ಬೆಂಗಳೂರು:ಪಾಪಿ ಮಗನೊಬ್ಬ ಚಾಕುವಿನಿಂದ ಹೆತ್ತ ತಾಯಿ ಮತ್ತು ನಾದಿನಿಯ ಕುತ್ತಿಗೆ ಸೀಳಿದ್ದು, ಮನೆಯಲ್ಲಿ ಆಟ ಆಡ್ತಿದ್ದ ಮೂರು ವರ್ಷದ ಮಗುವಿಗೂ ಚಾಕುವಿನಿಂದ ಇರಿದು ವಿಕೃತಿ ಮೆರೆದಿದ್ದಾನೆ.
ಮಡಿವಾಳ‌ ಪೊಲೀಸ್​ ಠಾಣೆ ವ್ಯಾಪ್ತಿಯ ಡಾಲರ್ಸ್ ಕಾಲನಿಯಲ್ಲಿ ಜ.16ರಂದು ಈ ಘಟನೆ ಸಂಭವಿಸಿದ್ದು, ಪಾಪಿಯ ಕೃತ್ಯಕ್ಕೆ ಪೊಲೀಸರೇ ಮರುಗಿದ್ದಾರೆ. ಕ್ಯಾಬ್ ಚಾಲಕನಾಗಿದ್ದ ಗೋಪಿಕೃಷ್ಣ ಕರೊನಾ ಲಾಕ್​ಡೌನ್​ ವೇಳೆ ಸಾಲ‌ ಮಾಡಿಕೊಂಡಿದ್ದ. ಆಸ್ತಿಯಲ್ಲಿ ಪಾಲು ಕೊಡುವಂತೆ ನಿತ್ಯ ತಾಯಿಯನ್ನು ಪೀಡಿಸುತ್ತಿದ್ದ. ಇದೇ ವಿಚಾರವಾಗಿ ಗಲಾಟೆಯನ್ನೂ ಮಾಡಿಕೊಂಡಿದ್ದ. ಕೊನೆಗೆ ತಾಯಿಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದ ಆತ, ಜ.15ರ ರಾತ್ರಿ ಮಡಿವಾಳದ ಹೈಪರ್ ಮಾರ್ಕೆಟ್​ನಲ್ಲಿ 55 ರೂಪಾಯಿ ಕೊಟ್ಟು ಚಾಕು ಖರೀದಿಸಿದ್ದ.ಇದನ್ನೂ ಓದಿರಿಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!
ಅಂದು ಮನೆಯ ಮೇಲ್ಮಹಡಿಯಲ್ಲಿ ಮಲಗಿದ್ದವ ಮರುದಿನ ಬೆಳಗ್ಗೆ ಎದ್ದು ಕೆಳಮಹಡಿಯ ರೂಮಿನಲ್ಲಿದ್ದ ತಾಯಿ ಜತೆ ಜಗಳವಾಡುತ್ತ ಚಾಕುವಿನಿಂದ ಕುತ್ತಿಗೆ ಇರಿದಿದ್ದ. ಇದನ್ನ ನೋಡಿ ಅಡುಗೆ ಮನೆಯಿಂದ ಓಡಿ ಬಂದ ನಾದಿನಿಗೂ ಕುತ್ತಿಗೆ ಇರಿದಿದ್ದ.
ಆ ವೇಳೆ ಗೋಪಿಕೃಷ್ಣನ ತಮ್ಮನ 3 ವರ್ಷದ ಮಗು ಮನೆಯಲ್ಲೇ ಆಟವಾಡಿಕೊಂಡಿತ್ತು. ಅಜ್ಜಿ-ಅಮ್ಮನ ಚೀರಾಟ ಕೇಳಿ ಸ್ಥಳಕ್ಕೆ ಬಂದ ಮಗುವಿಗೂ ಗೋಪಿಕೃಷ್ಣ ಚಾಕುವಿನಿಂದ ಹಲ್ಲೆ ಮಾಡಿದ್ದ. ಗಾಯಗೊಂಡು ನರಳಾಡುತ್ತಿದ್ದ ಮೂವರೂ ಆರೋಪಿಯಿಂದ ತಪ್ಪಿಸಿಕೊಂಡು ಮನೆಯ ಹೊರಗೆ ಓಡಿಬರುತ್ತಿದ್ದಂತೆ ಆತ ಬೈಕ್​ನಲ್ಲಿ ಎಸ್ಕೇಪ್ ಆಗಿದ್ದ. ಪರಪ್ಪನ ಅಗ್ರಹಾರದ ಬಳಿಯ ಪೆಟ್ರೋಲ್​ ಬಂಕ್​ಬಳಿ ಬೈಕ್ ಬಿಟ್ಟು, ಮೊಬೈಲ್ ಸ್ವಿಚ್​ ಆಫ್​ ಮಾಡಿ ತಲೆಮರೆಸಿಕೊಂಡಿದ್ದ. ಗಾಯಗೊಂಡಿದ್ದ ಅತ್ತೆ-ಸೊಸೆ-ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿ ಗೋಪಿಕೃಷ್ಣನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

ಹಿರಿಮಗನನ್ನು ಕೊಲ್ಲಲು ಕಿರಿಮಗನಿಗೆ ಸುಪಾರಿ ಕೊಟ್ಟ ಪಾಪಿ ತಂದೆ!ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಈ ಒಂದು ನಿರ್ಧಾರವೇ ದುರಂತ ಸಾವಿಗೆ ಕಾರಣವಾಯ್ತಾ? ಮೃತರ ಸಂಬಂಧಿ ಗೋಳಾಟ

ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 11 ಜನ ಬಲಿ! ಆ ಕ್ಷಣ ಕುರಿತು ಗಾಯಾಳು ಬಿಚ್ಚಿಟ್ಟ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − five =
Remember me
