ಬೆಂಗಳೂರು: ದ್ವಿತೀಯ ಪಿಯುಸಿಯ ಪರೀಕ್ಷೆಯ ಬಹುನಿರೀಕ್ಷಿತ ಫಲಿತಾಂಶ ಪ್ರಕಟವಾಗಿದ್ದು, ಈಗಾಗಲೇ ವಿದ್ಯಾರ್ಥಿಗಳ ಮೊಬೈಲ್​ಗೆ ನೇರವಾಗಿ ರವಾನೆಯಾಗತೊಡಗಿದೆ. 6.75 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಇಂದು ಪ್ರಕಟವಾಗಿದ್ದು, ಇದರ ವಿವರವನ್ನು ಶಿಕ್ಷಣ ಇಲಾಖೆ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದೆ. ಮಾರ್ಚ್​ 4 ರಿಂದ 21 ರ ತನಕ ವಿವಿಧ ವಿಷಯಗಳ ಪರೀಕ್ಷೆಗಳು ನಡೆದಿದ್ದವು. ಇಂಗ್ಲಿಷ್ ಭಾಷಾ ಪರೀಕ್ಷೆ ನಂತರದಲ್ಲಿ ನಡೆದಿತ್ತು. ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್​.ಸುರೇಶ್ ಕುಮಾರ್ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳು ಹಾಜರಿದ್ದಾರೆ.
ದ್ವಿತೀಯ ಪಿಯು ರಿಸಲ್ಟ್​ ಚೆಕ್​ ಮಾಡುವುದು ಹೇಗೆ?
ಹಂತ 1 –http://karresults.nic.in/ವೆಬ್​ಸೈಟ್​ಗೆ ಭೇಟಿ ಕೊಡಿಹಂತ 2- ಹೋಮ್​ಪೇಜ್​ನಲ್ಲಿರುವ ರಿಸಲ್ಟ್​ ಲಿಂಕ್​ ಕ್ಲಿಕ್ ಮಾಡಿಹಂತ 3- ನಿಮ್ಮ ಲಾಗಿನ್ ಕ್ರೆಡೆನ್ಶಿಯಲ್ಸ್ ಬಳಸಿಕೊಂಡು ಸೈಟ್​ಗೆ ಲಾಗಿನ್​ ಆಗಿಹಂತ 4 – ನಿಮ್ಮ ಫಲಿತಾಂಶ ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ.ಹಂತ 5- ಅಗತ್ಯ ಇದ್ದರೆ ಡೌನ್​ಲೋಡ್​ ಮಾಡಿಕೊಂಡು ಪ್ರಿಂಟ್​ ತೆಗೆದಿಟ್ಟುಕೊಳ್ಳಬಹುದು.
Sign in to your account
Please enter an answer in digits:20 − 8 =
Remember me
