ಬೆಂಗಳೂರು: ಕರೊನಾ COVID19 ವೈರಸ್​ ಸೋಂಕು ತಡೆಗೆ ಸಂಬಂಧಿಸಿ ರಾಜ್ಯದಲ್ಲಿ ಲಾಕ್​ಡೌನ್ ಕ್ರಮ ಮತ್ತು ಸೋಂಕು ನಿಯಂತ್ರಣ ಕಾರ್ಯತಂತ್ರಗಳ ಸುಲಭ ಅನುಷ್ಠಾನಕ್ಕೆ ಬೇಕಾದಂತೆ ಅದರ ವಿವರಣೆಯನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಸುತ್ತೋಲೆಯನ್ನು ಪ್ರಕಟಿಸಿದೆ.ಇದರ ಪ್ರಕಾರ,ನಿಯಂತ್ರಿತ ವಲಯ (ಕಂಟೇನ್​ಮೆಂಟ್​ ಝೋನ್​)ಎಂದರೆ ನೋವೆಲ್ ಕರೊನಾ ವೈರಸ್ ಪಾಸಿಟಿವ್​ ವ್ಯಕ್ತಿಯ ನಿವಾಸ ಇರುವ ಸುತ್ತಲಿನ‘ಪ್ರದೇಶ’ವಾಗಿರುತ್ತದೆ. ಇಲ್ಲಿ ವೈರಾಣು ಸೋಂಕು ಹರಡದಂತೆ ಅತ್ಯಂತ ತೀವ್ರತರದ ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ. ಈ ‘ಪ್ರದೇಶ’ವು ಎಲ್ಲಿಯ ತನಕ ನಿಯಂತ್ರಿತ ವಲಯವಾಗಿ ಇರುತ್ತದೆ ಎಂದರೆ
1) ಹಿಂದಿನ ಬಾರಿ ಪಾಸಿಟಿವ್​ ಪ್ರಕರಣ ವರದಿಯಾದ 28 ದಿನಗಳ ಅವಧಿಯಲ್ಲಿ ಯಾವುದೇ ಹೊಸ ಕೋವಿಡ್​ 19 ಪ್ರಕರಣ ಅಲ್ಲಿ ವರದಿಯಾಗಿರಬಾರದು.ಅಥವಾ2) ನಿಯಂತ್ರಿತ ವಲಯದಲ್ಲಿ ಹತ್ತಕ್ಕಿಂತ ಕಡಿಮೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಸಕ್ರಿಯ ಗೃಹ ದಿಗ್ಬಂಧನ(ಹೋಮ್ ಕ್ವಾರಂಟೈನ್​)ದಲ್ಲಿ ಇರಬೇಕು.
ಇಲ್ಲಿಪ್ರದೇಶಎಂಬ ಪದಕ್ಕೆ ಈ ರೀತಿಯ ವ್ಯಾಖ್ಯಾನವಿದೆ-1)ಅಪಾರ್ಟ್​ಮೆಂಟ್​ ಸಂಕೀರ್ಣಕ್ಕೆ –ಕೋವಿಡ್​ ಪಾಸಿಟಿವ್​ ವ್ಯಕ್ತಿಯ ನಿವಾಸ ಇರುವ ನಿರ್ದಿಷ್ಟ ಟವರ್​/ಬ್ಲಾಕ್​. ಒಂದು ವೇಳೆ ಒಂದೇ ಬ್ಲಾಕ್​ ಅಪಾರ್ಟ್​ಮೆಂಟ್ ಆಗಿದ್ದರೆ ಆಗ ಇಡೀ ಅಪಾರ್ಟ್​ಮೆಂಟ್​.2)ಪ್ರತ್ಯೇಕ ಮನೆ/ವಿಲ್ಲಾ:ಕೋವಿಡ್​ ಪಾಸಿಟಿವ್ ವ್ಯಕ್ತಿಯ ಮನೆ ಇರುವ ರಸ್ತೆಯನ್ನು ಒಳಗೊಂಡ/ ಭೌತಿಕ ಪರಿಧಿಯ 100 ಮೀಟರ್ ಸುತ್ತಮುತ್ತಲಿನ ಪ್ರದೇಶ3)ಕೊಳಚೆ ಪ್ರದೇಶಕ್ಕೆ:ಇದು ಅಧಿಸೂಚಿತವೂ ಆಗಿರಬಹುದು ಅಥವಾ ಅಲ್ಲದೇ ಇರಬಹುದು. ಕೋವಿಡ್ ಪಾಸಿಟಿವ್ ವ್ಯಕ್ತಿಯ ಮನೆ ಇರುವ ರಸ್ತೆಯನ್ನೂ ಒಳಗೊಂಡ/ಭೌತಿಕ 100 ಮೀಟರ್ ಪರಿಧಿಯ ಇಡೀ ಕೊಳೆಗೇರಿ.4)ಗ್ರಾಮೀಣ ಪ್ರದೇಶಕ್ಕೆ:ಕೋವಿಡ್ ಪಾಸಿಟಿವ್​ ವ್ಯಕ್ತಿ ವಾಸವಾಗಿರುವ ಅಥವಾ ಹರಡಿರುವ ಸಣ್ಣ ಪ್ರದೇಶ- ಅಗತ್ಯಕ್ಕೆ ತಕ್ಕಂತೆ ಇಡೀ ವಾಸದ ಪ್ರದೇಶವನ್ನು ಈ ವ್ಯಾಪ್ತಿಗೆ ತರಬಹುದು.ಈ ಪ್ರದೇಶಗಳ ರಸ್ತೆ ಅಥವಾ ಇತರೆ ಸ್ವರೂಪಗಳನ್ನು ಗುರುತಿಸಿ ‘ಪ್ರದೇಶ ಎಂದು ಗಡಿರೇಖೆಯನ್ನು ಬಿಬಿಎಂಪಿಯ ಆಯುಕ್ತರು/ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ನಿರ್ದಿಷ್ಟ ಪಡಿಸಿದ್ದಾರೆ.
