| ವಿಲಾಸ ಮೇಲಗಿರಿ, ಬೆಂಗಳೂರುಒಂದೆಡೆ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ತೊಡೆತಟ್ಟಲು ಸಜ್ಜಾಗುತ್ತಿವೆ. ಇನ್ನೊಂದೆಡೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲೇಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ. ಒಟ್ಟು ಮತದಾರರಲ್ಲಿ ಶೇ.60ಕ್ಕೂ ಹೆಚ್ಚು ಜನರನ್ನು ಒಳಗೊಂಡ ಜಿ.ಪಂ., ತಾ.ಪಂ. ಚುನಾವಣೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರೂ ಪಕ್ಷಗಳಿಗೆ ಸವಾಲಾಗಿದೆ. ಅಳೆದೂ ತೂಗಿ ಕೊನೆಗೂ ಕ್ಷೇತ್ರ ಪುನರ್ ವಿಂಗಡಣಾ ಕಾರ್ಯ ಪೂರ್ಣಗೊಂಡಿದೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಕಾಂಬ್ಳೆ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಈ ನಡುವೆ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿ ಸರ್ಕಾರಕ್ಕೆ ಒಂದು ತಿಂಗಳು ಗಡುವು ನೀಡಿ ಹೈಕೋರ್ಟ್ ಚಾಟಿ ಬೀಸಿದೆ. ಹೀಗಾಗಿ ಚುನಾವಣೆ ನಡೆಸಬೇಕಾಗಿದೆ. ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಹೆಸರಿನಲ್ಲಿ ಎರಡೂವರೆ ವರ್ಷ ಚುನಾವಣೆಯೇ ನಡೆಯದೆ, ಚುನಾಯಿತ ಪ್ರತಿನಿಧಿಗಳಿಲ್ಲದೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳು ಅಧಿಕಾರಿಗಳ ನೇತೃತ್ವದಲ್ಲೇ ಕಾರ್ಯನಿರ್ವಹಿಸುತ್ತಿವೆ. ಚುನಾವಣೆ ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕೂಡ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಸೀಮಾ ನಿರ್ಣಯ ನಿಗದಿ ವಿಳಂಬ: ಹಿಂದಿನ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಅಧ್ಯಕ್ಷತೆಯಲ್ಲಿ ಸೀಮಾ ನಿರ್ಣಯ ಆಯೋಗ ರಚಿಸಿ ಕ್ಷೇತ್ರ ಪುನರ್ವಿಂಗಡಣೆಗೆ ಸೂಚಿಸಿತ್ತು. ಈ ಆಯೋಗ ಸಲ್ಲಿಸಿದ ವರದಿಯನ್ನು ಸರ್ಕಾರ ಕೈಬಿಟ್ಟು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಕಾಂಬ್ಳೆ ನೇತೃತ್ವದಲ್ಲಿ ಮತ್ತೊಂದು ಆಯೋಗವನ್ನು ರಚಿಸಿತು. ಹೀಗಾಗಿ ಕ್ಷೇತ್ರ ಪುನರ್ವಿಂಗ ಡಣೆ ವಿಳಂಬವಾಗಿತ್ತು. ಈಗ ಆ ಆಯೋಗ ಕೂಡ ವರದಿ ಸಲ್ಲಿಸಿದೆ.
ಸೊರಗಿದ ಸ್ಥಳೀಯ ಸರ್ಕಾರ:2021 ಏಪ್ರಿಲ್ ಮತ್ತು ಮೇ ವೇಳೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡಿದೆ. ಸರ್ಕಾರ ಕ್ಷೇತ್ರ ಪುನರ್ವಿಂಗಡಣೆ ನೆಪವೊಡ್ಡಿ ಚುನಾವಣೆ ಮುಂದೂಡಿತ್ತು. ಜನಸಂಖ್ಯೆ, ಹೊಸ ತಾಲೂಕು ರಚನೆ ನೆಪದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಅನಿವಾರ್ಯ ಎಂದು ಹೇಳುವ ಮೂಲಕ ಹಿಂದಿನ ಸರ್ಕಾರ ಮುಂದೂಡಿಕೆಗೆ ಕಾರಣ ಕೊಟ್ಟಿತ್ತು. ಹೀಗಾಗಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಚುನಾಯಿತ ಪ್ರತಿನಿಧಿಗಳಿಲ್ಲದೆ ಸೊರಗಿವೆ.
