ಹರೀಶ ಬೇಲೂರು ಬೆಂಗಳೂರು
ಕರೊನಾ ಸೋಂಕಿಗೆ ಕಡಿವಾಣ ಹಾಕಲು ದೇಶಾದ್ಯಂತ ಲಾಕ್​ಡೌನ್ ಘೋಷಿಸಿದ್ದರಿಂದ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದ್ದು, ಅಬಕಾರಿ ಇಲಾಖೆಗೆ ಬರೋಬ್ಬರಿ 2,460 ಕೋಟಿ ರೂ.ನಷ್ಟವಾಗಿದೆ. ಪ್ರತಿ ನಿತ್ಯ ಮದ್ಯ ಮಾರಾಟದಿಂದ 55ರಿಂದ 60 ಕೋಟಿ ರೂ. ಆದಾಯ ಬರುತ್ತಿತ್ತು. ಮಾರ್ಚ್ 23ರಿಂದ ಮದ್ಯ ಮಾರಾಟ ನಿಲ್ಲಿಸಲಾಗಿದ್ದು, 41 ದಿನಗಳಿಂದ ಇಲಾಖೆಗೆ ಆದಾಯ ಇಲ್ಲದಂತಾಗಿದೆ. ಇಡೀ ದೇಶದಲ್ಲಿ ಲೆಕ್ಕ ಹಾಕಿದರೆ ಅಂದಾಜು 3 ಲಕ್ಷ ಕೋಟಿ ರೂ. ಆದಾಯ ನಷ್ಟವಾಗಿದೆ. ಈ ಬಗ್ಗೆ ರಾಷ್ಟ್ರೀಯ ಮದ್ಯ ಮಾರಾಟ ಸಂಘ ಪ್ರಧಾನಿ ನರೇಂದ್ರ ಮೋದಿಗೆ ಮನವರಿಕೆ ಮಾಡಿ ಮದ್ಯದಂಗಡಿ ತೆರೆಯಲು ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದರು. ಅಲ್ಲದೆ, ವಿಡಿಯೋ ಕಾನ್ಪರೆನ್ಸ್​ನಲ್ಲಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ವಿನಾಯಿತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಆದರೆ, ಕರೊನಾ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುವ ಕಾರಣದಿಂದ ಕೇಂದ್ರ ಸರ್ಕಾರ ಅನುಮತಿ ನೀಡಲಿಲ್ಲ.
ಬಿಯರ್ ಸ್ಟಾಕ್:ಅಬಕಾರಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯ ತಂಪು ಪಾನೀಯ ನಿಗಮದ (ಕೆಎಸ್​ಬಿಸಿಎಲ್) ಗೋದಾಮಿನಲ್ಲಿ 150 ಕೋಟಿ ರೂ.ಮೌಲ್ಯದ 15 ಲಕ್ಷ ಬಿಯರ್ ಬಾಕ್ಸ್​ಗಳು ಹಾಗೆಯೇ ಉಳಿದಿವೆ. ಮದ್ಯದಂಗಡಿಗಳಿಗೆ ಸರಬರಾಜು ಮಾಡಲು ಸಾಕಷ್ಟು ಪ್ರಮಾಣದಲ್ಲಿ ಬಿಯರ್ ತಯಾರಿಸಿ ಸಂಗ್ರಹಿಸಿಡಲಾಗಿತ್ತು. ಆದರೆ, ಸರ್ಕಾರ ಏಕಾಏಕಿ ಲಾಕ್​ಡೌನ್ ಹೇರಿದ್ದರಿಂದ ಮದ್ಯದಂಗಡಿಗಳಿಗೆ ಬಿಯರ್ ಸರಬರಾಜು ಮಾಡಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ 3,907 ವೈನ್​ಶಾಪ್ (ಸಿಎಲ್-2), 232 ಕ್ಲಬ್ (ಸಿಎಲ್-4), 1,037 ಹೋಟೆಲ್ ಮತ್ತು ಗೃಹ(ಸಿಎಲ್-7), 3,552 ಬಾರ್ ಅಂಡ್ ರೆಸ್ಟೋರೆಂಟ್(ಸಿಎಲ್-9), 705 ಎಂಎಸ್​ಐಲ್ (11-ಸಿ) 438 ಇತರೆ ಸೇರಿ ಒಟ್ಟು 10,410 ಮದ್ಯದಂಗಡಿಗಳಿವೆ. ಪ್ರತಿ ನಿತ್ಯ ಆಂದಾಜು 70 ಸಾವಿರ ಬಿಯರ್ ಬಾಕ್ಸ್ ಮಾರಾಟವಾಗುತ್ತಿತ್ತು. ಇದರಿಂದ ಇಲಾಖೆಗೆ 10 ಕೋಟಿ ರೂ.