ಶಿವಮೊಗ್ಗ:ಸಾಲದ ಶೂಲಕ್ಕೆ ಸಿಲುಕಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಧಾರುಣವಾಗಿ ಮೃತಪಟ್ಟ ಘಟನೆ ಶಿವಮೊಗ್ಗ ನಗರದ ಮಿಳ್ಳಘಟ್ಟದ ಕೆರೆಯಂಗಳದಲ್ಲಿ ನಡೆದಿದೆ.
ಮಿಳ್ಳಘಟ್ಟದ ಪರಂದಯ್ಯ(70), ಇವರ ಪತ್ನಿ ದಾನಮ್ಮ(61) ಮತ್ತು ಪುತ್ರ ಮಂಜುನಾಥ (25) ಮೃತ ದುರ್ದೈವಿಗಳು. 40 ವರ್ಷಗಳ ಹಿಂದೆ ಪರಂದಯ್ಯ ಮತ್ತು ದಾನಮ್ಮ ಮದುವೆಯಾಗಿದ್ದು, ದಂಪತಿಗೆ ಮಕ್ಕಳಿರಲಿಲ್ಲ. ಹಾಗಾಗಿ ಮಂಜುನಾಥನನ್ನು ದತ್ತು ಪಡೆದು ಸಾಕಿದ್ದರು. ಮಿಳ್ಳಘಟ್ಟದ ಕೆರೆಯಂಗಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬ ಕೂಲಿ ಕೆಲಸ ಮಾಡಿಕೊಂಡಿತ್ತು.
ಜೀವನ ನಿರ್ವಹಣೆಗಾಗಿ ಕೆಲ ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಹೊಸಪೇಟೆಗೆ ಕುಟುಂಬ ಹೋಗಿ ನೆಲೆಸಿತ್ತು. ನಾಲ್ಕು ವರ್ಷಗಳ ಹಿಂದೆ ಮರಳಿದ್ದ ಕುಟುಂಬ ಆನಂದರಾವ್ ಬಡಾವಣೆ ಹತ್ತಿರದ ಮಿಳ್ಳಘಟ್ಟ ಕೆರೆ ಅಂಗಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಸಾಕಿದ ಮಗನಿಗೂ ಸ್ಟ್ರೋಕ್ ಹೊಡೆದ ಹಿನ್ನೆಲೆ ಆತ ಕೂಡ ಮನೆಯಲ್ಲಿ ಹಾಸಿಗೆ ಹಿಡಿದ್ದ. ಪತಿಗೆ ವಯಸ್ಸಾಗಿದ್ದರಿಂದ ಕೆಲಸ ಇರಲಿಲ್ಲ. ಪತ್ನಿಯೇ ಕೂಲಿ ಕೆಲಸ ಮಾಡಿ ಗಂಡ ಮತ್ತು ಮಗನನ್ನು ಸಾಕುತ್ತಿದ್ದರು. ಮನೆ ಬಾಡಿಗೆ ಕಟ್ಟಲೂ ಆಗದೆ ದಂಪತಿ ಪರದಾಡುತ್ತಿದ್ದರು. ಬದುಕಿನ ಬಂಡಿ ಸಾಗಿಸಲು ವೃದ್ಧೆ ಕೈ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಾಟ ಸಹಿಸಲಾಗಿದೆ ಹಾಗೂ ಜೀವನ ನಿರ್ವಹಣೆ ಮಾಡಲು ಆಗದೆ ಮನನೊಂದ ಮೂವರು ಬುಧವಾರ ರಾತ್ರಿ ಊಟದಲ್ಲಿ ವಿಷ ಸೇವಿಸಿ ಮನೆಯಲ್ಲೇ ಇಡೀ ದಿನ ನರಳಾಡಿದ್ದಾರೆ.
ಗುರುವಾರ ಸಂಜೆ ಸಂಬಂಧಿಕರು ಮನೆಗೆ ಹೋಗಿ ನೋಡಿದಾಗ ದಂಪತಿ ಮೃತಪಟ್ಟಿದ್ದು, ಮಂಜುನಾಥ ಅಸ್ವಸ್ಥಗೊಂಡಿರುವುದು ಬೆಳಕಿಗೆ ಬಂದಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಮಂಜುನಾಥನನ್ನು ಆಸ್ಪತ್ರೆಗೆ ತಕ್ಷಣ ಸಾಗಿಸಲಾಯಿತ್ತಾದರೂ ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ. ದೊಡ್ಡಪೆಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲದ ಶೂಲಕ್ಕೆ ಮೂರು ಅಮಾಯಕ ಜೀವಗಳು ಬಲಿಯಾಗಿದ್ದು ವಿಪರ್ಯಾಸ.
ಸ್ಯಾಂಡಲ್​ವುಡ್ ನಟ, ನಿರ್ದೇಶಕ ಗುರುಪ್ರಸಾದ್ ಬಂಧನ

5 ವರ್ಷದ ಮಗುವಿನ ಪ್ರಾಣ ಉಳಿಸಿಕೊಳ್ಳಲು ನೆರವಾಗಿ… ಮದ್ದೂರು ಮೂಲದ ದಂಪತಿ ಮನವಿ

ಮಾಜಿ ಸಿಎಂ ಸಿದ್ದು ಕ್ಷೇತ್ರ ಗೊಂದಲಕ್ಕೆ ತೆರೆ ಎಳೆದ ಮನೆ ದೇವರು ಚಿಕ್ಕಮ್ಮತಾಯಿ! ಮತ್ತಷ್ಟು ಕುತೂಹಲ ಮೂಡಿಸಿದ ದೇವರ ನುಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + three =
Remember me