ಆಡಳಿತಾಧಿಕಾರಿಗಳದ್ದೇ ಅಧಿಕಾರ:ಚುನಾವಣೆ ನಡೆಸದ ಕಾರಣ ಈ ಸಂಸ್ಥೆಗಳಿಗೆ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಒಂದೊಂದು ಜಿಲ್ಲೆಯಲ್ಲಿ ನೇಮಕಗೊಂಡ ಆಡಳಿತಾಧಿಕಾರಿಗಳು ಎರಡು ವರ್ಷಗಳಾದರೂ ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹೀಗಾಗಿ ಗ್ರಾಮೀಣ ಸ್ಥಳೀಯ ಆಡಳಿತಕ್ಕೆ ಗರಬಡಿದಂತಾಗಿದೆ.
3 ಕೋಟಿಗೂ ಹೆಚ್ಚು ಮತದಾರರು:ರಾಜ್ಯದಲ್ಲಿ 5.31,33,054 ಮತದಾರರಿದ್ದು, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಅರ್ಧಕ್ಕೂ ಹೆಚ್ಚು ಅಂದರೆ ಅಂದಾಜು 3 ಕೋಟಿಗೂ ಹೆಚ್ಚು ಜನರು ಮತದಾನದ ಹಕ್ಕು ಹೊಂದಿದ್ದಾರೆ. ಹೀಗಾಗಿ ಈ ಚುನಾವಣೆಯನ್ನು ಮೂರೂ ಪಕ್ಷಗಳು ಗಂಭೀರವಾಗಿ ಪರಿಗಣಿಸಲಿವೆ.
ಕ್ಷೇತ್ರಗಳ ಸೀಮೆ ನಿಗದಿ ಪೂರ್ಣ:ಕೆಲವು ಕ್ಷೇತ್ರಗಳಲ್ಲಿ 40 ಸಾವಿರ ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ, ಇನ್ನು ಮಲೆನಾಡು, ಕರಾವಳಿ ಜಿಲ್ಲೆಯ ಕೆಲವೆಡೆ 15 ರಿಂದ 20 ಸಾವಿರಕ್ಕೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ರಚನೆ ಮಾಡಲಾಗಿದೆ. ಅದೇ ರೀತಿ ತಾಲೂಕು ಪಂಚಾಯಿತಿ ಕ್ಷೇತ್ರಗಳ ಜನಸಂಖ್ಯೆ ಕೂಡ 12,500 ಮತ್ತು ಕೆಲವು ಅದಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಒಳಗೊಂಡಂತೆ ರಚನೆಯಾಗಿವೆ.
1,130 ಜಿಪಂ, 3,663 ತಾಪಂ ಕ್ಷೇತ್ರ:ರಾಜ್ಯದ ಹಲವಾರು ಗ್ರಾಮಗಳು ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಸೇರಿವೆ. ಅವೆಲ್ಲವನ್ನೂ ಬಿಟ್ಟು ಕ್ಷೇತ್ರ ಪುನರ್ವಿಂಗಡಣೆ ಮಾಡಲಾಗಿದೆ. ಕ್ಷೇತ್ರ ಪುನರ್ವಿಂಗಣೆ ಬಳಿಕ ರಾಜ್ಯದಲ್ಲಿ 1130 ಜಿಲ್ಲಾ ಮತ್ತು ಸುಮಾರು 3663 ತಾಲೂಕು ಪಂಚಾಯಿತಿ ಕ್ಷೇತ್ರಗಳು ರಚನೆಯಾಗಿವೆ ಎನ್ನಲಾಗಿದೆ.
ಮೀಸಲಾತಿಯೇ ಕಗ್ಗಂಟು:ಸೀಮಾ ನಿರ್ಣಯ ಆಯೋಗ ಮೂರು ದಿನಗಳ ಹಿಂದೆ ರಾಜ್ಯ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಈಗ ಮೀಸಲಾತಿ ನಿಗದಿ ಪಡಿಸಬೇಕಿದೆ. ಸರ್ಕಾರ ಮೀಸಲಾತಿ ನಿಗದಿಪಡಿಸಿದ ಬಳಿಕ ಯಾವುದೇ ತಕರಾರು ಇಲ್ಲದೆ, ಕೋರ್ಟ್​ನಿಂದ ತಡೆಯಾಜ್ಞೆ ಬಾರದೇ ಇದ್ದಲ್ಲಿ ಫೆಬ್ರವರಿ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಆದರೆ, ಮೀಸಲಾತಿ ವಿಚಾರ ಕೋರ್ಟ್ ಮೆಟ್ಟಿಲೇರಿದರೆ ಚುನಾವಣೆ ಮತ್ತೆ ಮುಂದಕ್ಕೆ ಹೋಗುವುದು ಗ್ಯಾರಂಟಿ.
