ಬೆಂಗಳೂರು:ಕರೊನಾ ಮಟ್ಟಹಾಕುವ ಜತೆಯಲ್ಲೇ ಜನಸಾಮಾನ್ಯರ ಜತೆಗೆ ವಿವಿಧ ಕ್ಷೇತ್ರಗಳ ಮೇಲೆ ಬಿದ್ದಿರುವ ನಷ್ಟದ ಹೊರೆ ತಗ್ಗಿಸುವತ್ತ ಗಮನ ಕೇಂದ್ರೀಕರಿಸಿರುವ ರಾಜ್ಯ ಸರ್ಕಾರ ಏ.30ರವರೆಗಿನ ಲಾಕ್​ಡೌನ್ ಮುಂದುವರಿಕೆ ಅವಧಿಯಲ್ಲಿ ಕೈಗೊಳ್ಳಬೇಕಾದ ಅತ್ಯಗತ್ಯ ಕ್ರಮಗಳ ಯೋಜನೆ ಸಿದ್ಧಪಡಿಸಿದೆ. ಸಂಕಷ್ಟದಲ್ಲಿರುವವರಿಗೆ ಪರಿಹಾರ ನೀಡಿಕೆ, ಹೊಸ ನೀತಿಗಳ ರಚನೆಗಾಗಿ ಸಿಎಂ ನೇತೃತ್ವದ ಆಂತರಿಕ ವಿಶೇಷ ಆರ್ಥಿಕ ಸಮಿತಿ ರಚನೆಯಂತಹ ಹತ್ತಾರು ಪ್ಯಾಕೇಜ್​ಗಳನ್ನು ಯೋಜನೆ ಒಳಗೊಂಡಿದ್ದು, ಒಂದೆರಡು ದಿನದಲ್ಲಿ ಅಧಿಕೃತವಾಗಿ ಘೋಷಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಲಾಕ್​ಡೌನ್ ವಿಸ್ತರಣೆ ವಿಚಾರವನ್ನು ಸೋಮವಾರ ಘೋಷಿಸುವ ಸಾಧ್ಯತೆ ಇದೆ. ರಾಜ್ಯದ ಯೋಜನೆ ಪ್ರಕಾರ ಕರೊನಾ ಹಾಟ್​ಸ್ಪಾಟ್​ಗಳಾದ ಬೆಂಗಳೂರು, ಮೈಸೂರು (ನಂಜನಗೂಡು), ಬೀದರ್, ಗೌರಿಬಿದನೂರಿನಲ್ಲಿ ಮಾಸಾಂತ್ಯದವರೆಗೂ ಲಾಕ್​ಡೌನ್ ನಿಯಮದಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ. ಆದರೆ ಹಾಟ್ ಸ್ಪಾಟ್ ಅಲ್ಲದ ಜಿಲ್ಲೆಗಳಲ್ಲಿ ಆಟೊ-ಟ್ಯಾಕ್ಸಿ, ಆಟೊಮೇಟೆಡ್ ಕೈಗಾರಿಕೆಗಳಿಗೆ ಅವಕಾಶ ನೀಡಿಕೆ ಸೇರಿ ಅನೇಕ ಕ್ರಮ ಪ್ರಸ್ತಾಪಿಸಲಾಗಿದೆ.
ಬಂದ್ ಮುಂದುವರಿಕೆ: ಹಾಟ್​ಸ್ಪಾಟ್ ಜಿಲ್ಲೆಗಳಲ್ಲಿ ಮಾಲ್, ಮಲ್ಟಿಪ್ಲೆಕ್ಸ್ ಸೇರಿದಂತೆ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವ ಎಲ್ಲ ಉದ್ಯಮ, ಚಟುವಟಿಕೆ ಬಂದ್ ಮುಂದುವರಿಯಲಿದೆ. ಈಗಿನಂತೆ ಮದುವೆ, ಧಾರ್ವಿುಕ ಕೇಂದ್ರ ಹಾಗೂ ಜನಸಂದಣಿಯ ಎಲ್ಲ ಕಾರ್ಯಕ್ರಮಗಳ ನಿರ್ಬಂಧ ಅಬಾಧಿತ ಎಂದು ಹೇಳಲಾಗಿದೆ.
