ಬೆಂಗಳೂರು: ಕರೊನಾ ಸೋಂಕು ಹರಡದಂತೆ ತಡೆಯಲು ಜಾರಿಗೊಳಿಸಿರುವ 3ನೇ ಹಂತದ ಲಾಕ್​ಡೌನ್ ಸಫಲಗೊಳಿಸುವುದು ರಾಜ್ಯದ ಜನರ ಜವಾಬ್ದಾರಿಯಾಗಿದ್ದು, ವಿಫಲವಾದರೆ ಮತ್ತಷ್ಟು ಬಿಗಿ ಕ್ರಮಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.
ಸ್ವಯಂ ಕ್ವಾರಂಟೈನ್​ನಲ್ಲಿದ್ದ ಅವರು ಅವಧಿ ಮುಗಿಸಿ ಹೊರಬಂದು ಗುರುವಾರ ವಿಧಾನ ಸೌಧ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಿಯಂತ್ರಣ ಕ್ರಮಗಳ ನಡುವೆಯೂ ಜನರಿಗೆ ಅನುಕೂಲವಾಗಲೆಂದು ಕೃಷಿ, ಕೈಗಾರಿಕೆ, ಐಟಿ-ಬಿಟಿ ಸೇರಿ ಕೆಲವು ಕ್ಷೇತ್ರಗಳಿಗೆ ಸಡಿಲಿಕೆ ನೀಡಲಾಗಿದೆ. ಇದರರ್ಥ ಮಾರಕ ಪಿಡುಗಿನ ಭಯ-ಭೀತಿ ಕಡಿಮೆಯಾಗಿದೆ ಎಂದಲ್ಲ. ಮೊದಲ ಎರಡು ಹಂತದ ಲಾಕ ಡೌನ್ ಕ್ರಮಗಳನ್ನು ಸರ್ಕಾರ ನಿರ್ವಹಿಸಿದರೆ, 3ನೇ ಹಂತದ ನಿರ್ವಹಣೆಯ ಹೊಣೆಗಾರಿಕೆ ಜನರ ಹೆಗಲೇರಿದೆ. ಅಂದರೆ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲನೆ, ಶುಚಿತ್ವ ಸೇರಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಈ ಹೊಣೆಗಾರಿಕೆಯ ಭಾಗವಾಗಿದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಇದನ್ನೂ ಓದಿಕನ್ನಡಿಗರಿಗಾಗಿ ದೆಹಲಿಯಿಂದ ವಿಶೇಷ ರೈಲು; ದುಬೈನಿಂದ ಮಂಗಳೂರು, ಬೆಂಗಳೂರಿಗೆ ವಿಶೇಷ ವಿಮಾನ
ಮೊಸರಲ್ಲಿ ಕಲ್ಲು ಹುಡುಕುವ ಚಾಳಿ: ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ ಮುಂತಾದ ರಾಜ್ಯಗಳಲ್ಲಿ ತಪಾಸಣೆ, ಕ್ವಾರಂಟೈನ್ ಮುಂತಾದ ಆರೋಗ್ಯ ಸುರಕ್ಷತಾ ಕ್ರಮಗಳಿಗೆ ವ್ಯವಸ್ಥೆ ಮಾಡಿಕೊಳ್ಳಬೇಕಿದ್ದು, ತಕ್ಷಣಕ್ಕೆ ಕಳುಹಿಸಬೇಡಿ ಎಂದು ಕೇಳಿಕೊಂಡಿದ್ದರಿಂದ ವಲಸಿಗ ಕಾರ್ವಿುಕರಿಗೆ ಮಾಹಿತಿ ನೀಡಿ ಮನವೊಲಿಸಿ ಇಲ್ಲಿಯೇ ಇರಲು ಒಪ್ಪಿಸಲಾಯಿತು. ವಲಸೆ ಕಾರ್ವಿುಕರನ್ನು ಬಲವಂತವಾಗಿ ತಡೆಹಿಡಿಯಲಾಗಿದೆ ಎಂದು ಪ್ರತಿಪಕ್ಷ ಆರೋಪಿಸಿದ್ದು, ಈ ಬಗ್ಗೆ ವಾಸ್ತವಾಂಶ ತಿಳಿದುಕೊಳ್ಳದ ಕಾಂಗ್ರೆಸ್​ನದು ಮೊಸರಲ್ಲಿ ಕಲ್ಲು ಹುಡುಕುವ ಚಾಳಿ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.
ಗಂಭೀರ ಕ್ರಮ: ಆಂಧ್ರದ ವಿಶಾಖಪಟ್ಟಣ ಅನಿಲ ಸೋರಿಕೆ ದುರಂತವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಸಾಯನಿಕ ಆಧಾರಿತ ಎಲ್ಲ ಕಾರ್ಖಾನೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಸಂಬಂಧಿಸಿದ ಅಧಿಕಾರಿಗಳಿಗೂ ಅಗತ್ಯ ಸೂಚನೆ ನೀಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಪ್ರಗತಿಯಲ್ಲಿದೆ ತನಿಖೆ
ಮೈಸೂರು ಜಿಲ್ಲೆಯನ್ನು ಕರೊನಾ ಸೋಂಕಿನಿಂದ ತತ್ತರಿಸುವಂತೆ ಮಾಡಿದ ನಂಜನಗೂಡು ಜುಬಿಲೆಂಟ್ ಕಾರ್ಖಾನೆ ಸೋಂಕು ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ನಿಖರವಾದ ಕಾರಣಗಳು ಇನ್ನೂ ಗೊತ್ತಾಗಿಲ್ಲ ಎಂದರು. ವಿದೇಶದಿಂದ ಮರಳುವ ಕನ್ನಡಿಗರಿಗೆ ಹೊಟೆಲ್ ರೂಮ್ಳಲ್ಲಿ ಕ್ವಾರಂಟೈನ್​ಗೆ ವ್ಯವಸ್ಥೆಯಾಗಿದ್ದು, ರೂಮ್ ಖರ್ಚನ್ನು ಅವರೇ ಭರಿಸುತ್ತಾರೆ. ನೆರೆ ರಾಜ್ಯಗಳ ಜನರ ಅನಧಿಕೃತ ಪ್ರವೇಶಕ್ಕೆ ಕಡಿವಾಣ ಹಾಕಲು ಎಲ್ಲ ಚೆಕ್ ಪೋಸ್ಟ್​ಗಳಿಗೆ ಸೂಚಿಸಿದ್ದು, ಅದರಲ್ಲೂ ನಿಪ್ಪಾಣಿ ಚೆಕ್ ಪೋಸ್ಟ್​ನಲ್ಲಿ ತೀವ್ರ ನಿಗಾವಹಿಸಲು ತಿಳಿಸಲಾಗಿದೆ ಎಂದರು.
ಕನ್ನಡಿಗರಿಗಾಗಿ ದೆಹಲಿಯಿಂದ ವಿಶೇಷ ರೈಲು; ದುಬೈನಿಂದ ಮಂಗಳೂರು, ಬೆಂಗಳೂರಿಗೆ ವಿಶೇಷ ವಿಮಾನ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:1 × 3 =
Remember me
