| ಕೀರ್ತಿನಾರಾಯಣ ಸಿ. ಬೆಂಗಳೂರುಅಸ್ತಿತ್ವದಲ್ಲೇ ಇಲ್ಲದ ವಾಹನಗಳ ಖೊಟ್ಟಿ ದಾಖಲೆ ಸೃಷ್ಟಿಸಿ ಬ್ಯಾಂಕ್​ಗಳಿಂದ ಕೋಟ್ಯಂತರ ರೂ. ಸಾಲ ಪಡೆದು ವಂಚಿಸುತ್ತಿರುವ ಭಾರಿ ವಂಚನೆ ಜಾಲ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಆರ್​ಸಿ ಕಾರ್ಡ್​, ಫಿಟ್ನೆಸ್​ ಸರ್ಟಿಫಿಕೇಟ್​, ವಿಮೆ, ಮರುನೋಂದಣಿ ಸೇರಿ ಇನ್ನಿತರ ನಕಲಿ ದಾಖಲೆಗಳ ಸೃಷ್ಟಿಗೆ ಆರ್​ಟಿಒ ಅಧಿಕಾರಿಗಳೇ ವಂಚಕರ ಜತೆ ಕೈಜೋಡಿಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಸದ್ಯ 10 ಲಾರಿಗಳ ಹೆಸರಿನಲ್ಲಿ ಸಾಲ ಪಡೆದು ವಂಚಿಸಿರುವ ಪ್ರಕರಣ ಬಯಲಾಗಿದ್ದು, ಇನ್ನೂ 175ಕ್ಕೂ ಅಧಿಕ ವಾಹನಗಳಿಗೆ ಇದೇ ರೀತಿ ದಾಖಲೆ ಪತ್ರ ಮಾಡಿಕೊಟ್ಟಿರುವ ಶಂಕೆಯಿದೆ. ಸಾರಿಗೆ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿರುವ ಈ ಪ್ರಕರಣದ ವಿವರಣೆ ಹಾಗೂ ದಾಖಲಾತಿ ಸಲ್ಲಿಸುವಂತೆ ಬೆಂಗಳೂರಿನ ಕೇಂದ್ರ ಹಾಗೂ ಎಲೆಕ್ಟ್ರಾನಿಕ್​ ಸಿಟಿ ಆರ್​ಟಿಒಗಳಿಗೆ ನೋಟಿಸ್​ ಜಾರಿಯಾಗಿದೆ.ಏನಿದು ಪ್ರಕರಣ?: 2019&20ರ ಏ.22ರಂದು 10 ಲಾರಿಗಳ ಮೇಲೆ ಸಾಲ ಪಡೆದು ವಂಚಿಸಿರುವ ಬಗ್ಗೆ ಚೋಳಮಂಡಲಂ ೈನಾನ್ಸ್​ ಕಂಪನಿ ಕೊಟ್ಟ ದೂರಿನ ಮೇರೆಗೆ ಮೈಸೂರಿನ ದೇವರಾಜ ಪೊಲೀಸ್​ ಠಾಣೆಯಲ್ಲಿ 11 ಜನರ ವಿರುದ್ಧ ಎ್​ಐಆರ್​ ದಾಖಲಾಗಿದೆ. ತನಿಖೆ ಮುಂದುವರಿಸಿದಾಗ ಬೆಂಗಳೂರಿನ ಕೇಂದ್ರ ಮತ್ತು ಎಲೆಕ್ಟ್ರಾನಿಕ್​ ಸಿಟಿ ಆರ್​ಟಿಒ ಕಚೇರಿಗಳಿಗೆ ವಂಚಕ ಜಾಲದ ನಂಟಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲ. ಸಾಲ ಪಡೆಯಲು ಸಲ್ಲಿಸಿರುವ ದಾಖಲೆಗಳು ಈ ಆರ್​ಟಿಒ ಕಚೇರಿಗಳಿಂದಲೇ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ. ಗಂಭೀರ ಪ್ರಕರಣವಾದ ಹಿನ್ನೆಲೆಯಲ್ಲಿ ಕೋರ್ಟ್​ನಿಂದ ಸರ್ಚ್​ ಮತ್ತು ಜಪ್ತಿ ವಾರಂಟ್​ ಪಡೆದ ಮೈಸೂರು ಪೊಲೀಸರು,ಈ ಎರಡೂ ಆರ್​ಟಿಒ ಕಚೇರಿಗಳ ಮೇಲೆ ದಿಢೀರ್​ ದಾಳಿ ನಡೆಸಿ ಪರಿಶೀಲಿಸಿ ದಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ದಾಖಲೆ ಪತ್ರ ಪತ್ತೆಯಾಗಿದೆ.
