ಶಿವರಾಜ ಎಂ. ಬೆಂಗಳೂರು ಗ್ರಾಮಾಂತರಎರಡು ನೂರು ಯೂನಿಟ್ ಉಚಿತ ವಿದ್ಯುತ್ ಗ್ಯಾರಂಟಿಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಅನಧಿಕೃತ ಲೋಡ್ ಶೆಡ್ಡಿಂಗ್ ಆರಂಭಿಸಿದ್ದು, ರೈತಾಪಿ ವರ್ಗವನ್ನು ಕಂಗೆಡಿಸಿದೆ. ಕೃಷಿ ಪಂಪ್​ಸೆಟ್​ಗಳಿಗೆ 7 ತಾಸು ನೀಡಲಾಗುತ್ತಿದ್ದ ವಿದ್ಯುತ್ ದಿಢೀರ್ 3 ತಾಸು ಕಡಿತದ ಅನುಮಾನ ಮೂಡಿದೆ.
ಬೇಸಿಗೆಗೆ ಮುನ್ನವೇ ಲೋಡ್​ಶೆಡ್ಡಿಂಗ್ ಜಾರಿಗೆ ಮೌಖಿಕವಾಗಿ ಅಧಿಕಾರಿಗಳಿಗೆ ನಿರ್ದೇಶನ ರವಾನೆಯಾಗುತ್ತಿದೆ ಎನ್ನಲಾಗಿದೆ. ವಿದ್ಯುತ್ ಪರಿವರ್ತಕಗಳ ರಿಪೇರಿ, ಫೀಡರ್ ಸಮಸ್ಯೆ ಮತ್ತಿತರ ಕಾರಣ ನೀಡುತ್ತಿರುವ ಅಧಿಕಾರಿಗಳು ರೈತರ ಕಣ್ಣೊರೆಸುವ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗಾಗಲೇ ಪ್ರಾಯೋಗಿಕವಾಗಿ 2 ತಾಸು ವಿದ್ಯುತ್ ಕಡಿತಗೊಳ್ಳುತ್ತಿದ್ದು, ಹಂತ-ಹಂತವಾಗಿ ಇತರ ಜಿಲ್ಲೆಗಳಿಗೂ ವಿಸ್ತರಣೆಯಾಗುವ ಲಕ್ಷಣ ಕಂಡುಬರುತ್ತಿದೆ.
ಕೃಷಿಗೆ ಸಂಕಷ್ಟ: ರಾಜ್ಯದಲ್ಲಿ ಸುಮಾರು 32 ಲಕ್ಷ ಕೃಷಿ ಪಂಪ್​ಸೆಟ್​ಗಳಿದ್ದು, ಕೃಷಿ ವಲಯಕ್ಕೆ ಶೇ.35 ವಿದ್ಯುತ್ ಬಳಕೆಯಾಗುತ್ತಿದೆ. ಮಳೆ ಕೊರತೆಯಿಂದ ಎಲ್ಲೆಡೆ ಪಂಪ್​ಸೆಟ್​ಗಳ ಅವಲಂಬನೆ ಹೆಚ್ಚಾಗಿದೆ. ಮಳೆಯಾಶ್ರಿತ ಪ್ರದೇಶಗಳು ಸಂಪೂರ್ಣ ಒಣಗಿಹೋಗಿದ್ದರೆ, ಕೊಳವೆಬಾವಿ ಆಶ್ರಿತ ಪ್ರದೇಶಗಳಲ್ಲಿ ಬೆಳೆ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ನಿಯಮದಂತೆ ಕೃಷಿ ಪಂಪ್​ಸೆಟ್​ಗಳಿಗೆ 7 ತಾಸು ವಿದ್ಯುತ್ ಪೂರೈಸಬೇಕು.
