ಮೈಸೂರು:ಕರೊನಾವೈರಸ್ ಪರಿಸರದ ಮೇಲೆ ಕೆಲವು ಪೂರಕ-ಮಾರಕ ಪರಿಣಾಮಗಳನ್ನು ಬೀರಿದ್ದು, ಮನುಷ್ಯರ ಪ್ರವೇಶವಿಲ್ಲದೆ ವನ್ಯಜೀವಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವುದಂತೂ ನಿಜ. ಲಾಕ್​ಡೌನ್ ಸಮಯದಲ್ಲಿ ಅರಣ್ಯದಲ್ಲಿ ಮಾನವರ ಕಾಟವಿಲ್ಲದೆ ಬೆಂಕಿ ಅನಾಹುತ ತಗ್ಗಿದೆ. ಆದರೆ ಕಳ್ಳಬೇಟೆಯಿಂದ ಕಾಡಾನೆ-ಹಂದಿಗಳ ಸಾವಿನ ಸರಣಿ ಭೀತಿ ಹುಟ್ಟಿಸಿವೆ.
ಭದ್ರ ಅರಣ್ಯದ ಹಿನ್ನೀರು ಪ್ರದೇಶದಲ್ಲಿ 19 ದಿನಗಳಲ್ಲಿ 13ಕ್ಕೂ ಹೆಚ್ಚು ಕಾಡು ಹಂದಿಗಳು, ಒಂದು ಕಾಡುಕೋಣ ಮೃತಪಟ್ಟಿದೆ. ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮದಲ್ಲಿ 15-20 ದಿನಗಳಲ್ಲಿ 7 ಆನೆಗಳು ಮೃತಪಟ್ಟಿರುವುದರಿಂದ ಅರಣ್ಯ ಇಲಾಖೆಗೆ ತಲೆನೋವಾಗಿದೆ. ಕೆಲವು ಆನೆಗಳು ಆಹಾರ-ನೀರು ಹುಡುಕಾಡುವ ಸಂದರ್ಭ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬೇಟೆಗಾರರ ಪತ್ತೆಗೆ ಡ್ರೋಣ್ ಕ್ಯಾಮರಾ ಬಳಸಲಾಗುತ್ತಿದೆ.
ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್​ನಲ್ಲಿ ಬಂಡೀಪುರ, ನಾಗರಹೊಳೆ, ಬಿಆರ್​ಟಿ ಅರಣ್ಯಗಳಲ್ಲಿ ಬೆಂಕಿಯ ಭಯ ಕಾಡುತ್ತದೆ. ಲಾಕ್​ಡೌನ್ ಅವಧಿಯಲ್ಲಿ ಹೆಚ್ಚಿನ ಜನರ ಪ್ರವೇಶವಿಲ್ಲದ್ದರಿಂದ ಬೆಂಕಿ ಅನಾಹುತ ನಡೆದಿಲ್ಲ. ಜತೆಗೆ ಇತ್ತೀಚೆಗೆ ಮಳೆ ಬಿದ್ದ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳು ನಳನಳಿಸುತ್ತಿವೆ. ಹುಲಿ ಉಪಟಳ
ನಾಗರಹೊಳೆ ಕಾಡಂಚಿನ ಶ್ರೀಮಂಗಲ ಭಾಗದಲ್ಲಿ ಹುಲಿ ಉಪ ಟಳ ಹೆಚ್ಚಾಗಿದ್ದು, ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಬಂಡೀಪುರದ ಕಾಡಂಚಿನ ಕುಂದಕೆರೆ ವಲಯದಲ್ಲೂ ಹುಲಿಯೊಂದು ಜಾನುವಾರುಗಳನ್ನು ತಿಂದಿದ್ದು, ಅದರ ಸೆರೆಗೆ ಕೂಬಿಂಗ್ ನಡೆಸಲಾಗುತ್ತಿದೆ. ಅರಣ್ಯ ಸಿಬ್ಬಂದಿ ಒಬ್ಬರಿಗೊಬ್ಬರು ವ್ಯಕ್ತಿಗತ ಅಂತರ ಕಾಯ್ದುಕೊಂಡು ಕೆಲಸ ಮಾಡುವುದು ಸವಾಲಾಗಿದ್ದು, ಪ್ರಸ್ತುತ ರಜೆ ಹಾಕದೆ ಹೆಚ್ಚಿನ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ನಮ್ಮನ್ನೂ ಕರೊನಾ ವಾರಿಯರ್ಸ್​ನಂತೆ ಗ್ರೀನ್ ವಾರಿಯರ್ಸ್ ಎಂದು ಗುರುತಿಸಬೇಕು ಎಂಬುದು ಅರಣ್ಯ ಸಿಬ್ಬಂದಿ ಮನವಿ.
