ಬಾಗಲಕೋಟೆ:ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕೂರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕ್ವಾರಂಟೈನ್‌ಗೂ ಒಪ್ಪದೆ, ತನ್ನೂರಿಗೆ ಹೋಗುವುದಕ್ಕೂ ಹಿಂದೇಟು ಹಾಕಿ ಕೊನೆಗೆ ವಿಷ ಸೇವಿಸಿ ಆಸ್ಪತ್ರೆಯ ಪಾಲಾಗಿದ್ದಾನೆ.
40 ವಯಸ್ಸಿನ ವ್ಯಕ್ತಿಯೊಬ್ಬ ಮಹಾರಾಷ್ಟ್ರದ ರತ್ನಗಿರಿಯಿಂದ ಶುಕ್ರವಾರ ರಾತ್ರಿ ಚಿಕ್ಕೂರ ಗ್ರಾಮಕ್ಕೆ ಆಗಮಿಸಿದ್ದ. ಈ ವಿಷಯ ತಿಳಿದು ಶನಿವಾರ ಬೆಳಗ್ಗೆ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ಸಿಬ್ಬಂದಿ ಆತನಿಗೆ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ:ಬೆಲೆ ಕುಸಿತದಿಂದ ಕಂಗೆಟ್ಟು ಹಸಿಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ
ಆತ ಕ್ವಾರಂಟೈನ್‌ಗೆ ಹೋಗಲು ನಿರಾಕರಿಸಿದಾಗ, ಮರಳಿ ಊರಿಗೆ ಹೋಗುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ. ಇದರಿಂದ ಆತಂಕಕ್ಕೆ ಒಳಗಾದ ಆತ ಗುಡಿಸಲಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ. ಕೂಡಲೇ ಆತನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೂಲತಃ ಯಾದಗಿರಿ ಜಿಲ್ಲೆಯ ಜುಮಲಾಪುರ ತಾಂಡಾದ ಈ ವ್ಯಕ್ತಿ ಚಿಕ್ಕೂರ ಗ್ರಾಮದಲ್ಲಿ ಜಮೀನು ಮಾಡಿಕೊಂಡಿದ್ದಾನೆ. ರತ್ನಗಿರಿಗೆ ತೆರಳಿದ್ದ ವ್ಯಕ್ತಿ ಅಲ್ಲಿಂದ ಚಿಕ್ಕೂರ ಗ್ರಾಮಕ್ಕೆ ಹೇಗೆ ಬಂದ ಎನ್ನುವುದನ್ನು ಸ್ಪಷ್ಟವಾಗಿ ಹೇಳಿಲ್ಲ. ಒಮ್ಮೆ ಕಾಲ್ನಡಿಗೆಯಲ್ಲಿ ಬಂದಿದ್ದಾಗಿ, ಮತ್ತೊಮ್ಮೆ ಲಾರಿ, ಬಸ್‌ನಲ್ಲಿ ಬಂದಿರುವುದಾಗಿ ಹೇಳುತ್ತಿದ್ದಾನೆ.
ಇದನ್ನೂ ಓದಿ:ವಿಶೇಷ ವಿಮಾನಗಳ ಮೂಲಕ ಆಸ್ಟ್ರೇಲಿಯಾ ಕನ್ನಡಿಗರು ವಾಪಾಸ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 10 =
Remember me