ಆದಾಯ ಬರುತ್ತಿತ್ತು. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಯರ್ ಮಾರಾಟ ತುಸು ಹೆಚ್ಚಳವಾಗುತ್ತಿತ್ತು. ಆದರೆ, ಅಂಗಡಿಗಳು ಬಂದ್ ಆಗಿರುವುದರಿಂದ ಮದ್ಯ ಮಾರಾಟ ವಾಗಿಲ್ಲ. ಅಲ್ಲದೆ, ಈಗಾಗಲೇ ಎಲ್ಲ ಮದ್ಯದಂಗಡಿಗಳಲ್ಲಿ 1.5 ಲಕ್ಷ ಬಿಯರ್ ಬಾಕ್ಸ್ ಸಂಗ್ರಹವಾಗಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಆರು ತಿಂಗಳು ಅವಧಿ: ರಾಜ್ಯದಲ್ಲಿ ತಯಾರಿಸಿದ ಬಿಯರ್​ಗೆ 6 ತಿಂಗಳು ಹಾಗೂ ವಿದೇಶಗಳಿಂದ ಆಮದು ಆಗುವ ಬಿಯರ್​ಗಳಿಗೆ ಒಂದು ವರ್ಷ ವ್ಯಾಲಿಡಿಟಿ ಇರುತ್ತದೆ. ಈಗಾಗಲೇ ಕೆಎಸ್​ಬಿಸಿಎಲ್ ಗೋದಾಮಿನಲ್ಲಿ ಸಂಗ್ರಹಿಸಿರುವ ಬಿಯರ್​ಗೆ ಎರಡು ತಿಂಗಳು ಹಾಗೂ ಮದ್ಯದಂಗಡಿಗಳಲ್ಲಿ ಸಂಗ್ರಹವಾಗಿರುವ ಬಿಯರ್​ಗೆ ಮೂರು ತಿಂಗಳು ವ್ಯಾಲಿಡಿಟಿ ಆಗಿದೆ. ಒಂದು ವೇಳೆ ಸಂಗ್ರಹಿಸಿಟ್ಟಿರುವ ಬಿಯರ್​ಗಳು ಆರು ತಿಂಗಳ ಒಳಗೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ಅವುಗಳನ್ನು ನಾಶಪಡಿಸಬೇಕಾಗುತ್ತದೆ.
ತೆರೆಯುವುದು ಅನುಮಾನ
ರಾಜ್ಯದಲ್ಲಿ ಎಂಎಸ್​ಐಎಲ್ ಹಾಗೂ ಸಿಎಲ್-2 ಮೂಲಕ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಿದ್ದರೂ ಮೇ 16ರವರೆಗೆ ಮದ್ಯದಂಗಡಿ ಓಪನ್ ಆಗುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ತೆರೆದರೆ ಏಕಾಏಕಿ ಜನಸಂದಣಿ ಉಂಟಾಗಲಿದೆ. ಹೀಗಾಗಿ, ಕರೊನಾ ವೈರಸ್ ಇಳಿಮುಖ ಬಳಿಕವಷ್ಟೇ ಅಂಗಡಿಗಳನ್ನು ತೆರೆಯಲಾಗುತ್ತದೆ. ಆದ್ದರಿಂದ, ಮೇ 16ರವರೆಗೆ ಮದ್ಯದಂಗಡಿ ಓಪನ್ ಮಾಡುವ ಸಾಧ್ಯತೆ ತೀರಾ ಕಡಿಮೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಅವರ ನೆನಪು ಸದಾ ಹಸಿರಾಗಿರುತ್ತದೆ … ಇರ್ಫಾನ್ ಸಾವಿಗೆ ಕಂಬನಿ ಮಿಡಿದ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 9 =
Remember me
