ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ. ಎರಡೂ ಪಕ್ಷದಲ್ಲಿ ಟಿಕೆಟ್​ಗಾಗಿ ಆಕಾಂಕ್ಷಿಗಳ ನಡುವೆಯೇ ಪೈಪೋಟಿ ಹೆಚ್ಚಿದೆ. ಮೈತ್ರಿ ಸೂತ್ರದಂತೆ ಕಮಲ ಅಭ್ಯರ್ಥಿ ಪರ ನಿಲ್ಲಲು ಜೆಡಿಎಸ್ ಮುಂದಾಗಿದೆ ಎನ್ನಲಾಗಿದೆ. ಬೆಂಗಳೂರಿನ ರಾಜಕೀಯ ಪ್ರಭಾವವಿರುವ ಕ್ಷೇತ್ರದಲ್ಲಿ ಮತದಾರ ಯಾರ ಪರ ನಿಲ್ಲುವನು ಎಂಬುದೇ ಯಕ್ಷ ಪ್ರಶ್ನೆ.
| ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ಅನೇಕ ಘಟಾನುಘಟಿ ನಾಯಕರ ಸ್ಪರ್ಧೆಯಿಂದ ರಾಜಕೀಯವಾಗಿ ಗಮನ ಸೆಳೆದಿದೆ. 1977ರಲ್ಲಿ ಕ್ಷೇತ್ರವಾರು ಮರು ವಿಂಗಡಣೆಯಿಂದ ಪ್ರತ್ಯೇಕ ಲೋಕಸಭಾ ಕ್ಷೇತ್ರವು ಅಸ್ತಿತ್ವಕ್ಕೆ ಬಂದಿದ್ದು, ಇಲ್ಲಿಯವರೆಗೂ ನಡೆದ 12 ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್, ಜನತಾದಳ ಮತ್ತು ಬಿಜೆಪಿ ತಲಾ 1 ಬಾರಿ ಕ್ಷೇತ್ರ ಗೆದ್ದುಕೊಂಡಿದೆ. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿಯ ಲಕ್ಷಣಗಳು ಗೋಚರವಾಗುತ್ತಿವೆ. ಸೀಟು ಹಂಚಿಕೆಯ ಒಪ್ಪಂದದಂತೆ ಕಮಲ ಅಭ್ಯರ್ಥಿ ಪರ ನಿಲ್ಲಲು ಜೆಡಿಎಸ್ ಮುಂದಾಗಿದೆ ಎನ್ನಲಾಗಿದೆ. ಪ್ರಸ್ತುತ ಕೈ ಪಾಳಯದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲಿ ಮಾಜಿ ಸಚಿವ ಡಾ. ಕೆ.ಸುಧಾಕರ್, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಅಭ್ಯರ್ಥಿಯಾಗಲು ಕಸರತ್ತು ನಡೆಸುತ್ತಿದ್ದಾರೆ.
ಬೆಂಗಳೂರು ಮತ್ತು ಆಂಧ್ರದ ಗಡಿಭಾಗದಲ್ಲಿರುವ ಕ್ಷೇತ್ರ ವ್ಯಾಪ್ತಿಗೆ ಬೆಂಗಳೂರು ನಗರ ಜಿಲ್ಲೆಯ 1 (ಯಲಹಂಕ), ಚಿಕ್ಕಬಳ್ಳಾಪುರ ಜಿಲ್ಲೆಯ 3 (ಬಾಗೇಪಲ್ಲಿ, ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ) ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 (ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ) ವಿಧಾನಸಭಾ ಕ್ಷೇತ್ರಗಳು ಸೇರುತ್ತವೆ.
ನಿವೃತ್ತಿ ಘೊಷಿಸಿದ ಸಂಸದರು:2019ರ ಲೋಕಸಭಾ ಚುನಾವಣೆಗೆ ಉಮೇದುವಾರಿಕೆ ಸಲ್ಲಿಕೆಯ ಸಂದರ್ಭದಲ್ಲಿ ದೇಶ ಮತ್ತು ಪಾರ್ಟಿ ಮುಖ್ಯ, ಆ ಮೇಲೆಏನಿದ್ದರೂ ಕುಟುಂಬ ಎಂದು ಹೇಳಿದ್ದ ಸಂಸದ ಬಿ.ಎನ್.ಬಚ್ಚೇಗೌಡ ಸದ್ಯ ಚುನಾವಣಾ ನಿವೃತ್ತಿ ಘೊಷಿಸಿದ್ದಾರೆ. ಮಗನ (ಹೊಸಕೋಟೆ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ) ಭವಿಷ್ಯದ ದೃಷ್ಟಿಯಿಂದ ಹಲವು ಬಾರಿ ಸ್ವಪಕ್ಷೀಯರನ್ನು ಪರೋಕ್ಷವಾಗಿ ಟೀಕಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಸಮರ್ಥಿಸಿಕೊಂಡಿದ್ದಾರೆ.