4 ವಾರಗಳಲ್ಲಿ ಪೂರ್ಣಗೊಳಿಸಿ:ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳು ಸಾಂವಿಧಾನಿಕ ಸಂಸ್ಥೆಗಳು. ಈ ಸಂಸ್ಥೆಗಳಿಗೆ ಚುನಾವಣೆ ನಡೆಸದೆ ಅವುಗಳನ್ನು ಖಾಲಿ ಬಿಡುವುದು ಎಷ್ಟು ಸರಿ? ನಿಮ್ಮ ವಿಳಂಬ ಧೋರಣೆ ಸಲ್ಲದು. ಕ್ಷೇತ್ರಗಳ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು 4 ವಾರಗಳಲ್ಲಿ ಪೂರ್ಣಗೊಳಿಸಿ ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಮೂರು ಬಾರಿ ಮತದಾರರ ಪಟ್ಟಿ..!:ರಾಜ್ಯ ಚುನಾವಣಾ ಆಯೋಗ ಈಗಾಗಲೇ ಎರಡು ಬಾರಿ ಮತದಾರರ ಪಟ್ಟಿ ತಯಾರಿಸಿದೆ. ಈಗ ಮತ್ತೆ ಮತದಾರರ ಪಟ್ಟಿ ಸಿದ್ಧಪಡಿಸಬೇಕಿದೆ. ಈಗಾಗಲೇ ಮುಖ್ಯ ಚುನಾವಣಾಧಿಕಾರಿ ಕಚೇರಿ ತಯಾರಿಸಿದ ಮತದಾರರ ಪಟ್ಟಿಯನ್ನೇ ಆಧಾರವಾಗಿಟ್ಟು ಕೊಂಡು ಕ್ಷೇತ್ರದ ಸೀಮೆ ಅನುಸರಿಸಿ ಮತದಾರರ ಪಟ್ಟಿಯನ್ನು ತಯಾರಿಸಬೇಕಿದೆ. ಇದು ತೀರಾ ಕಷ್ಟದ ಕೆಲಸವೇನೂ ಅಲ್ಲ. ಅಲ್ಲದೆ ಜಿಲ್ಲಾಧಿಕಾರಿಗಳ ಹಂತದಲ್ಲೇ ನಡೆಯುವುದರಿಂದ ವಿಳಂಬ ವಾಗುವ ಸಾಧ್ಯತೆಗಳೂ ಇಲ್ಲ.
2021ರಲ್ಲೇ ಎಲೆಕ್ಷನ್ ಸಾಮಗ್ರಿ ಸಿದ್ಧ:ಮುದ್ರಣ ಸಾಮಗ್ರಿ ಸೇರಿದಂತೆ ಚುನಾವಣೆಗೆ ಬೇಕಾದ ಎಲ್ಲ ಪರಿಕರಗಳನ್ನು ರಾಜ್ಯ ಚುನಾವಣಾ ಆಯೋಗ 2021ರಲ್ಲೇ ಸಿದ್ಧಪಡಿಸಿಟ್ಟಿದೆ. ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡುವುದು, ಮತದಾರರ ಕೈ ಬೆರಳಿಗೆ ಹಚ್ಚುವ ಅಳಿಸಲಾಗದ ಗುರುತಿನ ಶಾಯಿ ಖರೀದಿ ಮಾತ್ರ ಬಾಕಿ ಇದೆ.
ದೇಶವೇ ದೀಪಗಳಿಂದ ಜಗಮಗ; ಇಲ್ಲಿ ಮಾತ್ರ 230 ವರ್ಷಗಳಿಂದ ದೀಪಾವಳಿ ಆಚರಿಸಿಲ್ಲ!

ಇಲ್ಲಿ ‘ಯಮದೂತ’ನಿಗೇ ಪೂಜೆ ಮಾಡಿ ದೀಪಾವಳಿ ಹಬ್ಬ ಆಚರಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
