ಬೆಂಗಳೂರು:ಮದುವೆಯಾಗದೆ ಎರಡು ವರ್ಷ ಒಂದೇ ರೂಮ್​ನಲ್ಲಿದ್ದ ಬಾರ್ಬರ್​ ಮತ್ತು ಬ್ಯೂಟಿಷಿಯನ್ ಪ್ರೇಮ ಪ್ರಕರಣ ಕೊನೆಗೆ ಅನುಮಾನದಲ್ಲಿ ಅವಸಾನಗೊಂಡಿದೆ. ಮೂರನೆಯವರ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿ ಒಬ್ಬರ ಕೊಲೆಯಾಗಿದೆ. ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನಿನ್ನೆ ರಾತ್ರಿ ಈ ಪ್ರಕರಣ ನಡೆದಿದೆ.
ನೇಪಾಳ ಮೂಲದ ಕೃಷ್ಣಕುಮಾರಿ (23) ಕೊಲೆಯಾದ ಯುವತಿ, ಮೂಲತಃ ನೇಪಾಳದವನೇ ಆದ ಸಂತೋಷ್ ದಾಮಿ (27) ಕೊಲೆ ಆರೋಪಿ. ಕೃಷ್ಣಾಕುಮಾರಿ ಹೊರಮಾವು ಬಳಿ ಸ್ಪಾ ಒಂದರಲ್ಲಿ ಬ್ಯೂಟಿಷಿಯನ್ ಆಗಿದ್ದರೆ, ಸಂತೋಷ್​ ಟಿ.ಸಿ.ಪಾಳ್ಯದಲ್ಲಿ ಬಾರ್ಬರ್ ಶಾಪ್​ನಲ್ಲಿ ಕೆಲಸಕ್ಕಿದ್ದ. ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಇಬ್ಬರೂ ಒಂದೇ ರೂಮ್​ ಬಾಡಿಗೆ ಪಡೆದು ಎರಡು ವರ್ಷದಿಂದ ಒಟ್ಟಿಗೇ ವಾಸವಿದ್ದರು.
ಈ ಮಧ್ಯೆ ಇಬ್ಬರ ಮಧ್ಯೆ ಅನುಮಾನ ಉಂಟಾಗಿದ್ದು, ಅಸಮಾಧಾನ ಬೆಳೆದಿತ್ತು. ಅಲ್ಲದೆ ಆಕೆ ಯಾವಾಗಲೂ ಫೋನ್​ನಲ್ಲಿ ಇರುತ್ತಿದ್ದು, ಇನ್ನೊಬ್ಬರ ಜತೆ ಸಂಬಂಧ ಹೊಂದಿದ್ದಾಳೆಂದು ಸಂತೋಷ್ ಅನುಮಾನಪಡುತ್ತಿದ್ದ. ಈ ವಿಚಾರವಾಗಿ ಇಬ್ಬರ ಮಧ್ಯೆ ನಿನ್ನೆ ರಾತ್ರಿ ಗಲಾಟೆಯಾಗಿದ್ದು, ಅದೇ ಸಿಟ್ಟಲ್ಲಿ ಆತ ಅವಳ ತಲೆಯನ್ನು ಗೋಡೆಗೆ ಚಚ್ಚಿದ್ದ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಕೃಷ್ಣಾಕುಮಾರಿ ಬಳಿಕ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಳು.
ಈ ಹಿನ್ನೆಲೆಯಲ್ಲಿ ರಾತ್ರಿ 1.30ರ ಸುಮಾರಿಗೆ ರಾಮಮೂರ್ತಿನಗರದ ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ಹೋಗಿದ್ದು ಅವರು ಕೂಡಲೇ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕೊಲೆ ಪ್ರಕರಣ ದಾಖಲಾಗಿದೆ. ಮೂರು ವರ್ಷಗಳ ಹಿಂದೆ ಸಂತೋಷ್ ನಗರಕ್ಕೆ ಬಂದಿದ್ದು, ಎರಡು ವರ್ಷಗಳಿಂದ ಇಬ್ಬರೂ ಜೊತೆಗಿದ್ದರು. ಆಕೆ ಯಾವಾಗಲೂ ಫೋನ್​ ನೋಡಿಕೊಂಡು ಇರುತ್ತಿದ್ದುದರಿಂದ ಅವಳಿಗೆ ಬೇರೆವರ ಜತೆ ಸಂಬಂಧ ಇರಬೇಕು ಎಂದು ಸಂತೋಷ್ ಅನುಮಾನಪಟ್ಟಿದ್ದು, ಇದೇ ಜಗಳದಲ್ಲಿ ತಲೆಗೆ ಪೆಟ್ಟಾಗಿ ಆಕೆ ಸತ್ತಿದ್ದಾಳೆ. ಆಕೆಯ ಸಂಬಂಧಿಕರನ್ನು ಸಂಪರ್ಕಿಸಲು ಯತ್ನಿಸಲಾಗುತ್ತಿದೆ ಎಂದು ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಜಗಳದ ಸಂದರ್ಭದಲ್ಲಿ ಕೃಷ್ಣಕುಮಾರಿಗೆ ಸಂತೋಷ್​ ರಾಡ್​ನಿಂದ ಹೊಡೆದಿದ್ದು, ಆಕೆ ಆಗ ಸ್ನೇಹಿತೆಗೆ ವಿಡಿಯೋ ಕಾಲ್ ಮಾಡಿ ವಿಷಯ ತಿಳಿಸಿದ್ದಳು. ಬಳಿಕ ಸಂತೋಷ್ ಕೃಷ್ಣಕುಮಾರಿಯ ಕತ್ತು ಹಿಸುಕಿ, ತಲೆ ಗೋಡೆಗೆ ಚಚ್ಚಿದ್ದ ಎನ್ನಲಾಗಿದೆ. ನಂತರ ಬಂದ ಸ್ನೇಹಿತೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಲು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವಿಗೀಡಾದಳು.
ಮದುವೆಯಾಗಿ ವಿಚ್ಛೇದನ ಪಡೆದಿದ್ದ ಕೃಷ್ಣಾಕುಮಾರಿಗೆ ನಾಲ್ಕು ವರ್ಷದ ಒಂದು ಮಗು ಇರುವುದು ಕೂಡ ತಿಳಿದುಬಂದಿದೆ. ಅದಾಗ್ಯೂ ಆಕೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದಳು. ಆಕೆಯ ಶವವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ, ಪೋಷಕರು ಬಂದ ಬಳಿಕ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಂಡ್ತಿ ಜತೆ ಜಗಳವಾಡಿ ಬಂದವನ ಕಂಡು ನಾಯಿ ಬೊಗಳಿತು; ಸಿಟ್ಟಾದ ಆತ ಅದರ ಒಡತಿಯನ್ನೇ ಕೊಂದ!

ನಿನ್ನೆ ಒಂದೇ ದಿನ 108, ಇಂದು ಮತ್ತೆ 30 ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ಎಲ್ಲಿಗೆ ಯಾರು? ಇಲ್ಲಿದೆ ಪೂರ್ತಿ ಪಟ್ಟಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