1 ವಾಹನಕ್ಕೆ <50 ಸಾವಿರ:ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನ ಮರುನೋಂದಣಿ ಮಾಡುವ ಮುನ್ನ ವಾಹನ ಹಾಗೂ ಅದರ ದಾಖಲೆ ಪತ್ರ ಪರಿಶೀಲಿಸಬೇಕಾಗುತ್ತದೆ. ಆದರೆ, ಕೇಂದ್ರ ಮತ್ತು ಎಲೆಕ್ಟ್ರಾನಿಕ್ಸ್​ ಸಿಟಿ ಆರ್​ಟಿಒ ಅಧಿಕಾರಿಗಳು, ಭೌತಿಕವಾಗಿ ವಾಹನ ಪರಿಶೀಲಿಸದೆಯೇ ಕರ್ನಾಟಕಕ್ಕೆ ವಾಹನಗಳನ್ನು ಮರುನೋಂದಣಿ ಮಾಡಿಸಿ, ಮೂಲ ಆರ್​ಸಿ ಕಾರ್ಡ್​ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ 1 ವಾಹನಕ್ಕೆ 50 ಸಾವಿರ ರೂ.ವರೆಗೆಲಂಚ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ವಂಚನೆ ಹೇಗೆ?ಹೆವಿ ಗೂಡ್ಸ್​ ವೆಹಿಕಲ್​ಗಳು ಹಾಗೂ ಲಾರಿಗಳಿಗೆ ಆಂಧ್ರಪ್ರದೇಶಕ್ಕೆ ಸೇರಿದ ವಾಹನಗಳೆಂದು ನಕಲಿ ಆರ್​ಸಿ ಕಾರ್ಡ್​ ಹಾಗೂ ಇನ್ನಿತರ ದಾಖಲೆ ಸೃಷ್ಟಿಸಿದ್ದಾರೆ. ಬಳಿಕ ಕರ್ನಾಟಕ ರಾಜ್ಯಕ್ಕೆ ವಾಹನಗಳ ಮರುನೋಂದಣಿ ಮತ್ತು ವಿಳಾಸ ಬದಲಾವಣೆ (ವೆಹಿಕಲ್​ ಟ್ರಾನ್ಸ್​ ರ್​) ಕೋರಿ ಬೆಂಗಳೂರಿನ ಕೇಂದ್ರ ಮತ್ತು ಎಲೆಕ್ಟ್ರಾನಿಕ್ಸ್​ ಸಿಟಿ ಆರ್​ಟಿಒ ಕಚೇರಿಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಇಲ್ಲಿ ಮೂಲ ಆರ್​ಸಿ ಕಾರ್ಡ್​ ಗಳನ್ನು ಮಾಡಿಸಿಕೊಂಡಿದ್ದಾರೆ. ಈ ದಾಖಲೆಗಳನ್ನೇ ಸಲ್ಲಿಸಿ ಬೇರೆಬೇರೆ ೈನಾನ್ಸ್​ ಕಂಪನಿಗಳಿಂದ ಕೋಟ್ಯಂತರ ರೂ. ಸಾಲ ಪಡೆಯಲಾಗಿದೆ.
175ಕ್ಕೂ ಅಧಿಕ ಪ್ರಕರಣ?ಸದ್ಯ 10 ಲಾರಿಗಳ ಸಾಲಕ್ಕೆ ಸಂಬಂಧಿಸಿದಂತೆ ಎ್​ಐಆರ್​ ದಾಖಲಾಗಿದೆಯಾದರೂ ಈ ಎರಡೂ ಆರ್​ಟಿಒ ಕಚೇರಿಗಳಿಂದ 175ಕ್ಕೂ ಅಧಿಕ ವಾಹನಗಳಿಗೆ ಇದೇ ರೀತಿ ನಕಲಿ ದಾಖಲೆ ಪತ್ರ ಮಾಡಿಕೊಟ್ಟಿರುವ ಶಂಕೆ ಇದೆ. ಅವುಗಳನ್ನೇ ಬೇರೆಬೇರೆ ಬ್ಯಾಂಕ್​ಗಳಿಗೆ ಸಲ್ಲಿಸಿ ಸಾಲ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿರುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಮೋಸದ ಜಾಲದಲ್ಲಿ ಆರ್​ಟಿಒ ಅಧಿಕಾರಿಗಳು ಹಾಗೂ ಬ್ಯಾಂಕ್​ ಅಧಿಕಾರಿಗಳು ಭಾಗಿಯಾಗಿರುವುದು ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ. ಆರ್​ಟಿಒದ ಕೆಲ ಅಧಿಕಾರಿಗಳನ್ನು ಈಗಾಗಲೇ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ದಾಖಲೆ ಪರಿಶೀಲನೆ ನಡೆಯುತ್ತಿದ್ದು, ಆರೋಪ ಸಾಬೀತಾದರೆ ಅಧಿಕಾರಿಗಳನ್ನು ಬಂಧಿಸಲಾಗುತ್ತದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈವರೆಗೆ 15ಜನರನ್ನು ಬಂಧಿಸಲಾಗಿದೆ. ಸಾಲಕ್ಕಾಗಿ ಸಲ್ಲಿಸಿ ರುವ ದಾಖಲೆಗಳೆಲ್ಲ ನಕಲಿ. ಕರೊನಾ ಹಿನ್ನೆಲೆಯಲ್ಲಿ ಆರ್​ಟಿಒ ಕಚೇರಿಗಳು ಬಂದ್​ ಆಗಿದ್ದರಿಂದ ತನಿಖೆ ಮುಂದುವರಿಸಿರಲಿಲ್ಲ. ಈಗ ದಾಖಲೆ ಕಲೆಹಾಕಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳಾಗಿರು ವುದರಿಂದ ಸಾ$್ಯ ಸಿಕ್ಕ ನಂತರ ಕ್ರಮ ತೆಗೆದುಕೊಳ್ಳಲಾಗುತ್ತದೆ.> ಗೀತಾ ಪ್ರಸನ್ನ ಡಿಸಿಪಿ, ಮೈಸೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
