ಬೆಂಗಳೂರು: ಮಾತಾಡುವುದಕ್ಕೆ ಇದು ಸಮಯವಲ್ಲ, ಕೈಗೊಂಡ ನಿರ್ಧಾರಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಮುಖ್ಯ. ಭಯ-ಭೀತಿ ಸೃಷ್ಟಿಸಿರುವ ಕರೊನಾ ವೈರಸ್ ಸೋಂಕು ತಡೆಗಟ್ಟಲು ಎಲ್ಲರೂ ಜವಾಬ್ದಾರಿ ಅರಿತು ವರ್ತಿಸಬೇಕಾಗಿದೆ. ಕೇಳಿದರೆ ಸಲಹೆ ಕೊಡುತ್ತೇವೆ, ಸ್ವೀಕರಿಸಿ ಜಾರಿಗೆ ತರುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ದಿಗ್ವಿಜಯ ನ್ಯೂಸ್ 24/7 ಹಾಗೂ ವಿಜಯವಾಣಿ ಏರ್ಪಡಿಸಿದ್ದ ಫೋನ್ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆಗಾಗ್ಗೆ ಮೊನಚು ಮಾತುಗಳಿಂದ ತಿವಿಯುತ್ತಲೇ ಟೀಕೆ ಮಾಡುವುದಕ್ಕೆ ಇದು ಸಮಯವಲ್ಲ. ಅಂತಹ ಭಾವನೆ ಬೇಡ, ಸಲಹೆಗಳಿವು. ಸಂಕಷ್ಟ ಕಾಲದಲ್ಲಿ ಸರ್ಕಾರದ ಜತೆ ಕೈಜೋಡಿಸುವ ಉದ್ದೇಶವಿದ್ದ ಕಾರಣಕ್ಕೆ ಸಿಎಂ ಕರೆದ ಸಭೆಯಲ್ಲಿ ಭಾಗವಹಿಸಿ ಏನೆಲ್ಲ ಮಾಡಬಹುದು ಎಂದು ತಿಳಿಸಿರುವೆ. ರೈತರು, ಜನರು ನಮ್ಮ ಗಮನಕ್ಕೆ ತಂದ ಸಮಸ್ಯೆಗಳನ್ನು ತಕ್ಷಣಕ್ಕೆ ಮುಖ್ಯ ಕಾರ್ಯದರ್ಶಿಗೆ ತಿಳಿಸಿ, ಯಾವ ರೀತಿ ಪರಿಹರಿಸಬಹುದು ಎಂದು ಹೇಳಿರುವೆ. ನಮ್ಮ ಸಲಹೆಗಳನ್ನು ಸರ್ಕಾರ ಅದೆಷ್ಟರ ಮಟ್ಟಿಗೆ ಪರಿಗಣಿಸಿ ಕಾರ್ಯರೂಪಕ್ಕೆ ತಂದಿದೆ ಎಂದು ವಿಮರ್ಶೆ ಮಾಡಲು ಬಯಸುವುದಿಲ್ಲ. ಆದರೆ, ವಾಸ್ತವ ಸ್ಥಿತಿ ಎಲ್ಲವನ್ನೂ ಸಾರಿ ಹೇಳುತ್ತಿದೆ ಎಂದು ಹೇಳಿದರು.
ತಬ್ಲಿಘಿಗಳಿಗೆ ಕೈಮುಗಿದು ಕೇಳುವೆ
ತಬ್ಲಿಘಿಗಳಿಗೆ ಕೈಮುಗಿದು ಕೇಳುವೆ, ಸ್ವಯಂ ಪ್ರೇರಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಿ ನಿಮ್ಮನ್ನು ರಕ್ಷಿಸಿಕೊಳ್ಳುವುದರ ಜತೆಗೆ ಕುಟುಂಬವನ್ನು ರಕ್ಷಿಸಿರಿ. ಸಮಾಜದ ಜತೆಗೆ ಚೆಲ್ಲಾಟವಾಡಬೇಡಿ, ನಿಯಮ ಕಟ್ಟುನಿಟ್ಟಾಗಿ ಪಾಲಿಸಿರಿ ಎಂದು ಎಚ್​ಡಿಕೆ ಮನವಿ ಮಾಡಿದರು. ಜನರು ಉಡಾಫೆಯಿಂದ ವರ್ತಿಸದೆ ಮನೆಯಲ್ಲೇ ಇರಿ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ಕೋರಿದರು.