ಅದರಲ್ಲಿ ಹಗಲಿನಲ್ಲಿ 4 ತಾಸು ನೀಡಬೇಕೆಂಬ ನಿಯಮವಿದೆ. ಆದರೆ ರೈತರಿಗೆ ಲೋಡ್​ಶೆಡ್ಡಿಂಗ್ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೋರಾಟಕ್ಕೆ ರೈತ ಸಂಘಗಳು ಸಜ್ಜು: ಈಗಾಗಲೇ ಹಲವು ಜಿಲ್ಲೆಗಳಲ್ಲಿ ವಾರದಲ್ಲಿ ಮೂರ್ನಾಲ್ಕು ದಿನ 7 ತಾಸಿಗೆ ಬದಲು 5 ತಾಸು ವಿದ್ಯುತ್ ಪೂರೈಸಲಾಗುತ್ತಿದೆ. ಇದರಿಂದ ಆಕ್ರೋಶಗೊಂಡಿರುವ ರೈತ ಸಂಘಟನೆಗಳು ಧರಣಿ, ಪ್ರತಿಭಟನೆಗೆ ಬೀದಿಗಿಳಿಯಲು ಸಜ್ಜಾಗುತ್ತಿವೆ.
10 ಸಾವಿರ ಮೆಗಾವಾಟ್ ದಾಟಿಲ್ಲ!:ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 32 ಸಾವಿರ ಮೆಗಾವಾಟ್ ಇದೆ ಎನ್ನಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 16 ಸಾವಿರ ಮೆಗಾವಾಟ್​ಗೆ ಬೇಡಿಕೆ ಇದೆ. ಆದರೆ ವಿದ್ಯುತ್ ಉತ್ಪಾದನೆ 10 ಸಾವಿರ ಮೆಗಾವಾಟ್ ದಾಟುತ್ತಿಲ್ಲ ಎನ್ನಲಾಗಿದೆ. ಹೊಸ ಸಂಪರ್ಕಕ್ಕಾಗಿ ಲಕ್ಷಾಂತರ ರೈತರು ಅರ್ಜಿ ಸಲ್ಲಿಸಿದ್ದಾರೆ. ಇರುವ ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್ ನೀಡಲು ತಿಣುಕಾಡುತ್ತಿರುವ ಸರ್ಕಾರ ಹೊಸ ಅರ್ಜಿಗಳತ್ತ ತಿರುಗಿಯೂ ನೋಡುತ್ತಿಲ್ಲ.
ಮಳೆ ಕೊರತೆಯಿಂದ ಈಗಾಗಲೇ ಮಳೆಯಾಶ್ರಿತ ಪ್ರದೇಶಗಳ ಬೆಳೆ ಸಂಪೂರ್ಣ ಹಾಳಾಗಿದೆ. ಕೊಳವೆಬಾವಿ ಆಶ್ರಯಿಸಿರುವ ರೈತರು ಬೆಳೆಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಇಂಥ ವಿಷಯ ಪರಿಸ್ಥಿತಿಯಲ್ಲಿ ಲೋಡ್​ಶೆಡ್ಡಿಂಗ್ ಮಾಡಿದರೆ ರೈತಾಪಿ ವರ್ಗದ ಸ್ಥಿತಿ ಏನಾಗಬಹುದು? ಬೆಳೆಗಳ ಪರಿಸ್ಥಿತಿ ಏನು? ಎಂಬ ಅತಂಕ ಎದುರಾಗಿದೆ.
| ದೇವರಾಜ್, ಅಧ್ಯಕ್ಷ, ರಾಜ್ಯ ರೈತ ಸಂಘ ಮಾದನಾಯಕನಹಳ್ಳಿ ಘಟಕ
ಮಳೆ ಕೊರತೆಯಿಂದ ಬೋರ್​ವೆಲ್ ಅವಲಂಬನೆ ಹೆಚ್ಚಾಗಿದೆ. ಇದರಿಂದ ವಿದ್ಯುತ್ ಬೇಡಿಕೆಯೂ ಏರಿಕೆಯಾಗಿದೆ. ಲೋಡ್​ಶೆಡ್ಡಿಂಗ್ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ. ಆದರೆ ತಾಂತ್ರಿಕ ಕಾರಣಗಳಿಂದ ಕೆಲವು ವೇಳೆ ವಿದ್ಯುತ್ ಪೂರೈಕೆ ಸ್ಥಗಿತವಾಗುತ್ತಿದ್ದು, ಲೋಡ್​ಶೆಡ್ಡಿಂಗ್ ಅನಿವಾರ್ಯವಾಗಿದೆ.
| ಹೆಸರು ಹೇಳಲಿಚ್ಛಿಸದ ಅಧಿಕಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
