ಬೆಂಗಳೂರು:ಆರ್ಥಿಕತೆಯ ಹಿತದೃಷ್ಟಿಯಿಂದ ಇನ್ನು ಮೇಲೆ ಲಾಕ್‌ಡೌನ್ ಮಾಡುವುದು ಬೇಡವೇ ಬೇಡ ಎನ್ನುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮನಸ್ಸು ಬದಲಿಸಿದ್ದು, ಮಂಗಳವಾರ  ರಾತ್ರಿ ೮ ಗಂಟೆಯಿಂದ ಒಂದು ವಾರ ಲಾಕ್‌ಡೌನ್ ಮಾಡಲು ಮುಂದಾಗಿದ್ದಾರೆ.
ಹಿರಿಯ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಮುಂತಾದ ಹಿರಿಯ ಸಚಿವರು ಹಾಗೂ ಕೋವಿಡ್‌ಗೆ ಸಂಬಂಧಿಸಿದ ತಜ್ಞ ವೈದ್ಯರ ಸಮಿತಿಯ ಪ್ರಮುಖರ ಜತೆ ಈ ಕುರಿತು ಚರ್ಚೆ ಮಾಡಿದ್ದಾರೆ. ಈ ವಿಷಯವನ್ನು ಸ್ವತಃ ಸಚಿವ ಆರ್. ಆಶೋಕ್ ಅವರೇ ಸ್ಪಷ್ಟಪಡಿಸಿದ್ದಾರೆ.
ಲಾಕ್‌ಡೌನ್ ಮಾಡುವಂತೆ ಜನರೂ, ತಜ್ಞರೂ ಎಲ್ಲರೂ ಹೇಳುತ್ತಿದ್ದಾರೆ. ಕರೊನಾದ ವೇಗ ಕೂಡ ಜಾಸ್ತಿ ಇದೆ. ಅದನ್ನು ಕಡಿಮೆ ಮಾಡುವ ದಿಸೆಯಲ್ಲಿ ಚಿಂತನೆ ನಡೆದಿದೆ. ಹಾಗೆಂದು ಲಾಕ್‌ಡೌನ್ ವಿಷಯದಲ್ಲಿ ಸಿಎಂ ತಮ್ಮ ನಿಲುವು ಬದಲಿಸಿದರು ಅಂತಲ್ಲ. ಸಮಯ-ಸಂದರ್ಭಕ್ಕೆ ತಕ್ಕಂತೆ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್ ಅನಿವಾರ್ಯ ಇದೆ ಎನಿಸುತ್ತಿದೆ. ಆದರೆ ಕಳೆದ ಸಲದಂತೆ ಈ ಸಲ ಏಕಾಏಕಿ ಲಾಕ್‌ಡೌನ್ ಜಾರಿ ಮಾಡುವುದಿಲ್ಲ. ಜನರಿಗೆ ಎಲ್ಲ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಕೊಳ್ಳಲು ಅನುಕೂಲವಾಗುವಂತೆ ಮೊದಲೇ ತಿಳಿಸಲಾಗುತ್ತದೆ. ಕೂಲಿ ಮಾಡುವವರು, ಕಾಯಿಲೆ ಬಿದ್ದಿರುವವರು ಎಲ್ಲರ ಸಮಸ್ಯೆಯನ್ನೂ ಸರ್ಕಾರ ನೋಡಬೇಕಾಗುತ್ತದೆ ಎಂದು ಅಶೋಕ್ ವಿವರಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ನಿರ್ಣಯವನ್ನು ಆದಷ್ಟು ಬೇಗ ಘೋಷಿಸಿ ಜನರಿಗೆ ಪೂರ್ವ ತಯಾರಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಈಗಾಗಲೇ ಬೆಂಗಳೂರನ್ನು ಎಂಟು ವಲಯಗಳಾಗಿ ವಿಂಗಡಿಸಿ ಪ್ರತಿಯೊಂದಕ್ಕೂ ಒಬ್ಬೊಬ್ಬ ಸಚಿವರನ್ನು ಮತ್ತು ಐಎಎಸ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಅವರೆಲ್ಲರ ಸಭೆಯನ್ನು ವರ್ಚುವಲ್ ಆಗಿ ಸೋಮವಾರ ಅಥವಾ ಮಂಗಳವಾರ ಸಿಎಂ ನಡೆಸಲಿದ್ದಾರೆ ಎನ್ನಲಾಗಿದೆ. ಸಿಎಂ ಈಗ ಸ್ವಯಂ ಕ್ವಾರಂಟೈನ್‌ನಲ್ಲಿ ಇರುವುದರಿಂದ ಈ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ.
ಬೆಂಗಳೂರೊಂದರಲ್ಲೇ ಇವತ್ತು 1500ಕ್ಕೂ ಹೆಚ್ಚು ಕರೊನಾ ಕೇಸ್‌ಗಳು ಪತ್ತೆ ಆಗಿವೆ. ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿ ಇಲ್ಲ. ಖಾಸಗಿ ಆಸ್ಪತ್ರೆಯವರು ಹಾಸಿಗೆ ಕೊಡುವ ವಿಷಯದಲ್ಲಿ ಸಹಕರಿಸುತ್ತಿಲ್ಲ. ಆದ್ದರಿಂದ ಒಂದು ವಾರ ಇಡೀ ಬೆಂಗಳೂರನ್ನು ಲಾಕ್ ಮಾಡಿ ಈ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದಂತಿದೆ. ಬೆಂಗಳೂರು ಮಾತ್ರವಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೂ ಲಾಕ್‌ಡೌನ್ ಮಾಡುವ ಸಾಧ್ಯತೆಯೂ ಇದೆ.
ಇನ್ನು ಮುಂದೆ ಶನಿವಾರ, ಭಾನುವಾರ ಎರಡೂ ದಿನ ಲಾಕ್‌ಡೌನ್: ಗೋವಿಂದ ಕಾರಜೋಳ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 5 =
Remember me