ಅಭೂತಪೂರ್ವ ಬೆಂಬಲ
ದೇಶದ ಇತಿಹಾಸದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪಕ್ಷಾತೀತವಾಗಿ ಅಭೂತಪೂರ್ವ ಬೆಂಬಲ, ಪೋ›ತ್ಸಾಹ ಸಿಕ್ಕಿದೆ. ಪ್ರಧಾನಿ ಮೋದಿ ಅವರ ಪ್ರತಿಯೊಂದು ಕರೆಗೂ ಜನ ಓಗೊಡುತ್ತಿದ್ದಾರೆ. ದೇಶದ 130 ಕೋಟಿ ಜನರಲ್ಲಿ ಅಷ್ಟೊಂದು ಪ್ರಮಾಣದ ಆತ್ಮವಿಶ್ವಾಸ ತುಂಬಿದ್ದು, ಇದನ್ನು ಹೇಗೆ ಸೃಷ್ಟಿಸಿಕೊಂಡರು ಎಂದು ಈಗ ರ್ಚಚಿಸುವುದಕ್ಕೆ ಇಷ್ಟಪಡುವುದಿಲ್ಲ. ಕರೊನಾ ನಿಯಂತ್ರಣ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸೆ ಅಥವಾ ಸರ್ಟಿಫಿಕೇಟ್ ಕೊಟ್ಟಿದ್ದು ಪ್ರಮುಖವಾಗದು. ಲಾಕ್​ಡೌನ್ ಒಂದು ಪರಿಹಾರವಷ್ಟೇ, ಸರ್ಕಾರಗಳ ಜವಾಬ್ದಾರಿ ದೊಡ್ಡದಿದೆ. ಶ್ರಮಿಕರು, ರೈತರು ಸೇರಿ ಎಲ್ಲ ಕ್ಷೇತ್ರಗಳ ಬಿಕ್ಕಟ್ಟಿಗೆ ಪರಿಹಾರ, ಮುಂದೆ ಕೈಗೊಳ್ಳಬೇಕಾದ ಪರ್ಯಾಯ ಕ್ರಮಗಳ ಬಗ್ಗೆಯೂ ಗಂಭೀರವಾಗಿ ಚಿಂತನೆ ನಡೆಸುವುದು ತುರ್ತು ಅಗತ್ಯ, ಪ್ರತಿಯೊಂದು ಕ್ಷಣವೂ ಅತ್ಯಮೂಲ್ಯವಾಗಿದೆ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಸರ್ಕಾರಕ್ಕೆ ಸಲಹೆಗಳು
ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಒದಗಿಸಿ, ಆಸ್ಪತ್ರೆಗಳಿಗೆ ಮೂಲ ಸವಲತ್ತುಗಳನ್ನು ಕಲ್ಪಿಸಿ.
ಪ್ರತಿ ಹಳ್ಳಿಯಲ್ಲಿ ಜನರ ಆರೋಗ್ಯ ಪರಿಸ್ಥಿತಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿರಿ. ಆಯಾ ಗ್ರಾ.ಪಂ. ಪಿಡಿಒ, ಸದಸ್ಯರ ಜತೆಗೆ ನೋಡಲ್ ಅಧಿಕಾರಿಯನ್ನು ಈ ಕೆಲಸಕ್ಕೆ ನಿಯೋಜಿಸಿ.