ಟಾಸ್ಕ್​ಫೋರ್ಸ್ ರಚನೆ:ವಿದೇಶದಲ್ಲಿ ಪ್ರಾಣಿಗಳಲ್ಲೂ ಕರೊನಾ ಕಾಣಿಸಿದ್ದರಿಂದ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅದರಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಣ ಸೂರು ಉಪವಿಭಾಗದ ಎಸಿಎಫ್ ನೇತೃತ್ವದಲ್ಲಿ ಟಾಸ್ಕ್​ಫೋರ್ಸ್ ರಚಿಸಲಾಗಿದೆ. ಬಂಡೀಪುರದ ರಾಂಪುರ, ನಾಗರಹೊಳೆಯ ಮತ್ತಿಗೋಡು, ದೊಡ್ಡಹರವೆ ಮತ್ತು ಬಳ್ಳೆ ಆನೆ ಶಿಬಿರಗಳಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗಿದೆ. ನಾಗರಹೊಳೆ ವ್ಯಾಪ್ತಿಯಲ್ಲಿ ಯಾವುದೇ ಪ್ರಾಣಿಗಳ ಮೇಲೆ ಚಲನವಲನದ ಮೇಲೆ ನಿಗಾ ಇಡಲು ಕ್ಯಾಮರಾ ಟ್ರ್ಯಾಪ್ ವಿಡಿಯೋ ಮೋಡ್​ನಲ್ಲಿ ಇಡಲಾಗಿದೆ.
ಸದ್ಯ ಸಫಾರಿ ಬೇಡ:ಪ್ರಾಣಿಗಳಿಗೆ ಕರೊನಾ ಸೋಂಕು ಹರಡಿದರೆ ನಿಯಂತ್ರಣ ಅಸಾಧ್ಯ. ಆದ್ದರಿಂದ ಲಾಕ್​ಡೌನ್ ತೆರವುಗೊಳಿಸಿದ ತಕ್ಷಣ ಸಫಾರಿಯಂಥ ಪ್ರಕ್ರಿಯೆಗಳನ್ನು ನಡೆಸಬಾರದು. ಕರೊನಾ ಪೂರ್ಣ ಪ್ರಮಾಣದಲ್ಲಿ ತೊಲಗಿದ ಒಂದು ತಿಂಗಳ ನಂತರ ಪ್ರಾರಂಭಿಸುವುದು ಒಳ್ಳೆಯದು ಎಂಬುದು ಪರಿಸರಪ್ರಿಯರ ಒತ್ತಾಯ.
| ಗುರುಪ್ರಸಾದ್ ತುಂಬಸೋಗೆ

ಉದ್ಯಾನವನದೊಳಗೆ ಕರೊನಾ ಪ್ರವೇಶಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೂಕ್ಷ್ಮಮತಿಗಳಾಗಿರುವ ವನ್ಯಜೀವಿಗಳ ಸಹಜ ಜೀವನಕ್ಕೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿ ಸಾವಯವ ಔಷಧ ಸಿಂಪಡಿಸಲಾಗಿದೆ. ಕಳ್ಳಬೇಟೆ ತಡೆ ಶಿಬಿರದಲ್ಲಿರುವ ಎಲ್ಲ ಅರಣ್ಯ ಸಿಬ್ಬಂದಿಗೂ ಅಗತ್ಯ ಆಹಾರ ಪದಾರ್ಥ ಒದಗಿಸಲಾಗಿದೆ. ಮಾಸ್ಕ್-ಸ್ಯಾನಿಟೈಸರ್ ಕೂಡ ನೀಡಲಾಗಿದೆ.| ಮಹೇಶ್​ಕುಮಾರ್ ಡಿಸಿಎಫ್ ನಾಗರಹೊಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
