ಬೆಂಗಳೂರು:ಅಂದುಕೊಂಡಂತೆ ನಡೆದಿದ್ದರೆ ನೂರಾರು ಜನರ ಸಮ್ಮುಖ ಈ ನಾಲ್ಕೂ ಜೋಡಿಗಳು ಭಾನುವಾರ ವಿಜೃಂಭಣೆಯಿಂದ ದಾಂಪತ್ಯಕ್ಕೆ ಪ್ರವೇಶಿಸಬೇಕಿತ್ತು. ಆದರೆ, ಈ ಅದ್ದೂರಿ ಮದುವೆಗಳಿಗೆ ಕರೊನಾ ಲಾಕ್​ಡೌನ್ ಬ್ರೇಕ್ ಹಾಕಿತು. ಧರ್ಮಸ್ಥಳದಲ್ಲಿ ಸಡಗರದಿಂದ ನಡೆಯಬೇಕಿದ್ದ ಹಾಸನ ಜಿಲ್ಲೆ ಆಲೂರು ತಾಲೂಕು ರಾಯನಕೊಪ್ಪಲಿನ ವಧು ಉಷಾ ಮತ್ತು ತಮಿಳುನಾಡಿನ ಕೊಯಮತ್ತೂರಿನ ಎತ್ತಪ್ಪನಗರದ ವರ ಅರವಿಂದ್ ವಿವಾಹ ರಾಜ್ಯದ ಗಡಿ ಭಾಗದ ಪುಣಜನೂರು ಗಣಪತಿ ದೇವಸ್ಥಾನದಲ್ಲಿ ಭಾನುವಾರ ಸರಳವಾಗಿ ನಡೆಯಿತು.
ತಮಿಳುನಾಡಿಗೆ ಹೊರಟ್ಟಿದ್ದ ವಧುವಿನ ಕಡೆಯವರಿಗೆ ಬಾಣಹಳ್ಳಿ ಚೆಕ್​ಪೋಸ್ಟ್​ನಲ್ಲಿ ತಡೆಯಾಗಿತ್ತು. ವಿಷಯ ತಿಳಿದ ನಮೋ ಬ್ರಿಗೇಡ್ ಸದಸ್ಯರು ಅಧಿಕಾರಿಗಳ ಮನವೊಲಿಸಿ ವಧು ಮತ್ತು ವರರನ್ನು ಗಡಿ ಗ್ರಾಮವಾದ ಪುಣಜನೂರಿನಲ್ಲಿ ಸೇರಿಸಿದರು. ಗಣಪತಿ ದೇವಸ್ಥಾನದಲ್ಲಿ ಮದುವೆ ಮಾಡಲು ಸಹಕರಿಸಿದರು. ನವ ದಂಪತಿಗೆ ಮಾತ್ರ ತಮಿಳುನಾಡಿಗೆ ತೆರಳಲು ಗಡಿಯಲ್ಲಿ ಅವಕಾಶ ಮಾಡಿಕೊಡಲಾಯಿತು.
ದಾವಣಗೆರೆ ಜಿಲ್ಲೆ ಚನ್ನಗಿರಿ ಪಟ್ಟಣದಲ್ಲಿ ಬಿ.ಪಿ.ಲಕ್ಷಿ್ಮಕಾಂತ ಹಾಗೂ ಎಂ.ಎಸ್.ದಿವ್ಯಾ ಅವರು ಎರಡೂ ಕುಟುಂಬಗಳ 10 ಸದಸ್ಯರ ಸಮಕ್ಷಮ ದಾಂಪತ್ಯಕ್ಕೆ ಅಡಿ ಇಟ್ಟರು. ಇಂಜಿನಿಯರ್​ಗಳಾದ ಪರಾಶರ್, ಸೋನಿಯಾ ಅವರು ಮೈಸೂರಿನ ಗೋಕುಲಂ ಗಣಪತಿ ದೇವಸ್ಥಾನದಲ್ಲಿ ಅತ್ಯಂತ ಸರಳವಾಗಿ ಮದುವೆಯಾದರು. ಕೇವಲ ಅರ್ಧ ಗಂಟೆಯಲ್ಲಿ ಮುಗಿದ ಮದುವೆಗೆ ಗಂಡಿನ ತಂದೆ, ತಾಯಿ ಹಾಗೂ ಹುಡುಗಿಯ ಅಮ್ಮ, ಅಣ್ಣ, ಅತ್ತಿಗೆ ಮಾತ್ರ ಸಾಕ್ಷಿಯಾದರು. ಗದಗ ಜಿಲ್ಲೆ ಲಕ್ಷೆ್ಮೕಶ್ವರ ತಾಲೂಕು ಶಿಗ್ಲಿ ಗ್ರಾಮದ ಶ್ರೀ ಗುರುಬಸಪ್ಪಜ್ಜ ನಗರದಲ್ಲಿ ಆನಂದ ಆತಡಕರ ಹಾಗೂ ರೂಪಾ ಭಾನುವಾರ ವಿವಾಹವಾದರು. ಭಾಗಿಯಾಗಿದ್ದ ಬೆರಳೆಣಿಕೆಯಷ್ಟು ಜನರಿಗೆ ಮಾಸ್ಕ್ ವಿತರಿಸಿ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿದರು.
ಸರ್ಕಾರ ಕೊಲ್ಲಲು ಬಯಸುತ್ತಿದೆ ಎಂದು ಗಲಾಟೆ ಮಾಡಿದ ಜಮಾತಿಗಳು ಕೊನೆಗೂ ಚಿಕಿತ್ಸೆ ಪಡೆಯಲು ಸಮ್ಮತಿಸಿದರು, ಹೇಗಾಯಿತು ಚಮತ್ಕಾರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − sixteen =
Remember me