ಗೆಲುವಿನ ಸೂತ್ರಗಳು:ಕ್ಷೇತ್ರದ ಪೈಕಿ ಹೆಚ್ಚಿನ ವೋಟ್ ಬ್ಯಾಂಕ್ ಹೊಂದಿರುವ ಯಲಹಂಕ ಮತ್ತು ದೊಡ್ಡಬಳ್ಳಾಪುರದಲ್ಲಿ ದೊಡ್ಡ ಲೀಡ್ ಪಡೆದು, ಇತರ ಕ್ಷೇತ್ರಗಳಲ್ಲಿ ಸಮಾನಾಂತರ ಪೈಪೋಟಿ ನೀಡಿದರೂ ಬಿಜೆಪಿಗೆ ಗೆಲುವು ಸಿಗುತ್ತದೆ. ಇನ್ನು ಸ್ವಪಕ್ಷೀಯ ಶಾಸಕರನ್ನು ಹೊಂದಿರುವ 5 ಕ್ಷೇತ್ರಗಳು ಮತ್ತು ಪಕ್ಷೇತರ ಶಾಸಕರ ಬೆಂಬಲದ 1 ಕ್ಷೇತ್ರದಲ್ಲಿ ಉತ್ತಮ ಲೀಡ್ ಪಡೆದರೆ ಕೈ ಜಯ ಸಾಧಿಸಬಹುದು.
ಅಚ್ಚರಿ ನಿರ್ಧಾರ ಸಾಧ್ಯತೆಆಕಾಂಕ್ಷಿಗಳ ಬಲಾಬಲ, ಜನಾಭಿಪ್ರಾಯ, ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳಿಗೆ ಸಂಬಂಧಿಸಿದಂತೆ ಕೈ, ಕಮಲ ವರಿಷ್ಠರು ಕ್ಷೇತ್ರವಾರು ಸರ್ವೆ ನಡೆಸಿದ್ದಾರೆ. ಗೆಲುವಿಗೆ ಪೂರಕವಾದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯೂ ಇದೆ. ಬಿಜೆಪಿ ಇಲ್ಲಿ ನೆಲೆಯೂರಲು ಕಾರಣವಾದ ಮಾಜಿ ಸಚಿವ ಡಾ. ಸುಧಾಕರ್ ಅವರಿಗೆ ಅವಕಾಶ ನೀಡಿದರೆ ಕೋಲಾರ-ಚಿಕ್ಕಬಳ್ಳಾಪುರ ಎರಡೂ ಕ್ಷೇತ್ರಗಳಿಗೆ ಅನುಕೂಲವಾಗುವ ಪ್ರಬಲ ವಾದವಿದೆ. ಆತುರ ಪಟ್ಟು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತರಾದವರಿಗೆ ಮಣೆ ಹಾಕಿದರೆ ಎರಡೂ ಕ್ಷೇತ್ರ ಕಾಂಗ್ರೆಸ್​ಗೆ ಸುಲಭ ತುತ್ತಾಗುವ ಆತಂಕ ಕಮಲ ಪಾಳಯದಲ್ಲಿರುವುದರಿಂದ ಎಚ್ಚರಿಕೆಯ ಹೆಜ್ಜೆ ನಿರೀಕ್ಷಿಸಬಹುದಾಗಿದೆ.
ಸದನದಲ್ಲಿ ಹಾಜರಾತಿಸಂಸದ ಬಿ.ಎನ್.ಬಚ್ಚೇಗೌಡ ಕಲಾಪದಲ್ಲಿ ಶೇ.38 ಹಾಜರಾತಿ ಹೊಂದಿದ್ದಾರೆ. ಒಂದು ಚರ್ಚೆಯಲ್ಲಿ ಮಾತ್ರ ಭಾಗವಹಿಸಿದ್ದು, ಲಿಖಿತವಾಗಿ 32 ಪ್ರಶ್ನೆ ಕೇಳಿದ್ದಾರೆ.
