಬಹುರೂಪಿ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಹತ್ತಕ್ಕೂ ಹೆಚ್ಚು ಸಂಘಟನೆಗಳು ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು.
ಸಮಾರಂಭದಲ್ಲಿ ಸಚಿವ ಕೆ.ಎನ್.ರಾಜಣ್ಣ,ಹಿರಿಯ ಸಾಹಿತಿ ಹಂಪ ನಾಗರಾಜಯ್ಯ,ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ,ಲೇಖಕಿಯರ ಸಂಘದ ಅಧ್ಯಕ್ಷೆ ಹೆಚ್.ಎಲ್.ಪುಷ್ಪ,ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ,ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತಿತರರು ಉಪಸ್ಥಿತರಿದ್ದರು.
ಸಹಿಷ್ಣುತೆ,ಅಸೂಯೆ ಇಲ್ಲದ ವ್ಯಕ್ತಿತ್ವ,ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಕಮಲಮ್ಮನವರ ವ್ಯಕ್ತಿತ್ವ ಸಾಹಿತ್ಯ ಲೋಕಕ್ಕೆ ಮಾದರಿ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.ತಮ್ಮ ಸಂಬಂಧಿಗಳಾಗಿದ್ದ ಕಮಲಮ್ಮನವರು ಚಿಕ್ಕ ವಯಸ್ಸಿನಿಂದಲೂ ವಾತ್ಸಲ್ಯಮೂರ್ತಿಯಾಗಿದ್ದರು.ಅವರ ತಂದೆ ತಾಯಿಗಳು ಕೂಡಾ ನಿಸ್ವಾರ್ಥ ಜೀವನ ನಡೆಸಿ,ತಮ್ಮ ಪೂರ್ಣ ಆಸ್ತಿಯನ್ನು ದೇವಸ್ಥಾನಕ್ಕೆ ದಾನ ಮಾಡಿದ್ದರು.ಅಂತಹುದೆ ವ್ಯಕ್ತಿತ್ವವನ್ನು ಕಮಲಮ್ಮನವರೂ ರೂಢಿಸಿಕೊಂಡಿದ್ದರು ಎಂದು ಅವರು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + nine =
Remember me