ಕೃಷಿಗೆ ವಿನಾಯಿತಿ: ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ಯಾವುದೇ ತೊಂದರೆಯಿಲ್ಲದಂತೆ ತಲುಪಿಸುವ ಸರಪಳಿ ಸರಾಗ ನಿರ್ವಹಣೆಗೆ ಕೃಷಿ ಕ್ಷೇತ್ರ, ಸರ್ಕಾರ ಹಾಗೂ ಖಾಸಗಿ ಕ್ಷೇತ್ರದ ಪ್ರತಿನಿಧಿಗಳ ತಂಡ ರಚನೆ ಮಾಡಬೇಕು ಎಂದು ಹೇಳಲಾಗಿದೆ.
ಆಂತರಿಕ ವಿಶೇಷ ಸಮಿತಿ ರಚನೆ:ಕರೊನಾ ಲಾಕ್​ಡೌನ್​ನಿಂದ ಕೃಷಿ, ಕೈಗಾರಿಕೆ, ಸೇವಾ ವಲಯ ಸೇರಿದಂತೆ ವಿವಿಧ ವಲಯಗಳಲ್ಲಿ ಉಂಟಾಗಿರುವ ನಷ್ಟ ಲೆಕ್ಕ ಮಾಡಲು ಹಾಗೂ ಭರಿಸಲು ಕೈಗೊಳ್ಳಬೇಕಾದ ಮಾಗೋಪಾಯಗಳ ಕುರಿತು ಚಿಂತನೆ ನಡೆಸಲು ಸಿಎಂ, ಆರ್ಥಿಕ ತಜ್ಞರು, ಆರೋಗ್ಯ ತಜ್ಞರು, ಸಂಬಂಧಿತ ಮಂತ್ರಿಗಳು, ಎಂಎಸ್​ಎಂಇ ಸಂಘಟನೆಗಳು, ರೈತರು, ಕಾರ್ಪೆರೇಟ್ ಉದ್ಯಮಿಗಳನ್ನೊಳಗೊಂಡ ಆಂತರಿಕ ವಿಶೇಷ ಆರ್ಥಿಕ ಸಮಿತಿ ರಚನೆ ಮಾಡಬೇಕು ಎಂದು ತಿಳಿಸಲಾಗಿದೆ.
ಸರ್ಕಾರದ ಇನ್ನಿತರ ಕ್ರಮಗಳು
* ಎಲ್ಲ ಅಂತಾರಾಷ್ಟ್ರೀಯ, ದೇಶಿ ಪ್ರಯಾಣಿಕ ವಿಮಾನ ಸಂಚಾರ ನಿರ್ಬಂಧ ಮುಂದುವರಿಕೆ. ಸರಕು ಸಾಗಣೆ ಸಂಚಾರಕ್ಕೆ ಹಂತ ಹಂತವಾಗಿ ಚಾಲನೆ
* ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ವೃದ್ಧಿಸಲು ಆಯುಷ್ ವ್ಯವಸ್ಥೆಯ ಸಂಶೋಧನೆಗಳ ಬಳಕೆ, ಡಿಜಿಟಲ್ ಪೇಮೆಂಟ್ ಕೈಗೊಳ್ಳಲು ಸಾರ್ವಜನಿಕರಿಗೆ ಉತ್ತೇಜನ
ಅತ್ಯವಶ್ಯಕ ಸೇವೆಗಳು
* ಆಹಾರ, ಔಷಧದಂತಹ ಅತ್ಯವಶ್ಯಕ ಸೇವೆಗಳ ಮೇಲಿನ ನಿರ್ಬಂಧ ಮತ್ತಷ್ಟು ಸಡಿಲ, ಆದರೆ ಹೋಟೆಲ್​ನಲ್ಲೇ ಆಹಾರ ಸೇವಿಸುವುದಕ್ಕೆ ನಿರ್ಬಂಧ ಮುಂದುವರಿಕೆ
್ಞಲ್ಲ ಆರೋಗ್ಯ ಸೇವೆ, ದಿನಸಿ ಉದ್ಯಮದಲ್ಲಿ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಬೇಕು
್ಞೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಂಕು ನಿವಾರಕ ಸುರಂಗಗಳನ್ನು ಸ್ಥಾಪಿಸಬೇಕು ಜತೆಯಲ್ಲೇ ಸಾಮಾಜಿಕ ಅಂತರವನ್ನು ಕಾಪಾಡಬೇಕು.
