ಬೆಂಗಳೂರು:ಕಠಿಣ ನಿಯಮಗಳೊಂದಿಗೆ ಹಂತಹಂತವಾಗಿ ಲಾಕ್​ಡೌನ್ ಸಡಿಲಿಕೆ, ಆಸಕ್ತ ಖಾಸಗಿ ಆಸ್ಪತ್ರೆಗಳಿಗೂ ಕರೊನಾ ಸೋಂಕು ತಪಾಸಣೆಗೆ ಅನುಮತಿ ನಿಡಿಕೆ ಸೇರಿ ಹಲವು ಸಲಹೆಗಳನ್ನು ಸರ್ಕಾರಕ್ಕೆ ವೈದ್ಯ ವೃಂದ ನೀಡಿದೆ.
ಸೋಂಕು ತಡೆ ನಿರ್ವಹಣೆ ಪ್ರಯತ್ನವಾಗಿ ವೈದ್ಯ ವೃಂದದೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಸೋಮವಾರ ವಿಡಿಯೋ ಮೂಲಕ ಚಿಂತನಾ ಸಭೆ ನಡೆಸಿದರು. ಹಸಿರು, ಕಿತ್ತಳೆ ಹಾಗೂ ಕೆಂಪು ವಲಯಗಳಲ್ಲಿ ಹಂತಹಂತವಾಗಿ ಲಾಕ್​ಡೌನ್ ಸಡಿಲಿಸುವ ವಿಧಾನ ಅನುಸರಿಸಬೇಕು. ಸರ್ಕಾರದ ನಿಯಮಾವಳಿ ಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಮಾಸ್ಕ್ ಧರಿಸದೇ ಸಂಚರಿಸುವುದು ಶಿಕ್ಷಾರ್ಹವಾಗಬೇಕು. 60ರ ವಯೋಮಿತಿ ದಾಟಿದವರು ಹಾಗೂ ಆರೋಗ್ಯದ ಸಮಸ್ಯೆ ಇರುವವರು ಮನೆಯಲ್ಲೇ ಇರಬೇಕು. ಮನೆಯಲ್ಲಿಯೂ ಹೊರಗೆ ಸಂಚರಿಸುವವರ ಜತೆಗೆ ಅಂತರ ಕಾಯ್ದುಕೊಳ್ಳಬೇಕು ಎಂದು ವೈದ್ಯರ ವೃಂದ ಸಲಹೆ ನೀಡಿದೆ. ಬಿಜೆಪಿ ವೈದ್ಯಕೀಯ ಪ್ರಕೋಷ್ಠ, ರಾಜ್ಯ ಸಂಚಾಲಕ ಡಾ.ಬಸವರಾಜ ಕೆಂಕೆರೆ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 15 =
Remember me
