ಬೆಂಗಳೂರು:ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಬೆಳೆಗಳನ್ನು ನಾಶ ಮಾಡಿದ ಮಿಡತೆಗಳ ಹಿಂಡು ಈಗ ಮಹಾರಾಷ್ಟ್ರದತ್ತ ನುಗ್ಗಿದ್ದು, ಸದ್ಯದಲ್ಲೇ ಕರ್ನಾಟಕಕ್ಕೂ ಕಾಲಿಡುವ ಸಾಧ್ಯತೆ ಬಲವಾಗಿದೆ.
ಇದನ್ನೂ ಓದಿ:ಇನ್​ಸ್ಟಾಗ್ರಾಂನಲ್ಲಿ ಕೊನೆಯ ಸಂದೇಶ ಬರೆದು ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಯುವನಟಿ
ಈಗಾಗಲೇ ಮಹಾರಾಷ್ಟ್ರದ ವಿದರ್ಭಕ್ಕೆ ದಾಳಿ ಇಟ್ಟಿರುವ ಲಕ್ಷಾಂತರ ಮಿಡತೆಗಳು ಮಹಾರಾಷ್ಟ್ರದ ಸಮೀಪದಲ್ಲಿರುವ ಕರ್ನಾಟಕದ ಜಿಲ್ಲೆಗಳಿಗೂ ವ್ಯಾಪಿಸುವ ಅಪಾಯದ ಕುರಿತು ಕೃಷಿ ತಜ್ಞರು ಎಚ್ಚರಿಸಿದ್ದಾರೆ.
ಇವು ಕರ್ನಾಟಕವನ್ನು ಪ್ರವೇಶಿಸಬಾರದೆಂದಿದ್ದರೆ ಇವುಗಳನ್ನು ಮಹಾರಾಷ್ಟ್ರದಲ್ಲೇ ಅಲ್ಲಿನ ಸರ್ಕಾರ ಸಮರ್ಥವಾಗಿ ನಿಯಂತ್ರಿಸಬೇಕು. ಇಲ್ಲದಿದ್ದರೆ ಕರ್ನಾಟಕದ ರೈತರಿಗೂ ಆತಂಕ ತಪ್ಪಿದ್ದಲ್ಲ.
ಇದನ್ನೂ ಓದಿ:ಅನ್ನ, ನೀರಿಲ್ಲದೇ ಸುಮಾರು 76 ವರ್ಷ ಬದುಕಿದ್ದ ನಿಗೂಢ ಯೋಗಿ ನಿಧನ
ಮೂಲತಃ ಪಾಕಿಸ್ತಾನದಿಂದ ರಾಜಸ್ಥಾನಕ್ಕೆ ಬಂದಿರುವ ಈ ಲಕ್ಷಾಂತರ ಮಿಡತೆಗಳು, ಈಗಾಗಲೇ ಹಲವಾರು ಹಳ್ಳಿಗಳಲ್ಲಿ ಬೆಳೆದು ನಿಂತಿದ್ದ ಬೆಳೆಯನ್ನು ನಾಶಪಡಿಸಿವೆ. ಅಲ್ಲಿಂದ ಆಂಧ್ರದ ಅಮರಾವತಿ ಮೂಲಕ ಮಹಾರಾಷ್ಟ್ರವನ್ನು ಪ್ರವೇಶಿಸಿವೆ. ಇಲ್ಲೆಲ್ಲ ಇವುಗಳ ನಿಯಂತ್ರಣಕ್ಕೆ ರಾಸಾಯನಿಕಗಳನ್ನು ಸಿಂಪಡಿಸಿದರೂ ಪ್ರಯೋಜನವಾಗಿಲ್ಲ.
ಪಾಕಿಸ್ತಾನಕ್ಕೆ ಸಮೀಪದಲ್ಲಿರುವ ಪಂಜಾಬ್ ಮತ್ತು ಅದಕ್ಕೆ ಹೊಂದಿಕೊಂಡಿರುವ ಹರಿಯಾಣದಲ್ಲೂ ಮಿಡತೆಗಳು ಹಾವಳಿ ಎಬ್ಬಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಭಾರಿ ಮಳೆಯಿಂದಾಗಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಬಿದ್ದ ಮರ: ಸ್ಥಳದಲ್ಲೇ ಮಹಿಳೆ ಸಾವು
ಬೆಂಗಳೂರಿನಲ್ಲಿ ಭಾರಿ ಮಳೆಗೆ ಇಬ್ಬರು ಮಹಿಳೆಯರು ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