ರಾಜ್ಯದ 30 ಜಿಲ್ಲೆಗಳಲ್ಲಿ ಯಾವ್ಯಾವ ಬೆಳೆಯಿದೆ, ಎಲ್ಲೆಲ್ಲಿಗೆ ಸ್ಥಳಾಂತರಿಸಬಹುದು. ಸಾಗಣೆ, ಪೂರೈಕೆ ಬಗ್ಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಮಗ್ರ ಮಾಹಿತಿ ಕ್ರೋಡೀಕರಿಸಿ ಕ್ರಮವಹಿಸಿ.
ಸರ್ಕಾರವೇ ರೈತರಿಂದ ಖರೀದಿಸಿ ಗ್ರಾಹಕರಿಗೆ ಸೂಕ್ತ ಬೆಲೆಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಿ. ಜತೆಗೆ ಬೆಳೆ ನಷ್ಟ ಮಾಡಿಕೊಂಡ ರೈತರಿಗೆ ತುರ್ತು ಪರಿಹಾರವಾಗಿ ತಲಾ 15,000 ರೂ. ನೀಡಿ.
ಜನಸಂದಣಿ ಪ್ರದೇಶದಲ್ಲಿ ರಾಸಾಯನಿಕ ದ್ರಾವಣ ಸಿಂಪಡಿಸುವ ಸುರಂಗಗಳನ್ನು ನಿರ್ವಿುಸಿದರೆ ಸಾಮಾಜಿಕ ಅಂತರ ಕಾಪಾಡಿದಂತಾಗುತ್ತದೆ, ಪೊಲೀಸರ ಮೇಲಿನ ಭಾರ ಸ್ವಲ್ಪಮಟ್ಟಿಗೆ ತಗ್ಗುತ್ತದೆ.
ಸಂಕಷ್ಟದಿಂದಾಗಿ ಬೆಂಗಳೂರು ಬಿಟ್ಟು ವಾಪಸ್ ಹಳ್ಳಿಗೆ ಹೋಗಿರುವ ಯುವ ಜನತೆ ಕೃಷಿಯತ್ತ ಆಕರ್ಷಿತವಾಗುತ್ತಿದ್ದು, ಉತ್ತೇಜನ ಕ್ರಮ ಕೈಗೊಂಡು ಮತ್ತೆ ಇತ್ತ ಬರದಂತೆ ನೋಡಿಕೊಳ್ಳಿ.
ಮುಂಗಾರು ಹಂಗಾಮಿಗೆ ಸಿದ್ಧತೆ, ಮಕ್ಕಳ ಶಾಲೆ ಪ್ರವೇಶ ಶುಲ್ಕವನ್ನು ಸರ್ಕಾರವೇ ಭರಿಸುವುದು.
ಲಾಕ್​ಡೌನ್ ಹಿಂತೆಗೆದ ಬಳಿಕ ಮುಂದಿನ ಕ್ರಮಕ್ಕೆ ಪೂರ್ವ ತಯಾರಿ, ಪರ್ಯಾಯ ಕ್ರಮ, ಎಲ್ಲರನ್ನು ಒಳಗೊಂಡ ಪರಿಹಾರೋಪಾಯಗಳು ಬೇಕು. ಜತೆಗೆ ರಸ್ತೆ, ಕಟ್ಟಡ ಇತ್ಯಾದಿ ಕಾಮಗಾರಿಗಳನ್ನು ಬಿಟ್ಟು ಪರ್ಯಾಯ ಪರಿಹಾರಗಳಿಗೆ ಆದ್ಯತೆ ನೀಡಿ.
ಸೌದಿ ರಾಜಮನೆತನದ 150 ಮಂದಿಗೆ ಕರೊನಾ ವೈರಸ್​ ಸೋಂಕು: ಇಡೀ ಕುಟುಂಬ ಕ್ವಾರಂಟೈನ್​ನಲ್ಲಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + 20 =
Remember me
