ಮಡಿಕೇರಿ:ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೇನೆಂದು ಸುಳ್ಳು ಹೇಳಿಕೊಂಡು ಪ್ರಾರ್ಥನಾ ಸ್ಥಳಗಳು ಸೇರಿದಂತೆ ವಿವಿಧೆಡೆ ಹಣ ಮತ್ತು ಆಹಾರ ಕಿಟ್‌ಗಳನ್ನು ಪಡೆದು ವಂಚಿಸುತ್ತಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಗಿರೀಶ್ ಪೂಜಾರಿ ಬಂಧಿತ. ಇಲ್ಲ-ಸಲ್ಲದ ಕಥೆ ಕಟ್ಟಿ ಅಮಾಯಕರಿಂದ ಹಣ ಪೀಕುತ್ತಿದ್ದ. ಕೊಡಗು ಜಿಲ್ಲೆಯಲ್ಲಿ ಸಂಕಷ್ಟದಲ್ಲಿ ಇದ್ದವರಿಗೆ ನೆರವಾಗುತ್ತಿದ್ದ ಮಾಧ್ಯಮ ಸ್ಪಂದನ ತಂಡವನ್ನೂ ಈತ ಬಿಟ್ಟಿಲ್ಲ. ತಂಡ ಸಹಾಯ ಮಾಡುವುದನ್ನೆ ಬಂಡವಾಳ ಮಾಡಿಕೊಂಡು, ಪಡಿತರ ಕಿಟ್‌ನೊಂದಿಗೆ ಆರ್ಥಿಕ ನೆರವೂ ಪಡೆದು ವಂಚಿಸಿದ್ದಾನೆ.
ಇದನ್ನೂ ಓದಿ:ಕರೊನಾದಿಂದಾಗಿ ಕೆಲಸ ಹೋಯ್ತು; ಈಗ ನರೇಗಾದಲ್ಲಿ ಕೂಲಿ ಮಾಡ್ತಿದಾನೆ ಈ ಇಂಜಿನಿಯರ್!
ವಂಚನೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆ ಕುಶಾಲನಗರ ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ದೇವರು ನೇತೃತ್ವದಲ್ಲಿ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಜಿಲ್ಲೆಯ ವಿವಿಧೆಡೆ ಮಸೀದಿಗಳಲ್ಲಿ ಹಣ ಸಂಗ್ರಹ ಸೇರಿ ವಂಚನೆ ಮಾಡಿರುವ ಪ್ರಕರಣಗಳು ಹೊರಬರುತ್ತಿವೆ.
ಎಂಟು ತಿಂಗಳಿನಿಂದ ಕುಶಾಲನಗರದ ಕುಶಾಲ್ ಲಾಡ್ಜ್‌ನಲ್ಲಿ ನೆಲೆಸಿರುವ ಈತನ ವಂಚನೆ ಪ್ರಕರಣಗಳು ಅಚ್ಚರಿ ಮೂಡಿಸುವಂತಿವೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆಂದು ರಂಜಾನ್ ಮಾಸದಲ್ಲಿ ಮಸೀದಿಗಳಿಂದ ಹಣ ಸಂಗ್ರಹಿಸಿದ್ದಾನೆ! ಮುಸ್ಲಿಂ ಯುವತಿಯನ್ನು ವಿವಾಹವಾಗಿರುವುದರಿಂದ ಮನೆಯಿಂದ ಹೊರ ಹಾಕಿದ್ದಾರೆಂದು ಕಥೆ ಕಟ್ಟಿ ಹಣ ವಸೂಲಿ ಮಾಡಿದ್ದಾನೆ!!
ಪತ್ರಕರ್ತ ಶೇಷಕೃಷ್ಣ ಅವರಿಗೆ ಕರೆ ಮಾಡಿ, ಊಟಕ್ಕೂ ಗತಿ ಇಲ್ಲ ಎಂದು ಅಸಹಾಯಕ ಪರಿಸ್ಥಿತಿ ಹೇಳುತ್ತಾ ಕಣ್ಣೀರು ಹಾಕಿಕೊಂಡಿದ್ದ. ಶೇಷಕೃಷ್ಣ ಮಾಧ್ಯಮ ಸ್ಪಂದನ ತಂಡದ ಐಮಂಡಲ ಗೋಪಾಲ್ ಸೋಮಯ್ಯ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ತದನಂತರ ಮಾಧ್ಯಮ ಸ್ಪಂದನ ತಂಡದಿಂದ 15 ಸಾವಿರ ರೂ. ಹಾಗೂ 6 ತಿಂಗಳಿಗೆ ಆಗುವಷ್ಟು ಪಡಿತರ ಸಂಗ್ರಹಿಸಿ ಆತನಿಗೆ ನೀಡಲಾಗಿತ್ತು.
