ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ದಿನೇದಿನೆ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಕಳೆದ ಮೂರುನಾಲ್ಕು ದಿನಗಳಿಂದ 100ಕ್ಕೂ ಹೆಚ್ಚು ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 10,000ದ ಗಡಿ ದಾಟಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಈಗ ಬೆಂಗಳೂರಿನಲ್ಲಿ ಮತ್ತೆ ಲಾಕ್​ಡೌನ್ ಚಾಲ್ತಿಗೆ ಬರಲಿದೆ ಎಂಬ ಮಾತು ವ್ಯಾಪಕವಾಗಿ ಕೇಳತೊಡಗಿದೆ. ಆದ್ದರಿಂದ ನಾಳೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯ ಕಡೆಗೆ ಎಲ್ಲರ ದೃಷ್ಟಿಯೂ ನೆಟ್ಟಿದೆ.
ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಮತ್ತೊಂದು ಲಾಕ್​ಡೌನ್ ಘೋಷಣೆಯಾದರೆ ಅಚ್ಚರಿ ಇಲ್ಲ. ಈ ವಿಚಾರವಾಗಿ ಕೆಲವು ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚಾಗಿ ಪ್ರತಿಧ್ವನಿಸುತ್ತಿರುವ ಲಾಕ್​ಡೌನ್ ವಿಚಾರವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಅಂಗೀಕರಿಸಿದ್ದು, ಪ್ರತಿನಿತ್ಯದ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಅವಲೋಕಿಸುತ್ತಿದ್ದಾರೆ. ಮಾಧ್ಯಮಗಳೂ ಸಾರ್ವಜನಿಕ ಭಾವನೆಗಳನ್ನು ಸರ್ಕಾರಕ್ಕೆ ಅರ್ಥಮಾಡಿಸುವ ಪ್ರಯತ್ನ ಮಾಡುತ್ತಿವೆ. ಲಾಕ್​ಡೌನ್​ ವಿಚಾರ ಬೇಕೋ ಬೇಡವೋ ಎಂಬುದನ್ನು ಈಗಲೇ ಹೇಳಲಾಗದು. ಸೋಂಕು ಹರಡುವುದನ್ನು ತಡೆಯುವುದರ ಜತೆಗೆ ನಮ್ಮ ಆರ್ಥಿಕ ಚಟುವಟಿಕೆಗಳು, ಸರ್ಕಾರದ ಹಣಕಾಸಿನ ಸ್ಥಿತಿಯ ಕಡೆಗೂ ಗಮನಹರಿಸುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:VIDEO: ಮಿಸ್ಟರ್ ಬೀನ್ ನೆರವು ಕೋರಿತು ಡಬ್ಲ್ಯುಎಚ್​ಒ
ಲಾಕ್​ಡೌನ್​ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಈ ವಿಚಾರ ಪರಿಣತರ ಸಮಿತಿಯ ಅವಲೋಕನದಲ್ಲಿದೆ. ನಾವು ಮುಖ್ಯಮಂತ್ರಿಯವರ ಜತೆಗೆ ಈ ಬಗ್ಗೆ ಚರ್ಚಿಸುತ್ತೇವೆ. ನಂತರ ಕೇಂದ್ರ ಸರ್ಕಾರದ ಜತೆಗೆ ಸಮಾಲೋಚನೆ ನಡೆಸುತ್ತೇವೆ. ಬೆಂಗಳೂರಿನಲ್ಲಿ ಹೆಚ್ಚಿನ ಕೇಸ್​ಗಳಿವೆ. ಇದಕ್ಕೆ ಹೊರಗಿನಿಂದ ಬಂದವರ ಸಂಖ್ಯೆ ಹೆಚ್ಚಿರುವುದೇ ಕಾರಣ. ಈಗಾಗಲೇ ಕೆಲವು ಪ್ರದೇಶಗಳನ್ನು ನಾವು ಸೀಲ್​ಡೌನ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಮಾರ್ಚ್ 24ರಂದು ಲಾಕ್​ಡೌನ್ ಘೋಷಣೆ ಮಾಡಿದ ಬಳಿಕ, ಜೂನ್ 1ರಿಂದ ಅನ್​ಲಾಕ್ 1 ಚಾಲ್ತಿಯಲ್ಲಿದೆ. ಈ ಅವಧಿಯಲ್ಲೇ ಈಗ ಕೇಸ್​ಗಳು ಹೆಚ್ಚಾಗಿದ್ದು, ಪರಿಸ್ಥಿತಿ ಜನರಲ್ಲಿ ಕಳವಳವನ್ನು ಉಂಟುಮಾಡಿದೆ. (ಏಜೆನ್ಸೀಸ್)
ಹೀಗೆ ಮಾಡಿದ್ರೆ ಕರೊನಾ ಹರಡೋದು ಗ್ಯಾರೆಂಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
