ಬಳ್ಳಾರಿ:ಇಲ್ಲಿನ ಮೋಕ ರಸ್ತೆಯ ರುದ್ರಭೂಮಿಯಲ್ಲಿ ಕರೊನಾ ಶಂಕಿತ ರೋಗಿಯ ಶವ ಸಂಸ್ಕಾರ ಮಾಡಲು ಬಂದ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಕರೊನಾ ಶಂಕಿತ ರೋಗಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಹಾಗಾಗಿ ಮೋಕ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಇಂದು (ಮಂಗಳವಾರ) ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ, ಮೃತನ ಕೋವಿಡ್ ಪರೀಕ್ಷೆಯ ವರದಿ ಕೈ ಸೇರುವ ಮೊದಲೇ ಅಂತ್ಯಸಂಸ್ಕಾರ ಮಾಡಲು ಹೊರಟ ಜಿಲ್ಲಾಡಳಿತ ಕ್ರಮವನ್ನು ಪ್ರಶ್ನಿಸಿ ಸ್ಥಳೀಯರು ದಿಢೀರ್​ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ಶಾಸಕ ಸೋಮಶೇಖರ ರೆಡ್ಡಿ ಸ್ಥಳೀಯರನ್ನೂ ಬಿಟ್ಟುಕೊಡಲು ಆಗದೆ, ಅತ್ತ ಜಿಲ್ಲಾಡಳಿತದ ಕಾರ್ಯಕ್ಕೂ ವಿರೋಧ ಮಾಡದ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ್ದರು.ಇದನ್ನೂ ಓದಿರಿಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​?
ಬಳ್ಳಾರಿಯಲ್ಲಿ ಹಲವು ರುದ್ರಭೂಮಿ ಇದ್ದರೂ ಇಲ್ಲಿಯೇ ಕರೊನಾ ಶಂಕಿತನ ಶವ ಸಂಸ್ಕಾರ ಮಾಡುತ್ತಿರೋದು ಏಕೆ? ಎಂದು ಪ್ರಶ್ನಿಸಿದ ಪ್ರತಿಭಟನಾನಿರತರು, ಊರ ಹೊರಗಿರುವ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ಮಾಡಿ. ಆ ಶವವನ್ನು ಇಲ್ಲಿ ಮುಚ್ಚಬೇಡಿ ಎಂದು ಪಟ್ಟುಹಿಡಿದರು.
ಈ ರುದ್ರಭೂಮಿ ಪಕ್ಕದಲ್ಲಿ ವಾಟರ್​ಟ್ರೀಟ್ಮೆಂಟ್ ಪ್ಲಾಂಟ್ ಇದೆ. ಹಾಗಾಗಿ ಕೊರೊನಾ ಸೋಂಕು ನೀರಿನಲ್ಲಿ ಬೆರೆತರೆ ಇಡೀ ಬಳ್ಳಾರಿ ಪಟ್ಟಣಕ್ಕೆ ಸೋಂಕು ಹರಡಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.
ಇದೊಂದು ಬಾರಿ ಅವಕಾಶ ಮಾಡಿಕೊಡಿ. ಮುಂದಿನ ಬಾರಿ ಬೇರೆಡೆ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಜಿಲ್ಲಾಡಳಿತ ಮನವಿ ಮಾಡಿದರೂ ಪ್ರತಿಭಟನಾಕಾರರು ಪಟ್ಟು ಸಡಿಲಗೊಳಿಸಲಿಲ್ಲ. ಕೊನೆಗೆ ಸ್ಥಳೀಯರ ವಿರೋಧದ ನಡುವೆಯೇ ಜಿಲ್ಲಾಡಳಿತ ಮೃತನ ಅಂತ್ಯಸಂಸ್ಕಾರವನ್ನು ನಿಗದಿತ ಸ್ಥಳದಲ್ಲಿ ನೆರವೇರಿಸಿತು.
ಡಿಕೆಶಿ ಸಮ್ಮುಖದಲ್ಲೇ ಕರೊನಾ ನಿಯಮ ಗಾಳಿಗೆ ತೂರಿದ ‘ಕೈ’ ಪಡೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 13 =
Remember me