ಇದನ್ನೂ ಓದಿ:ಜೂನ್ 30ರವರೆಗೆ ಲಾಕ್‌ಡೌನ್ ವಿಸ್ತರಣೆ; ಜೂನ್ 8ರಿಂದ ದೇವಸ್ಥಾನ, ಹೋಟೆಲ್, ಮಾಲ್ ‌ಓಪನ್
ಕಿರುಚಿತ್ರ ನಿರ್ಮಾಪಕ ಉಮಾಶಂಕರ್ ಈತನಿಗೆ ಕಿಟ್ ನೀಡಿದ್ದು, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಆ ವೇಳೆ ಈತನ ಮೋಸ ಬಯಲಾಯಿತು. ಮಸೀದಿಗಳಲ್ಲಿ ಹಣ ವಸೂಲಿ ಮಾಡಿರುವ ಮಾಹಿತಿ ಲಭ್ಯವಾಯಿತು. ತದನಂತರ ಮಾಹಿತಿ ಸಂಗ್ರಹಿಸಿದಾಗ ಸುಳ್ಳು ಕಥೆ ಕಟ್ಟಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
‘‘ಪತ್ನಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ನನಗೆ 4 ವರ್ಷದ ಮಗು ಇದ್ದು, ಎಂಎಸ್ಸಿ ಪದವೀಧರನಾಗಿರುವ ನಾನು ಕೌನ್ಸೆಲಿಂಗ್ ಮಾಡುತ್ತಿದ್ದೇನೆ. ಲಾಕ್‌ಡೌನ್‌ನಿಂದ ಕೆಲಸ ಇಲ್ಲದಾಗಿದೆ. ಇದರಿಂದ ತುಂಬಾ ಕಷ್ಟಕ್ಕೆ ಸಿಲುಕಿದ್ದೇನೆ’’ ಎಂದು ಕಥೆ ಕಟ್ಟಿದ್ದ.
ಚಿನ್ನದ ಅಂಗಡಿಯಲ್ಲಿ ವಿಚಾರಿಸಿದಾಗ ಅಲ್ಲಿ ಕೆಲಸ ಮಾಡುವ ಮಹಿಳೆ ಇಲ್ಲ ಎಂಬ ಅಂಶ ಖಚಿತವಾಯಿತು. ಲಾಡ್ಜ್ ಮಾಲೀಕರನ್ನು ಕೇಳಿದಾಗ ಕಳೆದ 8 ತಿಂಗಳಿನಿಂದ ಒಬ್ಬನೇ ಲಾಡ್ಜ್‌ನಲ್ಲಿರುವ ಮಾಹಿತಿ ಲಭ್ಯವಾಯಿತು. ಮಾಧ್ಯಮ ಸ್ಪಂದನ ತಂಡದ ಸದಸ್ಯರು ಕುಶಾಲನಗರ ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ದೇವರು ನೇತೃತ್ವದಲ್ಲಿ ತೆರಳಿ ಆತನಿಗೆ ನೀಡಿದ ಹಣ ಮತ್ತು ಆಹಾರ ಕಿಟ್ ಹಿಂಪಡೆದುಕೊಂಡರು. ಕೊಟ್ಟ 15 ಸಾವಿರ ರೂ.ನಲ್ಲಿ 2,500 ರೂ. ಖರ್ಚು ಮಾಡಿದ್ದ.
ಇದನ್ನೂ ಓದಿ:ಸ್ಟೀವ್​ ಸ್ಮಿತ್​ ಎದುರು ಹೀಗೇಕೆ ಮಾಡಿದೆ… ಕೊನೆಗೂ ಬಾಯ್ಬಿಟ್ರು ಇಶಾಂತ್…!​
‘‘ನನ್ನನ್ನು ನಂಬಿಸಿ 2 ಸಾವಿರ ರೂ. ಹಣ ಪಡೆದುಕೊಂಡಿದ್ದಾನೆ. ಮಾಧ್ಯಮದವರನ್ನೂ ನಂಬಿಸಿರುವುದು ಅಚ್ಚರಿ ಮೂಡಿಸಿದೆ’’ ಎಂದು ಕುಶಾಲನಗರ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು ಹೇಳಿದ್ದಾರೆ.
ಐಷಾರಾಮಿ ಜೀವನಕ್ಕಾಗಿ ತಾಯಿಯನ್ನೇ ಯುವತಿಯನ್ನಾಗಿಸಿದ ಮಗ: ಇವರ ಕತೆ ಕೇಳಿದ್ರೆ ಶಾಕ್​ ಆಗ್ತೀರಾ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × one =
Remember me