ಮತ ಲೆಕ್ಕಾಚಾರಕಾಂಗ್ರೆಸ್​ಭದ್ರಕೋಟೆ ಎನಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 2019ರಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ಬರೆಯಿತು. ಬಿ.ಎನ್.ಬಚ್ಚೇಗೌಡ (7,45,912) ಮತಗಳೊಂದಿಗೆ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದ ‘ಕೈ’ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ (5,63,802 ಮತಗಳು) ವಿರುದ್ಧ ಬರೋಬ್ಬರಿ 1,82,110 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಪ್ರಭಾವ ಬೀರುವ ಅಂಶಗಳುಬಿಜೆಪಿಗೆ ಸ್ಥಳೀಯ ಸಂಸದರ ಕೊಡುಗೆಗಳಿಗಿಂತಲೂ ಮೋದಿ ಅಲೆಯೇ ದೊಡ್ಡ ಬಲ. ಅಯೋಧ್ಯೆಯಲ್ಲಿ ರಾಮ ದೇಗುಲ ನಿರ್ವಣ, ಪ್ರಧಾನಿ ಪ್ರಬಲ ನಾಯಕತ್ವಕ್ಕೆ ಬೆಂಬಲ ನೀಡಬೇಕೆಂಬ ಭಾವನೆ, ಮೈತ್ರಿ ಘೊಷಣೆ ಜತೆಗೆ ಬಿಜೆಪಿ ಅವಧಿಯಲ್ಲಿ ಡಾ. ಸುಧಾಕರ್ ನೂರಾರು ಕೋಟಿಗಳ ಅಭಿವೃದ್ಧಿ ಕೆಲಸ ಮಾಡಿರುವುದು ಮತದಾರರ ಮೇಲೆ ಪ್ರಭಾವ ಬೀರುತ್ತಿರುವ ಪ್ರಮುಖ ಅಂಶಗಳು. ಇನ್ನು ಕಾಂಗ್ರೆಸ್​ಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಸ್ವಪಕ್ಷೀಯ ಶಾಸಕರ ಅಭಿವೃದ್ಧಿ ಕೆಲಸಗಳು, ನಿರಂತರ ನಾನಾ ಸಮುದಾಯಗಳ ಓಲೈಕೆಯು ಅನುಕೂಲಕರವಾಗಿದೆ.
ಮೌನ ಸಾಧನೆ, ಮತದಾರರ ವೇದನೆಸಂಸತ್​ನಲ್ಲಿ ಸಂಸದರ ಮೌನ ಸಾಧನೆ ಕ್ಷೇತ್ರದಲ್ಲಿ ಆಕ್ರೋಶಕ್ಕೆ ಎಡೆ ಮಾಡಿದೆ. ದಾಬಸ್​ಪೇಟೆಯಿಂದ ಹೊಸಕೋಟೆವರೆಗೆ 80 ಕಿ.ಲೋ. ಮೀಟರ್ ಉದ್ದದ ದಶಪಥ ರಸ್ತೆ ನಿರ್ವಣದ 2,756 ಕೋಟಿ ರೂ. ವೆಚ್ಚದ ಕಾಮಗಾರಿ, ಬೆಂಗಳೂರು-ಚೆನೈ ಸೂಪರ್ ಎಕ್ಸ್​ಪ್ರೆಸ್ ಕಾರಿಡಾರ್ 267 ಕಿ.ಮೀ ಉದ್ದದ ರಸ್ತೆಯ 17,000 ಕೋಟಿ ರೂ. ವೆಚ್ಚದ ಕಾಮಗಾರಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 173.13 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳು, ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಡಿ 17 ಕೋಟಿ ರೂ. ವೆಚ್ಚದಲ್ಲಿ 380 ಕಾಮಗಾರಿಗಳು, ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 118 (ಎಸ್ಸಿ ಜನಸಂಖ್ಯೆಯಾಧಾರಿತ) ಮತ್ತು 13 (ಎಸ್ಟಿ ಜನಸಂಖ್ಯೆ) ಗ್ರಾಮಗಳಲ್ಲಿ 33.60 ಕೋಟಿ ರೂ. ವೆಚ್ಚದ ಕಾಮಗಾರಿಗಳ ನಿರ್ವಹಣೆ, ಸಂಸದರ ಆದರ್ಶ ಗ್ರಾಮ ಯೋಜನೆಯಡಿ ತಲಾ 1 ಕೋಟಿ ರೂ. ವೆಚ್ಚದಲ್ಲಿ 3 ಗ್ರಾಮಗಳ ಅಭಿವೃದ್ಧಿಯು ನನ್ನ ಸಾಧನೆ ಎಂಬುದಾಗಿ ಸಂಸದರು ಹೇಳಿಕೊಂಡಿದ್ದಾರೆ.
ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − five =
Remember me
