ಮಂಗಳೂರು: ಲಾಕ್​ ಡೌನ್​ ಹಲವು ಅವಾಂತರಗಳಿಗೆ ಕಾರಣವಾಗಿದೆ. ವಿದ್ಯಾರ್ಥಿಯೊಬ್ಬ ತನ್ನ ಗೆಳೆಯನನ್ನು ದೊಡ್ಡದಾದ ಸೂಟ್​ಕೇಸ್​ನಲ್ಲಿ ಕೂರಿಸಿ ಮುಚ್ಚಿ ಅದನ್ನು ಅಪಾರ್ಟ್​ಮೆಂಟ್​ಗೆ ಹೊತ್ತೊಯ್ಯುವಾಗ ಸಿಕ್ಕಿ ಬಿದ್ದಿದ್ದಾನೆ.
ನಗರದ ಆರ್ಯಸಮಾಜ ರಸ್ತೆಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಘಟನೆ ನಡೆದಿದೆ. ಅಪಾರ್ಟ್​ಮೆಂಟ್​ನಲ್ಲಿ ವಿದ್ಯಾರ್ಥಿಯೊಬ್ಬ ವಾಸವಾಗಿದ್ದ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಪಾರ್ಟ್​ಮೆಂಟ್​ಗೆ ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಅಲ್ಲದೆ ಪ್ರವೇಶ ದ್ವಾರದಲ್ಲೇ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ವಿದ್ಯಾರ್ಥಿಗೆ ಒಬ್ಬನೇ ಕಾಲ ಕಳೆಯುವುದು ಕಷ್ಟವಾಗಿ ತನ್ನ ಗೆಳೆಯನಿಗೆ ಕರೆ ಮಾಡಿ ಅಪಾರ್ಟ್​ಮೆಂಟ್​ನಲ್ಲಿರುವ ಕೊಠಡಿಗೆ ಬರುವಂತೆ ಸೂಚಿಸಿದ. ಆತ ಅಪಾರ್ಟ್​ಮೆಂಟ್​ ಪ್ರವೇಶದ್ವಾರದ ಬಳಿ ಬರುವುದಾಗಿ ತಿಳಿಸಿದ.
ಇತ್ತ ವಿದ್ಯಾರ್ಥಿ ದೊಡ್ಡದಾದ ಸೂಟ್​ಕೇಸ್​ ತೆಗೆದುಕೊಂಡು ಹೋಗಿದ್ದ. ಅದರಲ್ಲಿ ತನ್ನ ಸ್ನೇಹಿತನನ್ನು ಮಲಗಿಸಿ ಮುಚ್ಚಿದ ಯಾರಿಗೂ ಕಾರಣದಂತೆ ಸೂಟ್​ಕೇಸ್​ ಅನ್ನು ಅಪಾರ್ಟ್​ಮೆಂಟ್​ ಕೊಠಡಿಗೆ ಹೊಯ್ಯುತ್ತಿದ್ದ. ಈ ವೇಳೆ ಸೂಟ್​ ಅಲುಗಾಡಿತು. ಸ್ಥಳದಲ್ಲೇ ಇದ್ದ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದು ಸೂಟ್​ಕೇಸ್​ ಕೆಳಗಿಸಿ ಪರಿಶೀಲಿಸಿದಾಗ ಯುವಕನೊಬ್ಬ ಇದ್ದ. ಇದರಿಂದ ಗಾಬರಿಗೊಂಡ ಭದ್ರತಾ ಸಿಬ್ಬಂದಿ ಇಬ್ಬರನ್ನು ಠಾಣೆಗೆ ಕರೆದೊಯ್ದ. ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)
ಕರ್ನಾಟಕದಲ್ಲಿ ಕರೊನಾಗೆ ಕಡಿವಾಣ: ದೇಶದಲ್ಲಿ 19ನೇ ಸ್ಥಾನದಲ್ಲಿದೆ ರಾಜ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + two =
Remember me