ಬಫರ್​ ಝೋನ್​:ಇದು ನಿಯಂತ್ರಿತ ವಲಯದ ಸುತ್ತ ಇರುವ ನಗರ ಪ್ರದೇಶದ 5 ಕಿ.ಮೀ. ವ್ಯಾಪ್ತಿ ಮತ್ತು ಗ್ರಾಮೀಣ ಪ್ರದೇಶದಲ್ಲಾದರೆ 7 ಕಿ.ಮೀ. ವ್ಯಾಪ್ತಿ. ಕೋವಿಡ್​ 19 ಸೋಂಕು ಹರಡದಂತೆ ತಡೆಯಲು ಬಫರ್ ಝೋನ್​ನಲ್ಲಿ ಸದಾ ಕಣ್ಗಾವಲು ಮತ್ತು ಸಾಮಾಜಿಕ ಅಂತರದ ಕ್ರಮಗಳು ಜಾರಿಯಲ್ಲಿ ಇರಬೇಕು. ಇದರ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ತೀವ್ರ ಬಫರ್​ ಝೋನ್ ಆಗಿದ್ದು, ಅಲ್ಲಿ ಪ್ರತಿ ಮನೆಗಳ ತಪಾಸಣೆ ನಡೆಯಬೇಕು.
ಒಂದು ಪ್ರದೇಶವನ್ನು ನಿಯಂತ್ರಿತ ವಲು ಎಂದು ಘೋಷಣೆ ಮಾಡಿದ 28 ದಿನಗಳ ಒಳಗೆ ಅಲ್ಲಿ ಯಾವುದೇ ಹೊಸ ಕೋವಿಡ್​ 19 ಪ್ರಕರಣ ವರದಿಯಾಗದೇ ಇದ್ದರೆ ಅಥವಾ ಆ ನಿಯಂತ್ರಿತ ವಲಯದಲ್ಲಿ ಹತ್ತಕ್ಕಿಂತ ಕಡಿಮೆ ಸಂಪರ್ಕ/ ಗೃಹ ದಿಗ್ಬಂಧನ ಸಕ್ರಿಯವಾಗಿದ್ದರೆ ಆಗ ಆ ನಿಯಂತ್ರಿತ ವಲಯವನ್ನು ಸಾಮಾನ್ಯ ವಲಯ ಎಂದು ಬಫರ್ ಝೋನ್​ ಸಾಮಾನ್ಯ ವಲಯ ಎಂದು ಪರಿಗಣಿಸಲಾಗುತ್ತದೆ.
ವಲಯ:ಸಾಂಕ್ರಾಮಿಕ ಶಾಸ್ತ್ರದ ಪ್ರಕಾರ ಸಂಪರ್ಕವನ್ನು ಹೊಂದಿರುವ ಕೋವಿಡ್​ ಪಾಸಿಟಿವ್ ಪ್ರಕರಣಗಳ ಒಟ್ಟು ಗುಂಪು ಅಥವಾ ಸಮುದಾಯವನ್ನು ವಲಯ ಎನ್ನಲಾಗುತ್ತದೆ. ಇಲ್ಲಿನ ಪ್ರಕರಣಗಳು ಒಬ್ಬ ನಿರ್ದಿಷ್ಟ ಕೋವಿಡ್​ -ಪಾಸಿಟಿವ್​ ವ್ಯಕ್ತಿಗೆ ಸಂಬಂಧಿಸಿದ್ದಾಗಿದ್ದು, ಆ ಚಿಕ್ಕ ಪ್ರದೇಶದಲ್ಲಿ ಅಂತಹ ಅನೇಕ ಪ್ರಕರಣಗಳು ಇರುತ್ತವೆ.
ಭಾರತಕ್ಕೊಂದು ಸಲಾಂ ಎಂದ ವಿಶ್ವಸಂಸ್ಥೆ – COVID19 ಸೋಂಕು ತಡೆಗೆ ಇತರೆ ದೇಶಗಳಿಗೆ ನೆರವು ನೀಡುತ್ತಿರುವ ದೇಶಗಳ ಬಗ್ಗೆ ಮೆಚ್ಚುಗೆ

ಒಂದೇ ಒಂದು ಆ್ಯಪಲ್​ – 2 ಕೋಟಿ ಪರಿಹಾರ!

ಏಳು ಲಕ್ಷ ದಾಟಿತು ಕರೊನಾ ಸೋಂಕುಪೀಡಿತರ ಸಂಖ್ಯೆ ಅಮೆರಿಕದಲ್ಲಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eighteen =
Remember me
