ಚಿತ್ರದುರ್ಗ:ದೇಶಾದ್ಯಂತ ಲಾಕ್​ಡೌನ್​ ಆಗಿರುವ ಹಿನ್ನೆಲೆಯಲ್ಲಿ ಅದೆಷ್ಟೋ ಜನರು ಹೊಟ್ಟೆತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ.
ದಿನಗೂಲಿ ಕೆಲಸಗಾರರು, ವಲಸೆ ಕಾರ್ಮಿಕರಿಗೆಲ್ಲ ಆಶ್ರಯತಾಣಗಳನ್ನು ನಿರ್ಮಿಸಿ, ಅವರಿಗೆ ಆಹಾರ ನೀಡಲಾಗುತ್ತಿದೆ.
ಹಾಗೇ ಸುಡುಗಾಡು ಸಿದ್ದರೂ ಕೂಡ ತುತ್ತು ಅನ್ನಕ್ಕಾಗಿ ಕಣ್ಣೀರು ಇಡುತ್ತಿದ್ದಾರೆ. ಖಾಲಿ ಪಾತ್ರೆ ಹಿಡಿದು ಅನ್ನಕ್ಕಾಗಿ ಬೇಡುವ ದೃಶ್ಯ ಮನಕಲಕುವಂತಿದೆ.
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಮೈಲೆಹಳ್ಳಿ ಗ್ರಾಮದ ಸುಡುಗಾಡು ಸಿದ್ಧರು ಒಂದು ಹೊತ್ತಿನ ಊಟವೂ ಸಿಗದೆ ಕಷ್ಟಪಡುತ್ತಿದ್ದಾರೆ. ಚಿಕ್ಕಮಕ್ಕಳೂ ಹಸಿವಿನಿಂದ ಕಂಗಾಲಾಗಿದ್ದಾರೆ.
ಲಾಕ್​ಡೌನ್​ ನಿಮಿತ್ತ ಹೊರಗೆಲ್ಲೂ ಹೋಗಲಾಗುತ್ತಿಲ್ಲ. ದುಡಿಮೆ ಇಲ್ಲ. ಆಹಾರ ಹುಡುಕುತ್ತ ಹೊರಟರೆ ಪೊಲೀಸರು ಹಿಡಿಯುತ್ತಾರೆ ಎಂಬುದು ಅವರ ಅಳಲು. ಜಿಲ್ಲಾಡಳಿತ, ತಾಲೂಕು ಆಡಳಿತಗಳೂ ಇವರ ಬಗ್ಗೆ ಗಮನ ಹರಿಸಿಲ್ಲ ಎನ್ನುವುದು ಶೋಚನೀಯ ಸಂಗತಿ. (ದಿಗ್ವಿಜಯ ನ್ಯೂಸ್​)

ಕ್ವಾರಂಟೈನ್​ನಲ್ಲಿದ್ದೀರಾ ಹೊರ ಬರಬೇಡಿ ಎಂದದ್ದೇ ತಪ್ಪಾಯಿತು- ಸರ್ಕಲ್ ಇನ್​ಸ್ಪೆಕ್ಟರ್​ ಮೇಲೆ ನಡೆಯಿತು ಹಲ್ಲೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 7 =
Remember me
