ಬೆಂಗಳೂರು:ನಗರದ ಮನೆ ಮಾಲೀಕರು ಬಾಡಿಗೆಗೆ ಮನೆ ಕೊಡುವ ಮುನ್ನ ಸಾಕಷ್ಟು ಬಾರಿ ಯೋಚನೆ ಮಾಡಿ, ವಿಚಾರಿಸಿ ಕೊಡಬೇಕು. ಇಲ್ಲವಾದಲ್ಲಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ.
ಖತರ್ನಾಕ್​ ಜೋಡಿಯೊಂದು ಲಿವಿಂಗ್​ ಟುಗೆದರ್​ನಲ್ಲಿ ಇದ್ದುಕೊಂಡೇ ಮನೆಯನ್ನು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಾಡಿಗೆ ಕೊಟ್ಟ ಮಾಲೀಕರ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಿರುವ ಜೋಡಿ, ಕಳ್ಳತನ ಮಾಡಲೆಂದೇ ನಾಲ್ಕು ತಿಂಗಳಿಂದ ಮನೆ ಬಾಡಿಗೆಗಿದ್ದರು. ಇದೀಗ ಸುಬ್ರಮಣ್ಯಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ:ಅಕ್ಕಿ ಬದಲು ಹಣ ಸರ್ಕಾರಕ್ಕೂ ಲಾಭ; ಮಾಸಿಕ ಸುಮಾರು 61.33 ಕೋಟಿ ರೂ. ಉಳಿಕೆ
ಲಿಖಿತ ಹಾಗೂ ಸುಮಂತ್ ಬಂಧಿತ ಆರೋಪಿಗಳು. ಬಾಡಿಗೆ ಮನೆ ಮಾಲೀಕನ ಮನೆಯಲ್ಲಿ ಬರೊಬ್ಬರಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಈ ಖತರ್ನಾಕ್ ಜೋಡಿ ಕದ್ದಿದೆ. ಈ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್​ನಲ್ಲಿ ನಡೆದಿದೆ.
ಪ್ರೇಮಲತಾ ಎಂಬುವವರ ಮನೆಯಲ್ಲಿ ಲಿಖಿತ ಮತ್ತು ಸುಮಂತ್​ ಕಳೆದ ನಾಲ್ಕು ತಿಂಗಳಿಂದ ಬಾಡಿಗೆಗೆ ಇದ್ದರು. ಈ ಸಮಯದಲ್ಲಿ ಮನೆ ಮಾಲೀಕರ ಚಲನಾವಲನವನ್ನು ವೀಕ್ಷಿಸಿದ್ದರು. ಬಳಿಕ ಮನೆ ಖಾಲಿ ಮಾಡಿದ್ದರು. ಮನೆ ಖಾಲಿ ಮಾಡಿದ ಕೆಲವೇ ದಿನಗಳಲ್ಲಿ ಮಾಲೀಕರ ಮನೆಯಲ್ಲಿ ಕಳ್ಳತನ ನಡೆದಿತ್ತು.
ಈ ಸಂಬಂಧ ಮಾಲೀಕರು ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಖತರ್ನಾಕ್​ ಜೋಡಿಯ ಕೈಚಳಕ ಬೆಳಕಿಗೆ ಬಂದಿದೆ. ಚಿನ್ನದ ಒಡವೆಗಳನ್ನು ಮಾರಿ ಇಬ್ಬರು ಶಿವಮೊಗ್ಗದಲ್ಲಿ ನೆಲೆಸಿದ್ದರು. ಬಾಡಿಗೆ ಜಾಸ್ತಿ ಬರುತ್ತದೆ ಎಂಬ ಆಸೆಯಿಂದ ಲಿವಿಂಗ್ ಟುಗೆದರ್ ಜೋಡಿಗೆ ಮಾಲೀಕರು ಬಾಡಿಗೆ ಕೊಟ್ಟಿದ್ದರು.
ಇದನ್ನೂ ಓದಿ:ಸ್ವಯಂಪ್ರೇರಿತ ರಕ್ತದಾನಿಗಳಿಗೆ ಸನ್ಮಾನ -ಯುವಕರು ರಕ್ತದಾನಕ್ಕೆ ಮುಂದಾಗಲಿ- ಸುಭಾಶ್ಚಂದ್ರ
ಸದ್ಯ ಪ್ರಕರಣ ದಾಖಲಿಸಿ ಸುಬ್ರಮಣ್ಯಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಣ ಖಾಲಿಯಾದ ಹಿನ್ನಲೆ ಖತರ್ನಾಕ್​ ಜೋಡಿ ಮತ್ತೊಂದು ಕೃತ್ಯವೆಸಗಲು ತಯಾರಿ ನಡೆಸುತ್ತಿದ್ದರು ಎಂಬುದು ವಿಚಾರಣೆ ವೇಳೆ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.(ದಿಗ್ವಿಜಯ ನ್ಯೂಸ್​)
ಚಂದ್ರನ ಮೇಲೆ ಗಣಿಗಾರಿಕೆಗೆ ನಾಸಾ ಯೋಜನೆ; ಮುಂದಿನ ಹತ್ತು ವರ್ಷದ ಪ್ಲ್ಯಾನ್

ಸುದ್ದಿ ಸಮಗ್ರ | ಸಮಾನ ಸಂಹಿತೆ ಸುತ್ತ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − three =
Remember me