ಸ್ಥಳೀಯ ನಿರ್ಬಂಧದ ಕ್ರಮಗಳು
* ಹಿರಿಯ ನಾಗರಿಕರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಉಳ್ಳವರು ಸದಾ ಮನೆಯಲ್ಲೇ ಇರುವುದು, ಹಾಟ್​ಸ್ಪಾಟ್ ಅಲ್ಲದ ಜಿಲ್ಲೆಗಳಲ್ಲಿ ಹವಾನಿಯಂತ್ರಣದ ಅವಶ್ಯಕತೆ ಇಲ್ಲದ ಉದ್ಯಮಗಳಿಗಷ್ಟೇ ಅವಕಾಶ, ಆದರೆ ಜನಜಂಗುಳಿ ಉಂಟಾಗುವಂತಿಲ್ಲ.
* ಸಾರ್ವಜನಿಕ ಸ್ಥಳ, ಸಾರ್ವಜನಿಕ ಸಾರಿಗೆಯಲ್ಲಿ ಫ್ಯೂಮಿಗೇಷನ್ ಮುಂದುವರಿಕೆ
* ಸ್ಥಳೀಯ ಪರಿಸ್ಥಿತಿ ಆಧರಿಸಿ ಹಂತಹಂತವಾಗಿ ಸಾರ್ವಜನಿಕ ಸಾರಿಗೆಗೆ ಚಾಲನೆ, ಆಟೋ ರಿಕ್ಷಾ ಹಾಗೂ ಕ್ಯಾಬ್ ಸೇವೆಗಳಿಗೆ ಅವಕಾಶ
* ಅತ್ಯವಶ್ಯಕ ಸಾಗಣೆ, ಸೇವೆ ಹೊರತುಪಡಿಸಿ ಎಲ್ಲ ಅಂತರ ಜಿಲ್ಲಾ ಮತ್ತು ಅಂತಾರಾಜ್ಯ ಸಾರಿಗೆ ನಿರ್ಬಂಧ ಮುಂದುವರಿಕೆ
ಶಿಕ್ಷಣ ಕ್ಷೇತ್ರ
* ಮುಂದಿನ ಆದೇಶದವರೆಗೆ ಎಲ್ಲ ಶೈಕ್ಷಣಿಕ ಸಂಸ್ಥೆಗಳೂ ಬಂದ್
* ಮೇನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದು
* ಉನ್ನತ ಶಿಕ್ಷಣ ದಾಖಲಾತಿಗೆ ತೊಂದರೆ ಆಗದಂತೆ ಶೈಕ್ಷಣಿಕ ಸಂಸ್ಥೆಗಳು ಆನ್​ಲೈನ್ ಸಂದರ್ಶನ ನಡೆಸಬೇಕು, ಇ-ಲರ್ನಿಂಗ್ ಮಾಡ್ಯೂಲ್ ಮೂಲಕ ದೂರ ಶಿಕ್ಷಣಕ್ಕೆ ಉತ್ತೇಜನ ನೀಡಬೇಕು
| ಗೋವಿಂದ ಚಿನ್ನಕುರ್ಚಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 14 =
Remember me
