ಹಾಸನ:ಎಲ್ಲರಿಗು ತಿಳಿದಿರುವಂತೆ ಹಾಸನ ಜಿಲ್ಲೆ ಜೆಡಿಎಸ್​ ಪಕ್ಷದ ಮೂಲ ಸ್ಥಾನ ಮತ್ತು ಒಕ್ಕಲಿಗರ ಭಧ್ರಕೋಟೆ. ಚುನಾವಣೆ ಅಂತಾ ಬಂದಾಗ ಸದಾ ರಾಜ್ಯದ ಜನರ ಗಮನ ಸೆಳೆಯುವ ಹಾಸನದಲ್ಲಿ ಲೋಕಸಭಾ ಚುನಾವಣಾ ಕಾವು ರಂಗೇರಿದೆ. ಇಲ್ಲಿ 90ರ ದಶಕದಿಂದಲೂ ಎಚ್.ಡಿ. ದೇವೇಗೌಡ ಕುಟುಂಬ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ.
ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು ಒಟ್ಟು ಐದು ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. 2009ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಜಯಗಳಿಸಿದ್ದ ಎಚ್.ಡಿ. ದೇವೇಗೌಡ್ರು 2019ರ ಚುನಾವಣೆಯಲ್ಲಿ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣರಿಗೆ ಕ್ಷೇತ್ರವನ್ನು ಬಿಟ್ಟು ಕೊಟ್ಟು ತುಮಕೂರು ಕ್ಷೇತ್ರದಿಂದ ಸ್ಫರ್ಧೆ ಮಾಡಿ ಪರಾಭವಗೊಂಡು ನಂತರ ರಾಜ್ಯಸಭೆಗೆ ಆಯ್ಕೆಯಾದರು.
ಕಳೆದ ನಾಲ್ಕು ಲೋಕಸಭಾ ಚುನಾವಣೆಯ ಲೆಕ್ಕಚಾರ* 2004-ಎಚ್.ಡಿ.ದೇವೇಗೌಡ* 2009-ಎಚ್.ಡಿ.ದೇವೇಗೌಡ* 2014-ಎಚ್.ಡಿ.ದೇವೇಗೌಡ* 2019 – ಪ್ರಜ್ವಲ್ ರೇವಣ್ಣ
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು* ಹಾಸನ* ಅರಕಲಗೂಡು* ಹೊಳೆನರಸೀಪುರ* ಶ್ರವಣಬೆಳಗೊಳ* ಅರಸೀಕೆರೆ* ಬೇಲೂರು* ಆಲೂರು-ಸಕಲೇಶಪುರ* ಕಡೂರು
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು* ಹಾಸನ -ಸ್ವರೂಪ್ ಪ್ರಕಾಶ್ (ಜೆಡಿಎಸ್)* ಅರಕಲಗೂಡು – ಎ.ಮಂಜು (ಜೆಡಿಎಸ್)* ಹೊಳೆನರಸೀಪುರ-ಎಚ್.ಡಿ. ರೇವಣ್ಣ (ಜೆಡಿಎಸ್)* ಶ್ರವಣಬೆಳಗೊಳ -ಸಿ.ಎನ್.ಬಾಲಕೃಷ್ಣ (ಜೆಡಿಎಸ್)* ಅರಸೀಕೆರೆ -ಕೆ.ಎಂ. ಶಿವಲಿಂಗೇಗೌಡ (ಕಾಂಗ್ರೆಸ್)* ಬೇಲೂರು -ಎಚ್.ಕೆ. ಸುರೇಶ್ (ಬಿಜೆಪಿ)* ಆಲೂರು-ಸಕಲೇಶಪುರ -ಸಿಮೆಂಟ್ ಮಂಜು (ಬಿಜೆಪಿ)* ಕಡೂರು -ಕೆ.ಎಸ್.ಆನಂದ್ (ಕಾಂಗ್ರೆಸ್)
ಕ್ಷೇತ್ರದ ಜಾತಿವಾರು ಲೆಕ್ಕಚಾರ* ಒಕ್ಕಲಿಗರು- 4,90,000* ದಲಿತರು – 3,50,000* ಲಿಂಗಾಯತರು -2,70,000* ಕುರುಬರು- 1,70,000* ಮುಸ್ಲಿಂ – 1,50,000* ಇತರೆ – 2,00,000ಒಟ್ಟು- 17,06,404
ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿರುವ ಹೆಸರುಗಳುಶ್ರೇಯಸ್ ಪಟೇಲ್ಶ್ರೇಯಸ್ ಪಟೇಲ್ ಅವರು 2023 ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಫರ್ಧೆ ಮಾಡಿದ್ರು. ಆದ್ರೆ ಕೇವಲ ಅಲ್ಪ ಮತಗಳ ಅಂತರರಿಂದ ಎಚ್.ಡಿ.ರೇವಣ್ಣ ವಿರುದ್ಧ ಸೋಲನ್ನು ಅನುಭವಿಸಿದರು. ಆದ್ರೆ, ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಲೋಕ ಕಣಕ್ಕೆ ಇಳಿಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ.
