ಕೊಡಗು :ಕೋವಿಡ್​ ಆಸ್ಪತ್ರೆಯಲ್ಲಿ ಮೃತರ ಎಷ್ಟೋ ಬೆಲೆ ಬಾಳುವ ವಸ್ತುಗಳು ಕಳೆದುಹೋಗುವ ಪ್ರಸಂಗಗಳು ಈಗ ಸಾಮಾನ್ಯವಾಗಿವೆ. ಆದರೆ ಮಡಿಕೇರಿ ಕೋವಿಡ್​ ಆಸ್ಪತ್ರೆಯಲ್ಲಿ ಇತ್ತೀಚೆಗೆ ತನ್ನ ತಾಯಿಯನ್ನು ಕಳೆದುಕೊಂಡ ಪುಟ್ಟ ಬಾಲಕಿ ಆಕೆಯ ಮೊಬೈಲ್​ಅನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾಳೆ. ಬಾರದ ಊರಿಗೆ ತೆರಳಿರುವ ಅಮ್ಮನ ನೆನಪುಗಳಿರುವ ಮೊಬೈಲ್​ಅನ್ನು ಹುಡುಕಿಕೊಡಿ ಎಂಬ ಅವಳ ಅಹವಾಲು ಕರುಳು ಹಿಂಡುವಂತಿದೆ.
ಕೊಡಗು ಜಿಲ್ಲೆ ಕುಶಾಲನಗರದ ನಿವಾಸಿ ಪುಟ್ಟ ಬಾಲಕಿ ಹೃತಿಕ್ಷಳಿಗೆ ಮತ್ತು ಅವಳ ತಂದೆತಾಯಿಗೆ ಇತ್ತೀಚೆಗೆ ಕರೊನಾ ಸೋಂಕು ತಗುಲಿತು. ಅವಳೂ ಮತ್ತು ದಿನಗೂಲಿ ನೌಕರರಾದ ತಂದೆ ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡು ಚಿಕಿತ್ಸೆ ಪಡೆದರೆ, ತಾಯಿಯನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೇ 16 ರಂದು ಚಿಕಿತ್ಸೆ ಫಲಿಸದೆ ಆಕೆಯ ತಾಯಿ ಮೃತಪಟ್ಟರು. ಆ ವೇಳೆ ತಾಯಿಯ ಜೊತೆಗಿದ್ದ ಮೊಬೈಲ್ ವಾಪಸ್ ಸಿಕ್ಕಿರಲಿಲ್ಲ.
ಇದನ್ನೂ ಓದಿ:ಎಂಟು ತಿಂಗಳ ಮಗು ಇದೆ, ಪ್ಲೀಸ್‌ ಬಿಡಿ ಸರ್‌ ಎಂದ್ರೂ ಕೇಳಲಿಲ್ಲ… ಕಾಲು ಹಿಡಿದರೂ ಜಗ್ಗಲಿಲ್ಲ…!
ಆ ಮೊಬೈಲ್​ನಲ್ಲಿ ತನ್ನ ತಾಯಿಯ ಫೋಟೋಗಳು ಮತ್ತು ಇತರ ನೆನಪುಗಳು ಇವೆ ಎಂಬ ಕಾರಣಕ್ಕೆ ಇದೀಗ ಹೃತಿಕ್ಷ ಅದನ್ನು ವಾಪಸ್​ ಪಡೆಯುವ ಕಾತರದಲ್ಲಿದ್ದಾಳೆ. ಇದಕ್ಕಾಗಿ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮತ್ತು ಮಡಿಕೇರಿ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾಳೆ.
“ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ನೆನಪುಗಳು ಆ ಮೊಬೈಲ್‌ನಲ್ಲಿರುತ್ತದೆ. ಆದ್ದರಿಂದ ಯಾರಾದರೂ ತೆಗೆದುಕೊಂಡಿದ್ರೆ ಅಥವಾ ಯಾರಿಗಾದ್ರೂ ಸಿಕ್ಕಿದ್ರೆ ದಯವಿಟ್ಟು ಈ ತಬ್ಬಲಿಗೆ ಅದನ್ನು ತಲುಪಿಸಿ” ಎಂದು ಸಾರ್ವಜನಿಕವಾಗಿ ಮನವಿ ಮಾಡಿದ್ದಾಳೆ.

ಕುಡಿದ ಮತ್ತಿನಲ್ಲಿ ಮೀನುಗಾರರು ; ನಡುರಾತ್ರಿ ದಡಕ್ಕೆ ಅಪ್ಪಳಿಸಿದ ದೋಣಿ

17 ವರ್ಷದ ಬಾಲಕ ಬಲಿ… ಕರೊನಾಗಿಂತ ಮಾರಕವಾದ ಪೊಲೀಸರ ಲಾಠಿ !

VIDEO | ಆ್ಯಂಜಲೀನಾ ಜೋಲಿ ‘ಜೇನುಹುಳಗಳ ದಿನ’ ಆಚರಿಸಿದ್ದು ಹೀಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 4 =
Remember me
