ಬೆಂಗಳೂರು :ಸತತ 5 ವರ್ಷ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಯುವತಿಯೊಬ್ಬಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದರಿಂದ ಬಂಧನದ ಭೀತಿಗೆ ಒಳಗಾಗಿದ್ದ ಯುವಕನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನಗರದ ಬೊಮ್ಮನಹಳ್ಳಿಯ ಕಮಲೇಶ್ ಚೌಧರಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ, ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.
ಆರೋಪವೇನು? : ಕಮಲೇಶ್ ವಿರುದ್ಧ ಮಾರತ್​ಹಳ್ಳಿ ಠಾಣೆಗೆ ದೂರು ನೀಡಿದ್ದ ಸಂತ್ರಸ್ತೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಬೆದರಿಕೆ ಪ್ರಕರಣ ದಾಖಲಿಸಿದ್ದಳು. ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ ಹಾಗೂ ಅರ್ಜಿದಾರ 5 ವರ್ಷ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದರು. ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಬೇರೆಯಾಗಿದ್ದರು. ದೂರವಾದ ನಂತರವೂ ಸಂತ್ರಸ್ತೆಯ ಮನೆಗೆ ಮಧ್ಯರಾತ್ರಿ ಹೋಗುತ್ತಿದ್ದ ಅರ್ಜಿದಾರ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ನಡೆಸುತ್ತಿದ್ದ. ಜತೆಗೆ, ತಾನು ಹೇಳಿದ ಜಾಗಕ್ಕೆ ಬಂದು ಲೈಂಗಿಕ ಸಂಪರ್ಕ ಬೆಳೆಸಲು ಒತ್ತಡ ಹೇರುತ್ತಿದ್ದ. ಆತನ ಇಬ್ಬರು ಸ್ನೇಹಿತರೂ ಸಹ ಬೆದರಿಕೆ ಹಾಕುವ ಜತೆಗೆ ಮೊಬೈಲ್​ಗೆ ಸಂದೇಶ ಕಳುಹಿಸುವ ಮೂಲಕ ಕಿರುಕುಳ ನೀಡುತ್ತಿದ್ದರು ಎಂದು ಯುವತಿ ಆರೋಪಿಸಿದ್ದಾಳೆ. ಈ ಮಧ್ಯೆ ಯುವತಿಗೆ ಬೇರೊಬ್ಬರೊಂದಿಗೆ ಮದುವೆಯಾಗಿತ್ತು. ಆ ಬಳಿಕವೂ ಅರ್ಜಿದಾರ ಕಿರುಕುಳ ಮುಂದುವರಿಸಿದ್ದ. ಇದರಿಂದ, ಮಾನಸಿಕವಾಗಿ ಆಘಾತಗೊಂಡು ತಾನು ಆಸ್ಪತ್ರೆಗೂ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಳು.
ಇದನ್ನೂ ಓದಿ:ಮಹಿಳೆಯೊಬ್ಬರಿಗೆ ಬಹಿರಂಗವಾಗಿ ಕ್ಷಮೆಯಾಚಿಸಿದ ಅಮಿತಾಭ್​: ಅದಕ್ಕೆ ಕಾರಣ ಒಂದು ಕವನ…
ಹೈಕೋರ್ಟ್ ಹೇಳಿದ್ದೇನು? : ದೂರಿನಲ್ಲಿ ಘಟನೆಯ ನಿರ್ದಿಷ್ಟ ದಿನಾಂಕ ತಿಳಿಸಿಲ್ಲ. ಮೇಲಾಗಿ ದೂರುದಾರರು ಅರ್ಜಿದಾರನೊಂದಿಗೆ ಸುದೀರ್ಘ ಅವಧಿಯವರೆಗೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದಾರೆ. ಜತೆಗೆ, ಅತ್ಯಾಚಾರ ನಡೆದಿರುವುದನ್ನು ಸಾಬೀತುಪಡಿಸುವ ವೈದ್ಯಕೀಯ ಸಾಕ್ಷ್ಯಗಳನ್ನು ಒದಗಿಸಿಲ್ಲ. ಆದ್ದರಿಂದ, ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದಕ್ಕೆ ಇದು ಅರ್ಹ ಪ್ರಕರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿ ಮಾನ್ಯ ಮಾಡಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
‘ಪಾಲಿಟಿಕ್ಸ್​ಗೆ ಎಂಟ್ರಿಯಾಗದೇ ಎಕ್ಸಿಟ್ ಆಗೋ ಸಾಮರ್ಥ್ಯ ಇರೋದು ರಜಿನಿಕಾಂತ್​ಗೆ ಮಾತ್ರ!’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
