ಉಡುಪಿ:ಕರೊನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದರೂ ಅನೇಕ ಜನರು ಅದನ್ನು ಪಾಲಿಸುತ್ತಿಲ್ಲ. ಕರೊನಾ ಭಯಕ್ಕಿಂತ, ತರಕಾರಿ, ಹಾಲು, ರೇಷನ್​​ ಕೊಳ್ಳಲು ಇರುವ ಧಾವಂತವೇ ಹೆಚ್ಚಾಗಿಬಿಟ್ಟಿದೆ.
ಕರೊನಾ ವೈರಸ್​ ಪ್ರಸರಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ತರಕಾರಿ ಮಾರ್ಕೆಟ್​ನ್ನು ನಗರದ ಹೊರವಲಯಕ್ಕೆ ಸ್ಥಳಾಂತರ ಮಾಡಿದೆ. ಅಲ್ಲದೆ, ವಲಸೆ ಕಾರ್ಮಿಕ ಮಹಿಳೆಯರಿಗೆ ಉಚಿತವಾಗಿ ನೀಡುವುದಾಗಿ ಹೇಳಿದ್ದು, ಸಾಮಾಜಿಕ ಅಂತರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಡಳಿತ ಸೂಚಿಸಿದೆ.
ಆದರೆ ನಗರದ ಹೊರವಲಯದಲ್ಲಿ ಇರುವ ಬೀಡಿನಗುಡ್ಡೆ ಮಹಾತ್ಮಾ ಗಾಂಧಿ ಮೈದಾನದಲ್ಲಿ ಇರುವ ತರಕಾರಿ ಮಾರ್ಕೆಟ್​ ವಲಸೆ ಕಾರ್ಮಿಕ ಮಹಿಳೆಯರು ಉಚಿತ ತರಕಾರಿಗಾಗಿ ಮುಗಿಬೀಳುತ್ತಿದ್ದಾರೆ. ಸಾಮಾಜಿಕ ಅಂತರವೂ ಇಲ್ಲ, ಏನೂ ಇಲ್ಲ. ಇವರು ಪೊಲೀಸರ ಮಾತಿಗೂ ಬೆಲೆ ಕೊಡ್ತಿಲ್ಲ. ಸೇನಾ ಕಾರ್ಯಕರ್ತರ ಮಾತನ್ನೂ ಕೇಳ್ತಿಲ್ಲ.. ಎಲ್ಲರೂ ಸಮಾಧಾನದಿಂದ ಇರಿ. ಪ್ರತಿಯೊಬ್ಬರಿಗೂ ತರಕಾರಿ ಸಿಗುತ್ತದೆ ಎಂದು ಸಾರಿಸಾರಿ ಹೇಳುತ್ತಿದ್ದರೂ ಅವರು ಕೇಳುತ್ತಿಲ್ಲ.
ಚೀಲದಲ್ಲಿ ತುಂಬಿಕೊಂಡು, ಸ್ಥಳದಲ್ಲಿ ಒಂದಷ್ಟು ತರಕಾರಿಗಳನ್ನು ಚೆಲ್ಲುತ್ತ, ಬೇಕಾಬಿಟ್ಟಿ ಎತ್ತಿಕೊಂಡು ಹೋಗುತ್ತಿದ್ದಾರೆ. ಒಂದೇ ಬಾರಿ ಗುಂಪುಗುಡೂತ್ತಿರುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
https://www.instagram.com/p/B_B5sZInQ4W/
ಜೂನ್​ ಮೊದಲ ವಾರದಲ್ಲೇ ಕಾಲಿಡಲಿದೆ ಮುಂಗಾರು…ವಾಡಿಕೆ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fifteen =
Remember me
