ದಾವಣಗೆರೆ:ಮಾಯಕೊಂಡ ಪೊಲೀಸರು ವಶಕ್ಕೆ ಪಡೆದ ಬಳಿಕ ಅನುಮಾನಾಸ್ಪವಾಗಿ ಮೃತಪಟ್ಟಿದ್ದ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪ ಎಂಬಾತನ ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ತನಿಖೆ ಆರಂಭಗೊಂಡಿದೆ.
ಲಾಕಪ್ ಡೆತ್ ಆರೋಪ ಕೇಳಿಬಂದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್​ಐ ಪ್ರಕಾಶ್, ಹೆಡ್ ಕಾನ್​ಸ್ಟೆಬಲ್ ನಾಗರಾಜ್ ಮತ್ತು ಕಾನ್​ಸ್ಟೆಬಲ್ ಶೇರ್ ಬಂಧಿಸಲಾಗಿತ್ತು. ಬುಧವಾರ ಠಾಣೆಯ ಮತ್ತೊಬ್ಬ ಸಿಬ್ಬಂದಿ ರಂಗಸ್ವಾಮಿಯನ್ನು ಅಮಾನತುಗೊಳಿಸಲಾಗಿದೆ. ಬುಧವಾರ ಬೆಳಗ್ಗೆ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ, ಜೆಎಂಎಫ್​ಸಿ 3ನೇ ನ್ಯಾಯಾಲಯದ ನ್ಯಾಯಾಧೀಶೆ ನಂದಿನಿ ಸಮಕ್ಷಮದಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇದೇ ವೇಳೆ ಮೃತನ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ 4.12 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಜಿಲ್ಲಾಧಿಕಾರಿ ವಿತರಿಸಿ ದರು. ನಂತರ ವಿಠಲಾಪುರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಬೆಳಗ್ಗೆ ಮಾಯಕೊಂಡದಲ್ಲಿ ಮೃತನ ಸಂಬಂಧಿಕರು ನ್ಯಾಯ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು.
ಪ್ರಕರಣ ಹಿನ್ನೆಲೆ:ಮರುಳಸಿದ್ದಪ್ಪನ ಒಬ್ಬ ಪುತ್ರ ಇತ್ತೀಚೆಗೆ ತೀರಿಕೊಂಡಿದ್ದಾನೆ. ಪುತ್ರಿಗೆ ಮದುವೆಯಾಗಿದೆ. ಗಂಡು ಸಂತಾನ ಬೇಕೆಂಬ ಕಾರಣಕ್ಕೆ ಮರುಳಸಿದ್ದಪ್ಪ ಕೆಲ ದಿನಗಳ ಹಿಂದೆ ಇನ್ನೊಂದು ವಿವಾಹವಾಗಿದ್ದ ಎನ್ನಲಾಗಿದೆ. ಈ ನಡುವೆ ತನ್ನ ಪತಿ ನಾಪತ್ತೆಯಾಗಿದ್ದು, ಹುಡುಕಿಕೊಡಿ. ಆತ ಇನ್ನೊಂದು ಮದುವೆ ಯಾಗುವುದನ್ನು ತಡೆಯಿರಿ ಎಂದು ಪೊಲೀಸರಿಗೆ ಪತ್ನಿ ವೃಂದಮ್ಮ ದೂರು ನೀಡಿದ್ದರು.
ಅನುಮಾನದ ಹುತ್ತ:ಮರುಳಸಿದ್ದಪ್ಪನ ಸಾವಿನ ಕಾರಣ ನಿಗೂಢವಾಗಿರುವಂತೆಯೇ ಸಿಐಡಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಶುರುವಾಗಿದೆ. ವೃಂದಮ್ಮ ನೀಡಿದ ದೂರು ಆಧರಿಸಿ ಪೊಲೀಸರು ಮರುಳಸಿದ್ದಪ್ಪನನ್ನು ಸೋಮವಾರ ಠಾಣೆಗೆ ಕರೆತಂದಿದ್ದರು. ಅಂದು ರಾತ್ರಿ ಠಾಣೆಗೆ ಹೋಗಿದ್ದ ಸಂಬಂಧಿಕರು ಆತನನ್ನು ಕಳಿಸುವಂತೆ ಕೇಳಿಕೊಂಡಿದ್ದರು, ಆದರೆ ಪೊಲೀಸರು ಕಳಿಸಿರಲಿಲ್ಲ. ಮರುಳಸಿದ್ದಪ್ಪನನ್ನು ಠಾಣೆಯಲ್ಲೇ ಉಳಿಸಿಕೊಳ್ಳುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಜನರಿಂದ ಕೇಳಿಬಂದಿದೆ. ಮಂಗಳವಾರ ಬೆಳಗ್ಗೆ ಹೊತ್ತಿಗೆ ಆತನ ಮೃತದೇಹ ಗ್ರಾಮದ ಉಗ್ರಾಣ ನಿಗಮದ ಬಳಿಯ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಹೇಗೆ ಎಂಬುದು ನಿಗೂಢವಾಗಿದೆ. ಆತನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ರಾತ್ರಿಯೇ ಠಾಣೆಯಿಂದ ಕಳಿಸಿಕೊಡಲಾಯಿತೆಂಬ ಮಾತೂ ಕೇಳಿಬಂದಿದೆ. ಹಾಗೊಂದು ವೇಳೆ ಆರೋಗ್ಯ ಸಮಸ್ಯೆ ಆಗಿದ್ದರೆ ಆಸ್ಪತ್ರೆಗೆ ಸೇರಿಸಬೇಕಿತ್ತು, ಇಲ್ಲವೇ ಸಂಬಂಧಿಕರಿಗೆ ತಿಳಿಸಬೇಕಿತ್ತು. ಆದರೆ ಪೊಲೀಸರು ಹಾಗೆ ಮಾಡದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − twelve =
Remember me