ಮೈತ್ರಿ ಪಕ್ಷದ ವಲಯದಲ್ಲಿ ಕೇಳಿ ಬರತ್ತಿರುವ ಹೆಸರುಗಳು* ಪ್ರಜ್ವಲ್ ರೇವಣ್ಣ* ಸಿ.ಎನ್. ಮಂಜುನಾಥ್* ಪ್ರೀತಂಗೌಡ
ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ಲಸ್* ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು* ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಮೂಡದ ಹೊಂದಾಣಿಕೆ* ಜೆಡಿಎಸ್ ಕುಟುಂಬ ರಾಜಕಾರಣ
ಕ್ಷೇತ್ರದಲ್ಲಿ ಕಾಂಗ್ರೆಸ್ ಮೈನಸ್* ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ನಾಯಕರು ಇಲ್ಲದಿರುವುದು* ಜಿಲ್ಲಾ ಕಾಂಗ್ರೆಸ್ ಮುಖಂಡರಲ್ಲೇ ಹೊಂದಾಣಿಕೆ ಇಲ್ಲದಿರುವುದು* ಸ್ವಪಕ್ಷೀಯರ ವಿರುದ್ಧ ಪದೇಪದೆ ಬಹಿರಂಗ ಹೇಳಿಕೆ ನೀಡುವುದು* ಕೆ.ಎಂ.ಶಿವಲಿಂಗೇಗೌಡ ಹಾಗೂ ಬಿ. ಶಿವರಾಂ ಮುನಿಸು
ಕ್ಷೇತ್ರದಲ್ಲಿ ಜೆಡಿಎಸ್ ಪ್ಲಸ್* ಎಚ್.ಡಿ. ದೇವೇಗೌಡರ ಮೇಲಿನ ಅನುಕಂಪ* ಸತತ ಚುನಾವಣೆಯಲ್ಲಿ ಸೋಲು ಕಂಡಿರುವುದರಿಂದ ಅನುಕಂಪ* ಬಿಜೆಪಿ ಮತಗಳ ಬೆಂಬಲ
ಕ್ಷೇತ್ರದಲ್ಲಿ ಜೆಡಿಎಸ್ ಮೈನಸ್​* ಎಚ್.ಡಿ. ರೇವಣ್ಣ ಕುಟುಂಬದ ಮೇಲೆ ಜನರಲ್ಲಿ ಅಸಮಾಧಾನ* ಮೈತ್ರಿ ಪಕ್ಷ ಬಿಜೆಪಿ ಜತೆಗೆ ಹೊಂದಾಣಿಕೆಯಾಗದಿರುವುದು* ಕಳೆದ ಚುನಾವಣೆ ಬಳಿಕ ಜನರಿಗೆ ಸಿಗದ ಸಂಸದರು
ಈಗಾಗಲೇ ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ಮೈತ್ರಿ ಮಾಡಿಕೊಂಡಿರೋದು ಎಲ್ಲಾರಿಗೂ ಗೊತ್ತಿರುವ ಸಂಗತಿ. ಒಂದು ಮೂಲಗಳ ಪ್ರಕಾರ ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಸ್ಫರ್ಧೆ ಮಾಡೋದು ಪಕ್ಕ ಆಗಿದೆ. ಆದ್ರೆ ಹಾಸನದಲ್ಲಿ ಮಾತ್ರ ಪರಿಸ್ಥಿತಿ ಬೇರೆನೇ ಇದೆ. ಕಳದೆ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿಯ ಪ್ರೀತಂಗೌಡ ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಬಲ ಆಕಾಂಕ್ಷಿ. ಆದ್ರೆ ಕುಮಾರಸ್ವಾಮಿ ಪ್ರೀತಂಗೌಡ ನನ್ನ ಸಹೋದರನಿದ್ದಂತೆ ಟಿಕೆಟ್ ಬೇಕು ಅಂದ್ರೆ ಇಬ್ಬರೂ ಕುಳಿತುಕೊಂಡು ಮಾತನಾಡುತ್ತೇವೆ ಅಂತಾ ಹೇಳಿಕೆ ನೀಡಿದರು. ಕುಮಾರಸ್ವಾಮಿಯವರ ಈ ಹೇಳಿಕೆಗೆ ಖಡಕ್ ಆಗಿಯೇ ಕೌಂಟರ್ ಕೊಟ್ಟಿದ್ದಾರೆ ಪ್ರೀತಂಗೌಡ.
ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್!ಒಂದು ಮೂಲಗಳ ಪ್ರಕಾರ ಈ ಬಾರಿ ಹಾಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಜೆಡಿಎಸ್ ಪಕ್ಷದ ಆಂತರಿಕ ಸರ್ವೆಯ ಪ್ರಕಾರ ಕ್ಷೇತ್ರದಲ್ಲಿ ಪ್ರಜ್ವಲ್ ಪರ ಇಲವು ಕಡಿಮೆ ಆಗಿದೆ ಅಂತಾ ಹೇಳಲಾಗ್ತಿದೆ. ಆದ್ರೆ ಕ್ಷೇತ್ರ ಕಾರ್ಯಕರ್ತರು ಹಾಗೂ ಮುಖಂಡರುಗಳು ಇತ್ತೀಚಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನ ಭೇಟಿಯಾಗಿ ನಿಮ್ಮ ಅಳಿಯ ಡಾ.ಮಂಜುನಾಥ್​ರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ರೆ ಗೆಲುವು ಸುಲಭ ಅಂತಾ ಹೇಳಿದ್ದಾರೆ ಎನ್ನಲಾಗ್ತಿದೆ.

ಲೋಕ ಸಮರ 2024: ಗಡಿನಾಡಲ್ಲಿ ಶುರುವಾಗಿದೆ ಹೈವೋಲ್ಟೇಜ್ ಪಾಲಿಟಿಕ್ಸ್! ಕುಂದಾನಗರಿಯ ಸಿಹಿ ಯಾರಿಗೆ?

ಲೋಕ ಸಮರ 2024: ಸಕ್ಕರೆ ನಾಡಲ್ಲಿ ನಿಖಿಲ್​ ಸ್ಪರ್ಧೆ ಫಿಕ್ಸಾ? ಅಖಾಡಕ್ಕೆ ರಮ್ಯಾ? ಸುಮಲತಾ ಕಥೆ ಏನು?

ಲೋಕಸಭಾ ಸಮರ 2024: ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿ BJP, ಹೊಸ ಪ್ರಯೋಗಕ್ಕೆ ಮುಂದಾಗುತ್ತಾ ಕಮಲ ಪಡೆ?

ಲೋಕಸಭಾ ಚುನಾವಣೆ 2024: ಬೊಮ್ಮಾಯಿ ಸ್ಪರ್ಧೆ ಫಿಕ್ಸಾ? ಯಾರಿಗೆ ‘ಕೈ’ ಟಿಕೆಟ್​? ಯಾರೆಲ್ಲ ಆಕಾಂಕ್ಷಿಗಳಿದ್ದಾರೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 2 =
Remember me
