ಕೋಲಾರ: ಕರೊನಾ ವೈರಸ್​ ಸೋಂಕು ಹರಡದಂತೆ ತಡೆಯುವ ಸಲುವಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಸಾರ್ವಜನಿಕರಿಂದಲೂ ಸಹಕಾರ ಸಿಗುತ್ತಿದೆ. ಆದರೆ, ಬಡ-ಮಧ್ಯಮ ವರ್ಗ ತಲ್ಲಣಗೊಂಡಿರುವುದು ಕೂಡ ಅಷ್ಟೇ ವೇದ್ಯ ವಿಚಾರ. 21 ದಿನಗಳ ಲಾಕ್​ಡೌನ್ ನಿನ್ನೆ ಮುಕ್ತಾಯವಾಗಿದ್ದು, ಎರಡನೇ ಹಂತದ ಲಾಕ್​ಡೌನ್​ ವಿಚಾರ ನಿನ್ನೆ ಘೋಷಣೆಯಾಗಿತ್ತು. ಈ ವೇಳೆ ಟಿವಿಯಲ್ಲಿ ಬರುತ್ತಿದ್ದ ಸುದ್ದಿಯನ್ನು ನೋಡ್ತಾ ನೋಡ್ತಾ ಒಬ್ಬ ವ್ಯಕ್ತಿ ಕುಸಿದವರು ಮತ್ತೆ ಮೇಲೇಳಲೇ ಇಲ್ಲ.
ಹೌದು.. ಇದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿಯಲ್ಲಿ ನಿನ್ನೆ ರಾತ್ರಿ ನಡೆದ ಘಟನೆ. ಟಿವಿ ನೋಡ್ತಾ ನೋಡ್ತಾ ಕುಸಿದು ಕುಳಿತ ವ್ಯಕ್ತಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ರಾತ್ರಿ 11 ಗಂಟೆಗೆ ಕೊನೆಯುಸಿರೆಳೆದರು. ಮೃತರನ್ನು ಮಾಸ್ತಿಯ ಮುರುಗೇಶ್ (45) ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನ ಕಾಡುತ್ತಿತ್ತು. ನಾಲ್ಕು ಹೆಣ್ಣು ಮಕ್ಕಳು. ಕೂಲಿ,ನಾಲಿ ಮಾಡಿ ಬದುಕು ಸಾಗಿಸುತ್ತಿದ್ದ ಮುರುಗೇಶ್​ ಅವರಿಗೆ ಈಗ 20 ದಿನಗಳಿಂದ ಆದಾಯ ಇರಲಿಲ್ಲ. ಲಾಕ್​ಡೌನ್ ನಿನ್ನೆಗೆ ಮುಗಿಯಬಹುದೆಂಬ ಲೆಕ್ಕಾಚಾರದಲ್ಲಿ ಅವರಿದ್ದರು. ಮಕ್ಕಳ ಮದುವೆಯ ವಿಚಾರವೂ ಮುರುಗೇಶ್​ ಅವರನ್ನು ಚಿಂತೆಗೀಡು ಮಾಡಿತ್ತು. ಲಾಕ್​ಡೌನ್​ ಹೀಗೆಯೇ ಮುಂದುವರಿದರೆ ಸಂಸಾರ ನಡೆಸುವುದು ಕಷ್ಟ ಎಂದು ಆಪ್ತರ ಬಳಿ ಹೇಳಿಕೊಂಡದ್ದಾಗಿ ವರದಿಯಾಗಿದೆ.
ಕಾಂಗ್ರೆಸ್‌ ಶಾಸಕನಿಗೆ ಕರೊನಾ ಸೋಂಕು; ಅವರನ್ನು ಸಂಪರ್ಕಿಸಿದವರಿಗೆಲ್ಲ ಆತಂಕ…ಸಿಎಂಗೂ ಶುರುವಾಗಿದೆ ಭಯ..!

ವಿಶ್ವ ಆರೋಗ್ಯ ಸಂಸ್ಥೆಗೆ ಧನಸಹಾಯ ರದ್ದು ಮಾಡಿದ ಟ್ರಂಪ್‌: ಕರೊನಾ ವಿಷಯದಲ್ಲಿ ಚೀನಾ ಪರ ಪಕ್ಷಪಾತ ಎಂಬ ಗಂಭೀರ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
